ಕಲಿಯುಗದ ಬಗ್ಗೆ ಪಾಂಡವರಿಗೆ ಕೃಷ್ಣ ಪರಮಾತ್ಮ ಹೇಳಿದ ಕಟು ಸತ್ಯಗಳೇನು?

krishna on Kaliyuga: ಕಲಿಯುಗದ ಬಗ್ಗೆ ಕೃಷ್ಣ ಹೇಳಿದ್ದು ಏನು? ಕಲಿಯುಗದ ಬಗ್ಗೆ ಪಾಂಡವರ ಗೊಂದಲ ಪರಿಹಾರ ಮಾಡಿದ್ದು ಹೇಗೆ? ಕೃಷ್ಣ ಕಲಿಯುಗದ ಬಗ್ಗೆ ತಿಳಿಯಲು ಪಾಂಡವರನ್ನು ಕಾಡಿಗೆ ಕಳುಹಿಸಿದ್ದು ಏಕೆ? ಎಂಬ ಅನೇಕ ರೋಚಕ ಪ್ರಶ್ನೆಗಳ ಹಿಂದಿರುವ ಅಮೂಲ್ಯವಾದ ಜೀವನದ ಸಾರದ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಕಲಿಯುಗದ ಬಗ್ಗೆ ಪಾಂಡವರಿಗೆ ಕೃಷ್ಣ ಪರಮಾತ್ಮ ಹೇಳಿದ ಕಟು ಸತ್ಯಗಳೇನು?
ಕಲಿಯುಗದ ಬಗ್ಗೆ ಪಾಂಡವರಿಗೆ ಕೃಷ್ಣ ಪರಮಾತ್ಮ ಹೇಳಿದ ಕಟು ಸತ್ಯಗಳೇನು?
Follow us
TV9 Web
| Updated By: ಆಯೇಷಾ ಬಾನು

Updated on: Jul 29, 2021 | 6:58 AM

ಪುರಾಣಗಳು ಹಿಂದೂ ಸಂಪ್ರದಾಯ, ಸಾಹಿತ್ಯ ಮತ್ತು ಚಿಂತನೆಯ ಮೇಲೆ ಪ್ರಮುಖ ಪ್ರಭಾವ ಬೀರುತ್ತವೆ. ಈಗಿನ ಮಾನವ ಜೀವನ ವಿಧಾನಕ್ಕೆ ಇವು ದಾರಿ ಮಾಡಿಕೊಡುತ್ತವೆ. ಜೀವನದ ಅದೆಷ್ಟೂ ಸಮಸ್ಯೆಗಳಿಗೆ ಪುರಾಣಗಳಿಲ್ಲಿ ಉತ್ತರ ಕಂಡುಕೊಂಡಿರುವವರು ಅದೆಷ್ಟೋ ಮಂದಿ ಇದ್ದಾರೆ. ಜೀವನದ ಸಾರ ಅರಿತವರು ಸುಖಕರ ಜೀವನ ನಡೆಸುತ್ತಿದ್ದಾರೆ. ಇಂತಹ ಮಹಾಕಾವ್ಯಗಳಲ್ಲಿ ಒಂದೆಂದರೆ ಶ್ರೀ ಭಗವದ್ಗೀತೆ. ದ್ವಾಪರಾ ಯುಗದ ನಂತರ ಕಲಿಯುಗದಲ್ಲಿ ಮನುಷ್ಯನ ಜೀವನ ವಿಧಾನದ ಬಗ್ಗೆ ಒಂದು ಕಥೆಯಿದೆ, ಇದು ಎಲ್ಲಾ ವೇದಾಂತಗಳ ಸಾರ ಎಂದು ಹೇಳಲಾಗುತ್ತದೆ.

