Swastika: ಲಕ್ಷ್ಮಿ ದೇವಿಯ ಪೂಜಾ ಸಮಯದಲ್ಲಿ ಬಿಡಿಸುವ ಸ್ವಸ್ತಿಕ ಚಿಹ್ನೆಯ ಮಹತ್ವ ತಿಳಿದುಕೊಳ್ಳಿ

|

Updated on: Nov 12, 2023 | 1:59 PM

ದೀಪಾವಳಿ ಹಬ್ಬದ ಸಮಯದಲ್ಲಿ, ಮನೆಯನ್ನು ಹೂಗಳು ಹಾಗೂ ದೀಪಗಳಿಂದ ಅಲಂಕರಿಸಲಾಗುತ್ತದೆ. ಇದಲ್ಲದೇ ಮನೆ ಬಾಗಿಲ ಮುಂದೆ ಅಥವಾ ಲಕ್ಷ್ಮೀ ದೇವಿಯ ಪೂಜಾ ಸಮಯದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಲಾಗುತ್ತದೆ. ಆದ್ದರಿಂದ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುವ ಹಿಂದಿರುವ ಧಾರ್ಮಿಕ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ.

Swastika: ಲಕ್ಷ್ಮಿ ದೇವಿಯ ಪೂಜಾ ಸಮಯದಲ್ಲಿ ಬಿಡಿಸುವ ಸ್ವಸ್ತಿಕ ಚಿಹ್ನೆಯ ಮಹತ್ವ ತಿಳಿದುಕೊಳ್ಳಿ
Follow us on

ದೀಪಾವಳಿ ಹಬ್ಬವನ್ನು ಎಲ್ಲಡೆ ಸಡಗರದಿಂದ ಆಚರಿಸಲಾಗುತ್ತಿದೆ. ಪಟಾಕಿ ಸದ್ದು ಒಂಡೆದೆಯಾದರೆ ಮನೆಯ ಹಿರಿಯರಂತೂ ಪೂಜೆ, ದೇವರ ಅಲಂಕಾರದಲ್ಲೇ ಬ್ಯೂಸಿಯಾಗಿ ಬಿಡುತ್ತಾರೆ. ಸನಾತನ ಧರ್ಮದಲ್ಲಿ, ಸ್ವಸ್ತಿಕದ ಚಿಹ್ನೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಮನೆಯ ಬಾಗಿಲಿನ ಮುಂದೆ, ಪೂಜಾ ಸ್ಥಳದಲ್ಲಿ ಅಥವಾ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಸ್ವಸ್ತಿಕ ಚಿಹ್ನೆಯನ್ನು ಬಿಡಿಸುವುದನ್ನು ನೀವು ಕಂಡಿರಬಹುದು. ಆದ್ದರಿಂದ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುವ ಹಿಂದಿರುವ ಧಾರ್ಮಿಕ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ.

ಸನಾತನ ಧರ್ಮದಲ್ಲಿ ಸ್ವಸ್ತಿಕ ಚಿಹ್ನೆಯು ಯಾವುದೇ ದೇವತಾ ಕಾರ್ಯದಲ್ಲಿ ಮಂಗಳಕರ ಸಂಕೇತ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಸ್ವಸ್ತಿಕ ಚಿಹ್ನೆಯು ಸಂತೋಷ ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ಈ ಚಿಹ್ನೆಯನ್ನು ಮಾಡಿ ಶುಭಕಾರ್ಯ ಪ್ರಾರಂಭಿಸಿದರೆ ಯಾವುದೇ ಅಡೆತಡೆಯಿಲ್ಲದೆ ಕೆಲಸ ಪೂರ್ಣಗೊಳ್ಳುತ್ತದೆ. ಜೊತೆಗೆ ಸ್ವಸ್ತಿಕ ಚಿಹ್ನೆಯು ಶಕ್ತಿ,ನಿಮ್ಮ ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ದೀಪದ ಮಹತ್ವ ತಿಳಿದಿದೆಯಾ? ಯಾಕಾಗಿ ಮನೆಗಳಲ್ಲಿ ದೀಪ ಬೆಳಗಿಸಬೇಕು?

ಋಗ್ವೇದದಲ್ಲಿ ಸ್ವಸ್ತಿಕವನ್ನು ಸೂರ್ಯ ಎಂದು ಪರಿಗಣಿಸಲಾಗಿದೆ. ಸ್ವಸ್ತಿಕದ ನಾಲ್ಕು ಸಾಲುಗಳು ವಿಭಿನ್ನ ವಿಷಯಗಳನ್ನು ಸಂಕೇತಿಸುತ್ತವೆ. ಆದ್ದರಿಂದ ಅದನ್ನು ಬಿಡಿಸುವಾಗ ಅದರ ಬಣ್ಣದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾವಾಗಲೂ ಸ್ವಸ್ತಿಕವನ್ನು ಕೆಂಪು ಅಥವಾ ಕುಂಕುಮದಲ್ಲಿ ಬಿಡಿಸಿ. ಈ ಮಂಗಳಕರ ಚಿಹ್ನೆಯಿಂದ ಗ್ರಹ ದೋಷಗಳು ನಿವಾರಣೆಯಾಗುತ್ತವೆ ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ.

ದೀಪಾವಳಿಯಂದು ಲಕ್ಷ್ಮಿ ದೇವಿಯ ಪೂಜೆಯ ವೇಳೆ ಸ್ವಸ್ತಿಕ ಚಿಹ್ನೆ ಹಾಕುವುದು ಯೋಗಕ್ಷೇಮ ಮತ್ತು ಮಂಗಳಕರ ಸಂಕೇತವಾಗಿದೆ. ಪೌರಾಣಿಕ ಗ್ರಂಥಗಳ ಪ್ರಕಾರ, ಸ್ವಸ್ತಿಕವನ್ನು ಶ್ರೀಗಂಧ ಅಥವಾ ಕುಂಕುಮದಿಂದ ಮಾಡಬೇಕು. ತಯಾರಿಸುವಾಗ ಸ್ವಲ್ಪ ತಪ್ಪಾದರೂ ಈ ಚಿಹ್ನೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಬಹಳ ಎಚ್ಚರಿಕೆಯಿಂದ ಮಾಡಿ.

ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:15 pm, Sun, 12 November 23