AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಗ್ರಹಗಳು ಸಂತುಷ್ಟಗೊಂಡು ನಿಮ್ಮ ಜೀವನದ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಅಂದರೆ ದಿನನಿತ್ಯ ಈ 9 ಅಭ್ಯಾಸ ಬೆಳೆಸಿಕೊಳ್ಳೀ

ನವಗ್ರಹಗಳು ನಮ್ಮ ದೇಹದಲ್ಲಿ ಹಾಗೂ ದಿನನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತಿದ್ದು, ಅವುಗಳ ಗೋಚರದಲ್ಲಿ ನಾವಿರುತ್ತೇವೆ. ಕೆಲವು ಕೆಟ್ಟ ಅಭ್ಯಾಸಗಳಿಂದ ನಾವು ನವಗ್ರಹಗಳ ಅವಕೃಪೆಗೆ ಕಾರಣರಾಗುವ ಸಂಭವೂ ಇರುತ್ತದೆ. ಅವುಗಳಿಗೆ ಪರಿಹಾರ ಇಲ್ಲಿ ತಿಳಿಯಹೇಳಲಾಗಿದೆ.

ನವಗ್ರಹಗಳು ಸಂತುಷ್ಟಗೊಂಡು ನಿಮ್ಮ ಜೀವನದ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಅಂದರೆ ದಿನನಿತ್ಯ ಈ 9 ಅಭ್ಯಾಸ ಬೆಳೆಸಿಕೊಳ್ಳೀ
ನವಗ್ರಹಗಳು ಸಂತುಷ್ಟಗೊಂಡು ನಿಮ್ಮ ಜೀವನದ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಅಂದರೆ ದಿನನಿತ್ಯ ಈ 9 ಅಭ್ಯಾಸ ಬೆಳಸಿಕೊಳ್ಳೀ
TV9 Web
| Updated By: Vinay Bhat|

Updated on: Sep 30, 2021 | 6:53 AM

Share

ನವಗ್ರಹಗಳು ನಮ್ಮ ದೇಹದಲ್ಲಿ ಹಾಗೂ ದಿನನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತಿದ್ದು, ಅವುಗಳ ಗೋಚರದಲ್ಲಿ ನಾವಿರುತ್ತೇವೆ. ಕೆಲವು ಕೆಟ್ಟ ಅಭ್ಯಾಸಗಳಿಂದ ನಾವು ನವಗ್ರಹಗಳ ಅವಕೃಪೆಗೆ ಕಾರಣರಾಗುವ ಸಂಭವೂ ಇರುತ್ತದೆ. ಅವುಗಳಿಗೆ ಪರಿಹಾರ ಇಲ್ಲಿ ತಿಳಿಯಹೇಳಲಾಗಿದೆ.

1. ನಮ್ಮ ಮನೆಗಳಿಗೆ ಯಾರಾದರೂ ಅತಿಥಿ-ಅಭ್ಯಾಗತರು ಬಂದಾಗ ಅವರು ಅತಿಥಿಗಳಿರಲಿ ಅಥವಾ ಕೆಲಸದ ನೌಕರರು/ಆಳುಗಳಿರಲಿ ಅವರಿಗೆ ಕುಡಿಯಲು ಲೋಟದಲ್ಲಿ ಶುದ್ಧ ನೀರು ಅಥವಾ ಹಾಲನ್ನು ಕೊಡಬೇಕು. ಹೀಗೆ ಶುದ್ಧ ನೀರನ್ನು ಕುಡಿಯಲು ಕೊಟ್ಟರೆ ರಾಹು ಗ್ರಹದಿಂದ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಜೀವನದಲ್ಲಿ ಯಾವುದೇ ತೊಂದರೆ/ಅಘಾತಕರ ಘಟನೆಗಳು ಸಂಭವಿಸುವುದಿಲ್ಲ.

2. ಸಿಕ್ಕ ಸಿಕ್ಕ ಜಾಗದಲ್ಲಿ ಉಗುಳುವ ಅಭ್ಯಾಸ ಇರುವವರಿಗೆ ಅಕಸ್ಮಾತ್ ಹೆಸರು- ಗೌರವ ಬಂದಲ್ಲಿ, ಅದು ಬಹಳ ದಿನ ಉಳಿಯಲಾರದು. ಎಲ್ಲೆಂದರೆ ಅಲ್ಲಿ ಉಗುಳಿದರೆ ಬುಧ ಗ್ರಹದ ಅವಕೃಪೆ ಖಚಿತ. ಉಗುಳುವುದನ್ನು ಕೈ ತೊಳೆಯುವ ಬಚ್ಚಲಿನಲ್ಲಿ ಮಾತ್ರ ಮಾಡಬೇಕು. ಆಗ ಮಾತ್ರ ನಿಮ್ಮ ಹೆಸರು ಮತ್ತು ಗೌರವ ಉಳಿಯುತ್ತದೆ.