ಕಲಿಯುಗದ ಬಗ್ಗೆ ಕೃಷ್ಣ ಹೇಳಿದ್ದು ಏನು? ಕಲಿಯುಗದ ಬಗ್ಗೆ ಪಾಂಡವರ ಗೊಂದಲ ಪರಿಹಾರ ಮಾಡಿದ್ದು ಹೇಗೆ? ಕೃಷ್ಣ ಕಲಿಯುಗದ ಬಗ್ಗೆ ತಿಳಿಯಲು ಪಾಂಡವರನ್ನು ಕಾಡಿಗೆ ಕಳುಹಿಸಿದ್ದು ಏಕೆ? ಎಂಬ ಅನೇಕ ರೋಚಕ ಪ್ರಶ್ನೆಗಳ ಹಿಂದಿರುವ ಅಮೂಲ್ಯವಾದ ಜೀವನದ ಸಾರದ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ. ಒಮ್ಮೆ ಪಂಚ ಪಾಂಡವರು ಕಲಿಯುಗ ಹೇಗೆ ಇರುತ್ತದೆ. ಅಲ್ಲಿನ ಜನ ಹೇಗೆ, ಅವರ ವರ್ತನೆ ಹೇಗಿರುತ್ತದೆ ಎಂಬ ಬಗ್ಗೆ ಶ್ರೀ ಕೃಷ್ಣನಿಗೆ ಕೇಳುತ್ತಾರೆ. ಈ ವೇಳೆ ಶ್ರೀಕೃಷ್ಣ ಮುಗುಳ್ನಕ್ಕು ಯುದಿಷ್ಠಿರ, ಅರ್ಜುನ, ಭೀಮ, ನಕುಲ, ಸಹದೇವ, ನಿಮ್ಮ ಬಾಣಗಳನ್ನು ನಾಲ್ಕು ದಿಕ್ಕುಗಳಿಗೆ ಹೊಡೆಯಿರಿ. ಬಳಿಕ ಆ ಬಾಣಗಳನ್ನು ಹುಡುಕಿಕೊಂಡು ಹೋಗಿ ಅಲ್ಲಿ ನಿಮಗೆ ಕಾಣುವುದನ್ನು ನನ್ನ ಬಳಿ ಹೇಳಿ ಎಂದು ಭಗವಾನ್ ಶ್ರೀ ಕೃಷ್ಣ ಹೇಳಿದರು. ಅದರಂತೆಯೆ, ನಾಲ್ವರು ನಾಲ್ಕು ಬಾಣಗಳನ್ನು ನಾಲ್ಕು ದಿಕ್ಕುಗಳಿಗೆ ಹೊಡೆದು ಆ ಬಾಣಗಳನ್ನು ತರಲು ಹೋಗುತ್ತಾನೆ. ಬಳಿಕ ಕಾಡಿನಿಂದ ಹಿಂತಿರುಗಿದ ನಾಲ್ಕು ಪಾಂಡವರು ತಾವು ನೋಡಿ ಎಲ್ಲವನ್ನೂ ಕೃಷ್ಣನ ಬಳಿ ಹೇಳುತ್ತಾರೆ. ಆಗ ಶ್ರೀ ಕೃಷ್ಣ ಒಂದೊಂದಾಗಿ ಕಲಿಯುಗದ ಜನರ ವರ್ತನೆ, ಆಸೆ, ಅವರ ಜೀವನದ ಬಗ್ಗೆ ವಿವರಿಸುತ್ತಾನೆ.

ಯುದಿಷ್ಠಿರ ನೋಡಿದ ಎರಡು ಸೊಂಡಲಿನ ಆನೆ ಹೌದು ಶ್ರೀ ಕೃಷ್ಣ ಮೊದಲಿಗೆ ಯುದಿಷ್ಠಿರ ನೀನು ಏನು ನೋಡಿದೆ ಏಂದು ಕೇಳುತ್ತಾನೆ. ಆಗ ನಾನು ಎರಡು ಸೊಂಡಿಲಿನ ಆನೆಯನ್ನು ನೋಡಿದೆ ಎಂದು ಹೇಳುತ್ತಾನೆ. ಅದಕ್ಕೆ ಉತ್ತರಿಸಿದ ಶ್ರೀ ಕೃಷ್ಣ ಈ ಆನೆಯೇ ರೀತಿಯೇ ಕಲಿಯುಗದಲ್ಲಿ ಮನುಷ್ಯರಿಗೆ ಬುದ್ದಿ ಇರುತ್ತೆ. ಕಲಿಯುಗದಲ್ಲಿ ಆಳುವವರು ಹೇಳೊದೆ ಒಂದು ಮಾಡೋದೆ ಒಂದು ಪ್ರಜೆಗಳನ್ನು ಎಲ್ಲಾ ರೀತಿಯಲ್ಲಿ ಶೋಷಣೆ ಮಾಡುತ್ತಾರೆ ಎಂದು ಹೇಳುತ್ತಾನೆ.

