Deepavali 2023: ದೀಪದ ಮಹತ್ವ ತಿಳಿದಿದೆಯಾ? ಯಾಕಾಗಿ ಮನೆಗಳಲ್ಲಿ ದೀಪ ಬೆಳಗಿಸಬೇಕು?

ದೀಪಾವಳಿಯ ದಿನ ಮಾತ್ರ ದೀಪಗಳನ್ನು ಬೆಳಗಿಸಬೇಕಾ? ಖಂಡಿತವಾಗಿಯೂ ಇಲ್ಲ. ಆದರೆ ದೀಪಾವಳಿ ಮತ್ತು ಕಾರ್ತೀಕ ಮಾಸದಲ್ಲಿ ದೀಪ ಹಚ್ಚುವುದಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ದೀಪಗಳನ್ನು ಯಾವಾಗಲೂ, ಎಲ್ಲರೂ ಹಚ್ಚಿ ಬೆಳಗಬಹುದು. ಕೆಲವರಲ್ಲಿ ದೀಪ ಯಾವ ಕಾರಣಕ್ಕಾಗಿ ಬೆಳಗಬೇಕು? ಅದರ ಮಹತ್ವವೇನು? ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಅಂತಹ ಜಿಜ್ಞಾಸೆಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗುತ್ತದೆ.

Deepavali 2023: ದೀಪದ ಮಹತ್ವ ತಿಳಿದಿದೆಯಾ? ಯಾಕಾಗಿ ಮನೆಗಳಲ್ಲಿ ದೀಪ ಬೆಳಗಿಸಬೇಕು?
Deepavali 2023Image Credit source: Pinterest
Follow us
| Edited By: Akshatha Vorkady

Updated on: Nov 11, 2023 | 6:53 PM

ದೀಪ ಎಂಬ ಪದ ಎರಡಕ್ಷರದ್ದಾದರೂ ಅದರ ಮಹತ್ವ ಮಾತ್ರ ಅನನ್ಯ. ದೀಪಾವಳಿಯ ದಿನ ಮಾತ್ರ ದೀಪಗಳನ್ನು ಬೆಳಗಿಸಬೇಕಾ? ಖಂಡಿತವಾಗಿಯೂ ಇಲ್ಲ. ಆದರೆ ದೀಪಾವಳಿ ಮತ್ತು ಕಾರ್ತೀಕ ಮಾಸದಲ್ಲಿ ದೀಪ ಹಚ್ಚುವುದಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ದೀಪಗಳನ್ನು ಯಾವಾಗಲೂ, ಎಲ್ಲರೂ ಹಚ್ಚಿ ಬೆಳಗಬಹುದು. ಕೆಲವರಲ್ಲಿ ದೀಪ ಯಾವ ಕಾರಣಕ್ಕಾಗಿ ಬೆಳಗಬೇಕು? ಅದರ ಮಹತ್ವವೇನು? ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಅಂತಹ ಜಿಜ್ಞಾಸೆಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ದೀಪ ಎಂದರೆ ಶಾಂತಿ, ಸಮೃದ್ಧಿ, ಸಂಪತ್ತು, ದೀಪ ಎಂದರೆ ಪ್ರಖರತೆ ಹೀಗೆ ದೀಪ ಜೀವನದ ಒಂದು ಭಾಗ. ಹಾಗಾಗಿ ದೀಪವನ್ನು ದಿನವೂ ಬೆಳಗಿಸುವುದರಿಂದ ನಿಮ್ಮ ಜೀವನಕ್ಕೆ ಸಂತೋಷ, ನೆಮ್ಮದಿ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿಯೂ ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ತರವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಜೊತೆಗೆ ದೀಪ ಬೆಳಗುವ ಮೂಲಕವೇ ಪ್ರತಿಯೊಂದು ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಎಷ್ಟು ಹೆಸರುವಾಸಿಯಾದರೂ ದೀಪ ಬೆಳಗಬೇಕು ಎಂದಾಕ್ಷಣ ತಮ್ಮ ಪಾದರಕ್ಷೆಗಳನ್ನು ಬಿಚ್ಚಿ ಬರಲೇ ಬೇಕು. ಅದು ದೀಪಕ್ಕಿರುವ ಮಹತ್ವವೂ ಹೌದು. ಇದೆಲ್ಲದರ ಜೊತೆಗೆ ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ.