3. ಕೆಲವರಿಗೆ ತಿಂಡಿ, ತಿನಿಸು, ಊಟ ಮಾಡಿದ ತಟ್ಟೆ/ಪಾತ್ರೆಗಳನ್ನು ಹಾಗೆಯೇ ಬಿಡುವ ಅಭ್ಯಾಸ ಇರುತ್ತದೆ. ಅಂತಹವರಿಗೆ ಜೀವನದಲ್ಲಿ ಗೆಲವು ಕಾಯಂ ಆಗಿ ಸಿಗುವುದಿಲ್ಲ. ಅಂತಹವರು ನಿರಂತರ ಹೋರಾಟ ಮಾಡುತ್ತಿರಬೇಕು. ಆದರೂ ಅವರಿಗೆ ಒಳ್ಳೆಯ ಹೆಸರು ಸಿಗುವುದಿಲ್ಲ. ನೀವು ಉಪಯೋಗಿಸಿದ ತಟ್ಟೆ/ಲೋಟ/ಪಾತ್ರೆಗಳನ್ನು ಬೇಗನೇ ತೊಳೆದು ಅವುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಚಂದ್ರ ಮತ್ತು ಶನಿ ಗ್ರಹಗಳನ್ನು ಗೌರವಿಸಿದಂತಾಗಿ ಅವರುಗಳು ಸಂತೃಪ್ತರಾಗುತ್ತಾರೆ. ಇದರಿಂದ ನಿಮಗೆ ಮನಃಶಾಂತಿ ಸಿಗುತ್ತದೆ ಹಾಗೂ ಕೆಲಸದಲ್ಲಿ ಯಾವುದೇ ಅಡೆ-ತಡೆಗಳು ಇರುವುದಿಲ್ಲ.

4. ನಮ್ಮ ಮನೆಗಳಲ್ಲಿ ಇರುವ ಗಿಡಗಳು ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅವುಗಳಿಗೆ ನಮ್ಮ ಪ್ರೀತಿ ಮತ್ತು ಆರೈಕೆಯ ಅವಶ್ಯಕತೆ ಇರುತ್ತದೆ. ನಿತ್ಯ ಮುಂಜಾನೆ ಮತ್ತು ಸಂಜೆ ಗಿಡಗಳಿಗೆ ನೀರು ಹಾಕುತ್ತಿದ್ದರೆ ಗುರು, ಚಂದ್ರ ಮತ್ತು ಸೂರ್ಯ ಗ್ರಹಗಳನ್ನು ಆರಾಧಿಸಿ ಅವುಗಳ ಅನುಗ್ರಹ ಪಡೆದಂತೆ ಆಗುತ್ತದೆ. ಇದರಿಂದ ನಮಗೆ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವ ಶಕ್ತಿ ಬರುತ್ತದೆ. ದಿನ ನಿತ್ಯ ಮರ ಗಿಡಗಳಿಗೆ ನೀರು ಉಣಿಸುವವರಿಗೆ ಮಾನಸಿಕ ಸಮಸ್ಯೆ/ಖಿನ್ನತೆ, ಮಾನಸಿಕ ಒತ್ತಡಗಳು ಎಂದೆಂದಿಗೂ ಆಗುವುದಿಲ್ಲ.

5. ಯಾರು ತಮ್ಮ ಪಾದರಕ್ಷೆ, ಚಪ್ಪಲಿ, ಷೂ, ಕೈ ಕವಚ ಮತ್ತು ಕಾಲುಚೀಲಗಳನ್ನು ಮನೆಗೆ ಬಂದಾಗ ಎಲ್ಲೆಂದರಲ್ಲಿ ಬಿಟ್ಟಿರುತ್ತಾರೆಯೋ ಅಥವಾ ಎಸೆದಿರುತ್ತಾರೆಯೋ ಅವರಿಗೆ ಅವರ ಶತ್ರುಗಳು ಹೆಚ್ಚಿನ ತೊಂದರೆ ಕೊಡುತ್ತಾರೆ‌. ಮನೆಗೆ ಬಂದಾಗ ಅವುಗಳನ್ನು ಸರಿಯಾದ ಜಾಗದಲ್ಲಿ, ಒಪ್ಪ ಓರಣವಾಗಿ ಇಟ್ಟಲ್ಲಿ ಗುರುವು ಪ್ರಸನ್ನನಾಗಿ ಶತ್ರುಗಳು ದೂರವಾಗಿ ಸಮಾಜದಲ್ಲಿ ನಿಮ್ಮ ಘನತೆ ಗೌರವಗಳು ಹೆಚ್ಚಾಗುತ್ತವೆ.