ಭೀಮನ ಕಣ್ಣಿಗೆ ಬಿದ್ದಿತ್ತು ಗೋವಿನ ಪ್ರೀತಿ ಭೀಮ ಕಾಡಿಗೆ ಹೋದಾಗಲು ಒಂದು ವಿಚಿತ್ರವನ್ನು ನೋಡಿಕೊಂಡು ಬಂದಿದ್ದ. ಹಸುವೊಂದು ತನ್ನ ಮರಿಯನ್ನ ಯಾವ ರೀತಿ ನೆಕ್ಕುತ್ತಿತ್ತು ಅಂದರೆ ಆ ಮಗುವಿನ ಚರ್ಮ ಹರಿದು ರಕ್ತ ಬರುತಿತ್ತು. ಇದನ್ನು ಭೀಮ ಕೃಷ್ಣನ ಬಳಿ ಆಶ್ಚರ್ಯದಿಂದ ಹೇಳುತ್ತಾನೆ. ಆಗ ಉತ್ತರಿಸುವ ಶ್ರೀ ಕೃಷ್ಣ ಏ ಭೀಮ ಕಲಿಯುಗದಲ್ಲಿ ಮನುಷ್ಯರು ತಮ್ಮ ಮಕ್ಕಳನ್ನ ಯಾವ ಮಟ್ಟಕ್ಕೆ ಪ್ರೀತಿಸುವರು ಅಂದರೆ ಮಕ್ಕಳ ಮಾನಸಿಕ ಬೆಳವಣಿಗೆ ನಿಂತು ಹೋಗುತ್ತೆ. ಬೇರೆಯವರ ಮಕ್ಕಳು ಸಾದು ಸಂತ ಆದರೆ ಹೋಗಿ ಆಶೀರ್ವಾದ ಪಡೆಯುತ್ತಾರೆ, ಅದೇ ತನ್ನ ಮಕ್ಕಳು ಸಾದು ಸನ್ಯಾಸಿ ಆದರೆ ದುಃಖಪಡುತ್ತಾರೆ‌. ತನ್ನ ಮಗ ಯಾವ ಹಾದಿಯಲ್ಲಿ ಸಾಗುತ್ತಿದ್ದಾನೆ ಅಂತ ಅಳುತ್ತಾರೆ. ಕಲಿಯುಗದಲ್ಲಿ ಮನುಷ್ಯರು ಮಕ್ಕಳನ್ನ ಕೇವಲ ಪ್ರೀತಿ ಮತ್ತು ಕುಟುಂಬದ ಬಂಧನದಲ್ಲಿ ಬೆಸೆದು ಇಡುತ್ತಾರೆ. ಆ ಬಂಧನದಲ್ಲಿ ಮನುಷ್ಯನ ಜೀವನ ಅಂತ್ಯವಾಗುತ್ತದೆ ಅಂತ ಶ್ರೀ ಕೃಷ್ಣ ಹೇಳುತ್ತಾನೆ.

