ಸಾಮಾನ್ಯವಾಗಿ ಸಂಕಷ್ಟ ಚತುರ್ಥಿ ದಿನದಂದು ವಿಘ್ನ ನಿವಾರಕನನ್ನು ಭಕ್ತಿಯಿಂದ ಬೇಡಿಕೊಳ್ಳುತ್ತೇವೆ. ನಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುವ, ವಿಘ್ನ ನಿವಾರಕನೆಂದೇ ಹೆಸರು ಪಡೆದಿರುವ ಗಣೇಶನ ಮೊರೆ ಹೋಗುವ ಪದ್ಧತಿ ಮೊದಲಿನಿಂದಲೂ ಬಂದಿದೆ. ಅದರಲ್ಲಿಯೂ ವಿಶೇಷವಾಗಿ ಅಂಗಾರಕ ಸಂಕಷ್ಟ ಚತುರ್ಥಿ ನಾಳೆ (ಜುಲೈ 27)ರಂದು ಬಂದಿದೆ. ಮಂಗಳವಾರದಂದು ಸಂಕಷ್ಟ ಚತುರ್ಥಿ ಆಚರಿಸುತ್ತಿರುವುದರಿಮದ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಶ್ರೇಷ್ಠ ದಿನದಂದು ವಿನಾಯಕ ಧ್ಯಾನ ಮಾಡಿದರೆ ಸಂಕಷ್ಟಗಳೆಲ್ಲಾ ಪರಿಹಾರವಾಗುವುದು ಎಂಬ ನಂಬಿಕೆಯ ಜತೆಗೆ ಆಚರಣೆ ಮೊದಲಿನಿಂದಲೂ ಬಂದಂಥದ್ದು.
ಸಂಕಷ್ಟ ಚತುರ್ಥಿ ದಿನದಂದು ಬೆಳಿಗ್ಗೆ ಬೇಗನೆ ಇದ್ದು, ಶುಭ್ರ ವಸ್ತ್ರದಲ್ಲಿ ಗಣೇಶನ ಅರಾಧನೆ ಮಾಡಬೇಕು. ಈ ದಿನ ಉಪವಾಸವಿದ್ದು ಗಣೇಶನ ಸ್ತುತಿ, ಪ್ರಾರ್ಥನೆ ಮಾಡಲಾಗುವುದು. ವಿನಾಯಕನಿಗೆ ಇಷ್ಟವಾದ ಮೋದಕ ತಯಾರಿಸಿ ನೈವೇದ್ಯ ನೀಡಲಾಗುವುದು. ಸಾಮಾನ್ಯವಾಗಿ ಭಕ್ತರು ಇಡೀ ದಿನ ಉಪವಾಸ ಕೈಗೊಳ್ಳುತ್ತಾರೆ. ಅನಾರೋಗ್ಯ ಸಮಸ್ಯೆ ಇರುವವರು ಹಾಲು, ಹಣ್ಣುಗಳನ್ನು ಸೇವಿಸಿ. ತಂಬಾಕು, ಎಲೆ, ಅಡಿಕೆ, ಸುಣ್ಣದಿಂದ ದೂರವಿರಿ. ಗಣೇಶನ ಭಜನೆ ಜತೆಗೆ ಮಂತ್ರಗಳನ್ನು ಪಠಿಸಿ. ಓಂ ಗಣೇಶಾಯ ನಮಃ ಮಂತ್ರವನ್ನು ಪಠಿಸಬಹುದು.
ಮುಹೂರ್ತ: ಚತುರ್ಥಿ ತಿಥಿ ಆರಂಭ: ಜುಲೈ 26 ರಾತ್ರಿ 2:54 ಚತುರ್ಥಿ ತಿಥಿ ಮುಕ್ತಾಯ: ಜುಲೈ 28, ಮಧ್ಯಾಹ್ನ 2:28
ಸಾಮಾನ್ಯವಾದ ಎಲ್ಲಾ ಸಂಕಷ್ಟ ಚತುರ್ಥಿಗಿಂತ ಅಂಗಾರಕ ಸಂಕಷ್ಟ ಚತುರ್ಥಿ ಅತ್ಯಂತ ಪವಿತ್ರ ದಿನವೆಂದು ಹೇಳಲಾಗುತ್ತದೆ. ಗಣೇಶನ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಈ ದಿನ ಕಟ್ಟುನಿಟ್ಟಾದ ವ್ರತ ಕೈಗೊಂಡು ಭಕ್ತಿಯಿಂದ ವಿನಾಯಕನನ್ನು ಆರಾಧಿಸಲಾಗುತ್ತದೆ. ಈ ದಿನ ವಿಘ್ನ ನಿವಾರಕ ವಿನಾಯಕನ ಧ್ಯಾನ ಮಾಡಿದರೆ ಸಕಲ ಸಂಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ. ಆದ್ದರಿಂದ ಭಕ್ತರು ಈ ದಿನ ವಿಶೇಷವಾಗಿ ಗಣೇಶನಿಗೆ ಪೂಜೆ ಸಲ್ಲಿಸುವುದರ ಜತೆಗೆ ತಮ್ಮ ಬೇಡಿಕೆಗಳನ್ನು ವಿನಾಯಕನ ಮುಂದಿಡುತ್ತಾರೆ.
ಇದನ್ನೂ ಓದಿ:
ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಈ ಪವಿತ್ರ ದಿನದ ಮಹತ್ವ ನೀವು ತಿಳಿಯಲೇ ಬೇಕು
Sankashti Chaturthi 2021: ಇಂದು ಸಂಕಷ್ಟ ಚತುರ್ಥಿ; ಈ ದಿನದ ವಿಶೇಷತೆ ಜತೆಗೆ ಪೂಜಾ ವಿಧಿ-ವಿಧಾನ ತಿಳಿಯಿರಿ