ಇದನ್ನೂ ಓದಿ:  ಬಲಿಪಾಡ್ಯಮಿಯ ಇತಿಹಾಸ, ಆಚರಣೆಗಳ ಬಗ್ಗೆ ತಿಳಿದಿದೆಯಾ? ಈ ದಿನ ಗೋಪೂಜೆ ಏಕೆ ಮಾಡಬೇಕು? ಮಾಹಿತಿ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ದೀಪ ಹಚ್ಚುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಮೊದಲು ನಮ್ಮ ಹಿರಿಯರು ಮಣ್ಣಿನ ದೀಪಗಳನ್ನು ಬಳಸುತ್ತಿದ್ದರು. ಈಗ ಅದೇ ಹಣತೆ ಬಣ್ಣ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆರ್ಟಿಫಿಷಿಯಲ್ ದೀಪಗಳು ಸಿಗುತ್ತವೆ ಆದರೆ ಮಣ್ಣಿಗಿರುವ ಶ್ರೇಷ್ಠತೆ ಯಾವುದರಲ್ಲಿಯೂ ಸಿಗುವುದಿಲ್ಲ ಎಂಬುದನ್ನು ಭಾರತೀಯರಾದ ನಾವು ಮರೆಯಬಾರದು, ದೀಪ ಹಚ್ಚುವುದು ಅಂದ ಚಂದಕ್ಕಾಗಿ ಅಲ್ಲ ಬದಲಾಗಿ ಮನಸ್ಸಿನ ನೆಮ್ಮದಿಗಾಗಿ. ಅದರಲ್ಲಿಯೂ ದೇವರ ಕೋಣೆಯಲ್ಲಿ ದೀಪ ಹಚ್ಚುವುದು ಮನಸ್ಸು ಶಾಂತವಾಗಿರಲಿ ಎಂದು. ದೇವರ ಮುಂದೆ ಕುಳಿತಾಗ, ಭಗವಂತನ ಕುರಿತು ಭಕ್ತಿಭಾವ ಹೆಚ್ಚಾಗಬೇಕು, ದೇವರ ಕೋಣೆಯಲ್ಲಿ ಭಗವಂತನ ಅಸ್ತಿತ್ವದ ಅರಿವಾಗಬೇಕು, ದೇವರು ನಮ್ಮೊಂದಿಗಿದ್ದಾನೆ ಎಂದು ಅನಿಸಬೇಕು. ಹಾಕಿದ್ದಾಗ ಮಾತ್ರ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಪ್ರತಿ ದಿನವೂ ಕನಿಷ್ಠ 2 ದೀಪವನ್ನಾದರೂ ಹಚ್ಚಿ ಅದು ತುಪ್ಪದ್ದಾಗಿರಲಿ ಎಣ್ಣೆಯಾಗಿರಲಿ ನಿಮಗೆ ಅನುಕೂಲಕರ ವಾಗಿರುವುದನ್ನು ಬಳಸಿ ದೇವರಿಗೆ ಅರ್ಪಿಸಿ.

ತುಳಸಿ ಪೂಜೆ ಮತ್ತು ದೀಪ ಹಚ್ಚುವುದಕ್ಕೆ ಕಾರಣವೇನು?

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ತುಳಸಿಯನ್ನು ಪೂಜಿಸುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಮತ್ತು ಜೀವನದಿಂದ ಎಲ್ಲಾ ರೀತಿಯ ತೊಂದರೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ತಿಂಗಳಲ್ಲಿ ಭಗವಾನ್‌ ವಿಷ್ಣು ನಾಲ್ಕು ತಿಂಗಳುಗಳ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ, ಹೀಗಾಗಿ ಈ ಮಾಸವು ಪೌರಾಣಿಕ ಮಹತ್ವವನ್ನು ಹೊಂದಿದೆ. ಜೊತೆಗೆ ಬಹಳ ವಿಶೇಷವೆಂದು ಪರಿಗಣಿಸಲ್ಪಟ್ಟಿದೆ. ಅದರಲ್ಲಿಯೂ ಕಾರ್ತಿಕ ಮಾಸದಲ್ಲಿ ತುಳಸಿ ಕಟ್ಟೆಯ ಮುಂದೆ ದೀಪ ಹಚ್ಚುವುದು ಇನ್ನೂ ಮಂಗಳಕರವಾಗಿದ್ದು ಪ್ರತಿದಿನ ಹಚ್ಚುವುದನ್ನು ಮರೆಯಬೇಡಿ.

ಕಾರ್ತಿಕ ಮಾಸದಲ್ಲಿ ತುಳಸಿಗೆ ಪೂಜೆ ಮಾಡಿ ದೀಪ ಹಚ್ಚುವಾಗ ಈ ಮಂತ್ರವನ್ನು ಪಠಿಸಿ:

ಮಹಾಪ್ರಸಾದ್‌ ಜನನೀ, ಸರ್ವ ಸೌಭಾಗ್ಯವರ್ಧಿನೀ ಆಧಿ ವ್ಯಾಧಿ ಹರಾ ನಿತ್ಯಂ, ತುಳಸೀ ತ್ವಂ ನಮೋಸ್ತುತೇ

ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