ಅರ್ಜುನ ನೋಡಿದ್ದ ಮಾಂಸಹಾರಿ ದುಷ್ಟಹಕ್ಕಿ ಅರ್ಜುನ ಅರಣ್ಯದಲ್ಲಿ ಒಂದು ಹಕ್ಕಿಯನ್ನು ನೋಡುತ್ತಾನೆ. ಅದರ ರೆಕ್ಕೆಯ ಮೇಲೆ ವೇದ ಮಂತ್ರಗಳನ್ನು ಬರೆಯಲಾಗಿತ್ತು. ಆದರೆ ಆ ಹಕ್ಕಿ ಮನುಷ್ಯನ ಮಾಂಸವನ್ನ ಕುಕ್ಕಿ ಕುಕ್ಕಿ ತಿಂತಾಯಿತ್ತು. ಇದನ್ನು ಕಂಡು ದಂಗಾಗಿ ಹೋಗಿದ್ದ ಅರ್ಜುನ ಇದಕ್ಕೆ ಕಾರಣವೇನು ಎಂದು ಕೃಷ್ಣನ ಬಳಿ ಕೇಳುತ್ತಾನೆ‌. ಆಗ ಕಲಿಯುಗದ ಮೂರನೇ ಕಟು ಸತ್ಯವನ್ನು ಬಿಚ್ಚಿಡುವ ಶ್ರೀ ಕೃಷ್ಣ ಕಲಿಯುಗದಲ್ಲಿ ಜನರು ವಿದ್ವಾಂಸರರ ರೀತಿ ಆಡುತ್ತಾರೆ. ಆದರೆ ಒಬ್ಬರು ಇನ್ನೊಬ್ಬರ ಸಾವಿಗಾಗಿ ಕಾಯುತ್ತಾರೆ. ಒಬ್ಬರು ಬೇರೊಬ್ಬರ ಆಸ್ತಿಯನ್ನ ಒಡೆಯುವ ಬಗ್ಗೆಯೇ ಯೋಚಿಸುತ್ತಾರೆ. ಸಂತರ ವೇಷದಲ್ಲಿ ಇದ್ದುಕೊಂಡು ಲೂಟಿ ಮಾಡುತ್ತಾರೆ. ಕೆಲವೇ ಕೆಲವರು ನಿಜವಾದ ಸಂತರು ಇರುತ್ತಾರೆ ಎಂದು ಶ್ರೀ ಕೃಷ್ಣ ಹೇಳುತ್ತಾನೆ.

ನಕುಲ ನೋಡಿದ್ದ ಬಂಡೆಯ ಬಯಾನಕ ದೃಶ್ಯ ಹೌದು ತನ್ನ ಅಣ್ಣಂದಿರಂತೆ ನಕುಲ ಕೂಡ ವಿಚಿತ್ರವನ್ನು ನೋಡಿದ್ದ ಬೆಟ್ಟವೊಂದರ ಮೇಲಿಂದ ಬಂಡೆ ಕಲ್ಲು ಉರುಳುತ್ತಾ ಇತ್ತು‌, ದೊಡ್ಡ ದೊಡ್ಡ ಮರಗಳಿದ್ದರೂ ಆ ಬಂಡೆ ಕಲ್ಲನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ಒಂದು ಸಣ್ಣ ಪೊದೆ ಆ ಬೃಹತ್ ಗಾತ್ರದ ಕಲ್ಲನ್ನು ತಡೆದು ನಿಲ್ಲಿಸಿತು. ಇದರ ಬಗ್ಗೆ ವಿವರಣೆ ನೀಡಿದ ಕೃಷ್ಣ ಕಲಿಯುಗದಲ್ಲಿ ಜನರ ಬುದ್ದಿ ಕ್ಷೀಣಿಸುತ್ತದೆ, ಜೀವನ ನಾಶವಾಗುತ್ತದೆ. ಇದನ್ನು ತಡೆಯೋ ಶಕ್ತಿ ಹಣ ಹಾಗೂ ಅಧಿಕಾರದಂತ ಮರಕ್ಕೆ ಇಲ್ಲ. ಆದರೆ ಹರಿನಾಮ ಸ್ಮರಣೆಯಂತಹ ಸಣ್ಣ ಪೊದೆಗೆ ಆ ಶಕ್ತಿ ಇದೆ‌. ಹರಿನಾಮ ಸ್ಮರಣೆಯಿಂದ ಜನರ ಬುದ್ದಿ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳುತ್ತಾನೆ.

