ಇಂದು ಅಂಗಾರಕ ಸಂಕಷ್ಟ ಚತುರ್ಥಿ; ವಿಘ್ನ ನಿವಾರಕನಲ್ಲಿ ಸಂಕಷ್ಟವನ್ನೆಲ್ಲ ದೂರ ಮಾಡು ಎಂದು ಬೇಡಿಕೊಳ್ಳುವ ದಿನವಿದು
ಸಂಕಷ್ಟಗಳನ್ನು ದೂರ ಮಾಡು ಎಂದು ಭಕ್ತರು ವಿನಾಯಕನಲ್ಲಿ ಮೊರೆ ಹೋಗುವ ದಿನವಿದು. ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸವಿದ್ದು ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಕೈಗೊಳ್ಳಲಾಗುವುದು.
ಇಂದು ಅಂಗಾರಕ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಮಂಗಳವಾರದಂದು ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ(Angaraki sankashti chaturthi) ಎಂದು ಕರೆಯಲಾಗುತ್ತದೆ. ಇಂದು ಗಣೇಶನಲ್ಲಿ(Lord Ganesha) ಬೇಡಿಕೊಳ್ಳುವ ಪ್ರತಿಯೊಂದೂ ಈಡೇರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಭಕ್ತರಲ್ಲಿದೆ. ಮನೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸಿ, ಹೂವು ಮತ್ತು ದರ್ಬೆಯಿಂದ ಅಲಂಕಾರಗೊಳಿಸಿ ಆರತಿ ಬೆಳಗುವ ಮೂಲಕ ಈ ವಿಶೇಷ ದಿನವನ್ನು ಆಚರಿಸಿಲಾಗುತ್ತದೆ.
ಸಾಮಾನ್ಯವಾಗಿ ಸಂಕಷ್ಟ ಚತುರ್ಥಿದಿನದಂದು ಭಕ್ತಿಯಿಂದ ವಿಘ್ನ ನಿವಾರಕನಲ್ಲಿ ಬೇಡಿಕೊಂಡರೆ ಸಕಲವೂ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಜತೆಗೆ ಸಂಕಷ್ಟಗಳಿಗೆ ಪರಿಹಾರ ನೀಡುವಂತೆ ಭಕ್ತರು ಭಕ್ತಿಯಿಂದ ಬೇಡಿಕೊಳ್ಳುವ ದಿನವಿದು. ಅದರಲ್ಲಿಯೂ ವಿಶೇಷವಾಗಿ ಮಂಗಳವಾರದಂದು ಬರುವ ಸಂಕಷ್ಟ ಚತುರ್ಥಿಯಂದು (ಅಂಗಾರಕ ಸಂಕಷ್ಟ ಚತುರ್ಥಿ) ವಿನಾಯಕನನ್ನು ಸ್ಮರಿಸಿದರೆ ಜೀವನದಲ್ಲಿ ಶಾಂತಿ, ನೆಮ್ಮದಿಯ ಜತೆಗೆ ಸಕಲವೂ ಈಡೇರುತ್ತದೆ.
ಸಂಕಷ್ಟಗಳನ್ನು ದೂರ ಮಾಡು ಎಂದು ಭಕ್ತರು ವಿನಾಯಕನಲ್ಲಿ ಮೊರೆ ಹೋಗುವ ದಿನವಿದು. ಬೆಳಗ್ಗೆಯಿಂದ ಸಂಜೆಯವರೆಗೆ ಉಪವಾಸವಿದ್ದು ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಕೈಗೊಳ್ಳಲಾಗುವುದು. ಇಷ್ಟವಾದ ಮೋದಕ ಮಾಡಿ ನೈವೇದ್ಯ ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುವುದು.
ಪಾಲಿಸಬೇಕಾದ ಕೆಲವು ನಿಯಮಗಳು
*ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ
*ಉಪವಾಸ ಕೈಗೊಳ್ಳಿ. ಆರೋಗ್ಯ ಸಮಸ್ಯೆ ಇರುವವರು ಹಣ್ಣು-ಹಂಪಲು ಸೇವಿಸಬಹುದು
*ತಂಬಾಕು, ಸುಣ್ಣ, ಎಲೆ-ಅಡಿಕೆಯನ್ನು ಸೇವಿಸಬೇಡಿ
*ಬೆಳ್ಳುಳ್ಳಿ, ಈರುಳ್ಳಿಯಂತಹ ಪದಾರ್ಥಗಳಿಂದ ದೂರವಿರಿ
*ಸಿಗರೇಟ್, ಮದ್ಯ ಸೆವನೆಯನ್ನು ತ್ಯಜಿಸಿ
ಆಚರಣೆ
*ಗಣೇಶನ ವಿಗ್ರಹವನ್ನು ಶುಭ್ರವಾದ ನೀರಿನಲ್ಲಿ ತೊಳೆಯಿರಿ
*ಹೂವುಗಳಿಂದ ಅಲಂಕಾರಗೊಳಿಸಿ
*ಆರತಿ ಬೆಳಗುವ ಮೂಲಕ ಪೂಜೆ ಮಾಡಿ
*ನೈವೇದ್ಯಕ್ಕಾಗಿ ಗಣೇಶನಿಗೆ ಇಷ್ಟವಾದ ತಿಂಡಿಗಳನ್ನು ಮಾಡಿ
*ಗಣೇಶನ ಸ್ತುತಿ, ಭಜನೆ, ಸಾಂಪ್ರದಾಯಿಕ ಹಾಡುಗಳು ಜತೆಗೆ ಮಂತ್ರಗಳನ್ನು ತಪ್ಪಿಲ್ಲದೆ ಪಠಿಸಿ
*ನಿಮ್ಮ ಬೇಡಿಕೆಗಳನ್ನು ಬೇಡಿಕೊಳ್ಳುವುದರ ಜತೆಗೆ 21 ನಮಸ್ಕಾರ ಮಾಡುವ ಮೂಲಕ ಗಣೇಶನನ್ನು ಸ್ಮರಿಸಿ
ಇದನ್ನೂ ಓದಿ:
Sankashti Chaturthi 2021: ಇಂದು ಸಂಕಷ್ಟ ಚತುರ್ಥಿ; ಈ ದಿನದ ವಿಶೇಷತೆ ಜತೆಗೆ ಪೂಜಾ ವಿಧಿ-ವಿಧಾನ ತಿಳಿಯಿರಿ