6. ಹಾಸಿಗೆಯಿಂದ ಮುಂಜಾನೆ ಎದ್ದ ನಂತರ ನಿಮ್ಮ ಹಾಸಿಗೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗೆ ಇಡದೇ, ನೀವು ಎದ್ದ ನಂತರ ಹಾಸಿಗೆಯ ಹೊದಿಕೆ, ನಿಮ್ಮ ಹೊದಿಕೆ, ತಲೆದಿಂಬು ಅಸ್ತವ್ಯಸ್ತವಾಗಿದ್ದರೆ ನಿಮ್ಮನ್ನು ಶನಿ ಮತ್ತು ರಾಹು ಕಾಡುತ್ತವೆ. ನೀವು ನಿತ್ಯ ಧರಿಸುವ ಬಟ್ಟೆಗಳು ಸ್ವಚ್ಛ ಇಲ್ಲದಿದ್ದರೆ ನಿಮ್ಮ ನಿತ್ಯದ ಕೆಲಸ ಕಾರ್ಯಗಳು ಎಂದೆಂದಿಗೂ ಸುಗಮವಾಗಿ ನಡೆಯುವುದಿಲ್ಲ. ನೀವೂ ಮತ್ತು ನಿಮ್ಮ ಸುತ್ತಲಿನವರು ಸಹ ಸಂತೋಷವಾಗಿರುವುದಿಲ್ಲ. ಇದನ್ನು ತಡೆಯಲು ನೀವು ಮುಂಜಾನೆ ಎದ್ದ ನಂತರ ನಿಮ್ಮ ಹಾಸಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ನಿಮ್ಮ ದೈನಂದಿನ ಕೆಲಸಗಳು ಸುಗಮವಾಗಿ ನಡೆಯುತ್ತವೆ.

7. ನಾವು ಯಾವಾಗಲೂ ನಮ್ಮ ಕಾಲುಗಳನ್ನು ಹಾಗೂ ಪಾದಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸತ್ಯ ಸಂಗತಿಯೆಂದರೆ ನಾವು ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ಕೈ ಕಾಲು ಮತ್ತು ಪಾದಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಮನೆಗೆ ಹೊರಗಿನಿಂದ ಬಂದಾಗ ಮುಖ, ಕೈ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇದರಿಂದ ಶಿಸ್ತು ಜೀವನ ರೂಢಿಸಿಕೊಂಡಂತಾಗಿ ನಿಮಗೆ ಮನಃಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ. ಅನವಶ್ಯಕ ಸಿಟ್ಟು, ಮನಸ್ಸಿಗೆ ಕಿರಿ-ಕಿರಿ ಆಗುವುದಿಲ್ಲ, ದಿನಃ ಪೂರ್ತಿ ಸಂತೋಷವಾಗಿರುತ್ತೀರಿ.

8. ನೀವು ಪ್ರತಿದಿನ ಮನೆಗೆ ಬರುವಾಗ ಮನೆಯಲ್ಲಿ ಉಪಯೋಗಿಸುವ ಯಾವುದಾದರೂ ವಸ್ತುವನ್ನು ಹೂವು/ಹಣ್ಣು/ತರಕಾರಿ ಕೈಯಲ್ಲಿ ಹಿಡಿದು ಮನೆಗೆ ತರಬೇಕು. ಹಾಗೆ ಮಾಡಿದರೆ ಅಂತಹ ಮನೆಯಲ್ಲಿ, ಮನೆಯ ಲಕ್ಷ್ಮಿಯು (ಸಂಪತ್ತಿನ ಅಧಿಪತಿ) ಮತ್ತು ಶುಕ್ರ ಮನೆಯಲ್ಲಿ ಸ್ಥಿರವಾಗಿ ನೆಲಸುತ್ತಾರೆ.

9. ನೀವು ಉಪಹಾರ/ಊಟ ಮಾಡಿದ ತಟ್ಟೆಯಲ್ಲಿ ಯಾವತ್ತೂ  ಆಹಾರವನ್ನು ಉಳಿಸಬೇಡಿ. ಹಾಗೆ ಉಳಿಸಿದರೆ ನವ ಗ್ರಹಗಳೆಲ್ಲವೂ ನಿಮಗೆ ವಿರೋಧವಾಗಿ ನೀವು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)

ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
2014ರಿಂದ ಕರ್ನಾಟಕ ರೈಲ್ವೆ ಬಜೆಟ್​ನಲ್ಲಿ 9 ಪಟ್ಟು ಹೆಚ್ಚಳ: ಅಶ್ವಿನಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಹಳದಿ ಮಾರ್ಗಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ವಿಡಿಯೋ ನೋಡಿ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
ಈ ಭಾಗದ ಕನಸು ಸಾಕಾರಗೊಳಿಸಿದ ಮೋದಿ: ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