ಸಹದೇವ ನೋಡಿದ್ದ ಉಳ್ಳವರು, ಇಲ್ಲದವರ ಸತ್ಯ ಇನ್ನೂ ಕೊನೆಯದಾಗಿ ಸಹದೇವ ಅರಣ್ಯದಲ್ಲಿ ಹಲವು ಬಾವಿಗಳನ್ನು ನೋಡಿದ್ದ. ಎಲ್ಲಾ ಬಾವಿಗಳೂ ಹತ್ತಿರವೇ ಇದ್ದರು ಮದ್ಯದಲ್ಲಿ ಒಂದು ಬಾವಿಯಲ್ಲಿ ಬಿಟ್ಟು ಉಳಿದೆಲ್ಲಾ ಬಾವಿಯಲ್ಲಿ ನೀರಿತ್ತು. ಆ ಮದ್ಯದ ಬಾವಿ ಆಳವಾಗಿದ್ದರೂ ಕೂಡ ನೀರು ಇರಲಿಲ್ಲ. ಇದರ ಅರ್ಥ ಏನು ಎಂದು ಕೇಳಿದಾಗ ಉತ್ತರಿಸಿದ ಶ್ರೀ ಕೃಷ್ಣ ಎ ಸಹದೇವ ಕಲಿಯುಗದಲ್ಲಿ ದುಡ್ಡು ಇರುವವರು ತಮ್ಮ ಶೋಕಿಗಾಗಿ, ಮಕ್ಕಳ ಮದುವೆಗೆ, ಉತ್ಸವಕ್ಕೆ ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ಆದರೆ ಹಸಿವಿನಿಂದ ಕಂಗೆಟ್ಟವರಿಗೆ ದುಡ್ಡು ನೀಡಲು ಸಹಾಯ ಮಾಡಲು ಯಾವುದೇ ಅಸಕ್ತಿಯನ್ನು ತೋರಿಸುವುದಿಲ್ಲ. ಕಾಮ, ಮಾಂಸಭಕ್ಷಕ, ಮತ್ತು ಮಧ್ಯಪಾನದಂತಹ ವ್ಯಸನಿಗಳಾಗಿ ದುಡ್ಡು ಕರ್ಚು ಮಾಡುತ್ತಾರೆ. ಇದರಿಂದ ಯಾರೆಲ್ಲ ದೂರ ಇರ್ತಾರೋ ಅವರ ಮೇಲೆ ಕಲಿಯುಗದ ಬದಲಾಗಿ ನೇರವಾಗಿ ಪರಮಾತ್ಮನ ಪ್ರಭಾವ ಇರುತ್ತೆ ಎಂದು ಹೇಳುತ್ತಾನೆ.

ಇದು ಕಲಿಯುಗದ ಬಗ್ಗೆ ಶ್ರೀ ಕೃಷ್ಣ ದ್ವಾಪರಯುಗದಲ್ಲಿ ಹೇಳಿದ್ದ ಕಟುಸತ್ಯಗಳು. ಇನ್ನೂ ಕಲಿಯುಗದ ಅಂತ್ಯದಲ್ಲಿ ಹಿಂಸೆ, ಮೋಸ, ದೌರ್ಜನ್ಯ ಇದೆಲ್ಲವೂ ಮಿತಿಮೀರಿ ಹೋಗಲಿದೆ. ಮನುಷ್ಯ ಆಯುಷ್ಯ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ. ಆಗ ಕಲ್ಕಿ ಅವತಾರ ಎತ್ತಿ ಬರುವ ವಿಷ್ಣು ಅಧರ್ಮವನ್ನು ನಾಶ ಮಾಡಿ‌ ಧರ್ಮ ಸ್ತಾಪನೆ ಮಾಡುತ್ತಾರೆ‌. ನಂತರ ಸತ್ಯಯುಗ ಆರಂಭವಾಗಲಿದೆ‌. ಅಲ್ಲಿ ಧರ್ಮದ ನಾಲ್ಕು ಸ್ತಂಭಗಳು ಮತ್ತೆ ತಲೆಯೆತ್ತಿ ನಿಲ್ಲಲಿವೆ ಎಂದು ಪುರಾಣದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ತೀರ್ಥಯಾತ್ರೆಗೆ ಹೋಗುವ ಮುನ್ನ ಶ್ರೀಕೃಷ್ಣ ಪಾಂಡವರಿಗೆ ಹೇಳಿದ ಈ ವಿಚಾರವನ್ನು ತಪ್ಪದೇ ಓದಿ

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