Kannada News Spiritual December Festival List 2025: List of Important festivals celebrated in December
December Festival List 2025: ಡಿಸೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳಿವೆ. ಪ್ರತಿ ತಿಂಗಳಲ್ಲಿ ಕೂಡ ಒಂದಲ್ಲಾ ಒಂದು ವ್ರತಾಚರಣೆ ಅಥವಾ ಹಬ್ಬಗಳು ಇದ್ದೇ ಇರುತ್ತವೆ. ವರ್ಷದ ಕೊನೆಯ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು ಇವೆ. ಹಾಗಾದ್ರೆ ಯಾವೆಲ್ಲಾ ಹಬ್ಬಗಳು, ಆಚರಣೆಗಳಿವೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ದಿನಗಳು ಕ್ಷಣಗಳಂತೆ ಉರುಳಿದ್ದು, ಇದೀಗ ನಾವೆಲ್ಲರೂ ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ಗೆ ಕಾಲಿಡಲು ಸಜ್ಜಾಗಿದ್ದೇವೆ. ನವೆಂಬರ್ ಮಾಸ ಕಳೆದು, ವರ್ಷದ ಕೊನೆಯ ತಿಂಗಳನ್ನು ಬರಮಾಡಿಕೊಳ್ಳುತ್ತಿದ್ದು, ಹಿಂದೂ ಕ್ಯಾಲೆಂಡರ್ (Hindu Calendar) ಪ್ರಕಾರ ಈ ತಿಂಗಳಲ್ಲಿ ಹಬ್ಬಗಳು (Festivals), ವೃತಾಚಾರಣೆಗಳಿವೆ. ಗೀತಾ ಜಯಂತಿ, ದತ್ತಾತ್ರೇಯ ಜಯಂತಿ, ಕ್ರಿಸ್‌ಮಸ್ ಸೇರಿದಂತೆ ಹಲವಾರು ಹಬ್ಬಗಳಿವೆ. 2025 ರ ಕೊನೆಗೆ ತಿಂಗಳಾದ ಡಿಸೆಂಬರ್‌ನಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ.
ಡಿಸೆಂಬರ್‌ನಲ್ಲಿ ಆಚರಿಸಲಾಗುವ ಹಬ್ಬಗಳು ಇವೆ ನೋಡಿ
ಡಿಸೆಂಬರ್ 01: ಗೀತಾ ಜಯಂತಿ
ಡಿಸೆಂಬರ್ 01: ಸರ್ವೈಕಾದಶಿ ಮೋಕ್ಷದಾ
ಡಿಸೆಂಬರ್ 02: ಪ್ರದೋಷ
ಡಿಸೆಂಬರ್ 02 : ಮಹಾನಕ್ಷತ್ರ ಜ್ಯೇಷ್ಠಾ
ಡಿಸೆಂಬರ್ 03: ಹನುಮದ್ವೃತಂ
ಡಿಸೆಂಬರ್ 04: ದತ್ತಾತ್ರೇಯ ಜಯಂತಿ
ಡಿಸೆಂಬರ್ 04: ಹುಣ್ಣಿಮೆ
ಡಿಸೆಂಬರ್ 04: ಮಾರ್ಗಶಿರ ಕೃಷ್ಣಪಕ್ಷ
ಡಿಸೆಂಬರ್ 07: ಸಂಕಷ್ಟಹರ ಚತುರ್ಥಿ
ಡಿಸೆಂಬರ್ 15: ಧನುಸಂಕ್ರಮಣ
ಡಿಸೆಂಬರ್ 15: ಸರ್ವೈಕಾದಶಿ ಸಫಲಾ
ಡಿಸೆಂಬರ್ 17: ಪ್ರದೋಷ
ಡಿಸೆಂಬರ್ 18: ಮಾಸ ಶಿವರಾತ್ರಿ
ಡಿಸೆಂಬರ್ 19: ಎಳ್ಳಮಾವಾಸ್ಯಾ
ಡಿಸೆಂಬರ್ 21: ಪುಷ್ಯ ಶುಕ್ಲ ಪಕ್ಷ
ಡಿಸೆಂಬರ್ 21: ಉತ್ತರಾಯಣಾರಂಭ
ಡಿಸೆಂಬರ್ 22: ರಂಜಾನ್ ಪ್ರಾರಂಭ
ಡಿಸೆಂಬರ್ 25: ಕ್ರಿಸ್‌ಮಸ್
ಡಿಸೆಂಬರ್ 26: ಕಿರುಷಷ್ಠಿ
ಡಿಸೆಂಬರ್ 28: ಮಹಾನಕ್ಷತ್ರ ಪೂರ್ವಾಷಢಾ
ಡಿಸೆಂಬರ್ 30: ಸ್ಮಾರ್ತೈಕಾದಶಿ
ಡಿಸೆಂಬರ್ 31: ಭಾವೈಕಾದಶಿ ಪುತ್ರದಾ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