Deepavali Recipes: ದೀಪಾವಳಿಯಂದು ಕಾಜು ಬರ್ಫಿ, ಕೇಸರಿ ಪೇಡಾ ಮನೆಯಲ್ಲಿಯೇ ತಯಾರಿಸಿ, ಇಲ್ಲಿದೆ ಸುಲಭ ವಿಧಾನ

ಸಾಮಾನ್ಯವಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನವರು ಸಿಹಿ ತಿಂಡಿಗಳನ್ನು ಮಾರುಕಟ್ಟೆಯಿಂದ ಖರೀದಿ ಮಾಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿ ಪದಾರ್ಥಗಳು ಅರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಸಿಹಿಗಳನ್ನು ಕಲಬೆರಕೆ ಪದಾರ್ಥಗಳಿಂದ ಮಾಡಿರುವ ಸಾಧ್ಯತೆ ಇರುತ್ತದೆ.  ಆದ್ದರಿಂದ ಈ ಬಾರಿಯ ಹಬ್ಬದಂದು ನೀವು  ಮನೆಯಲ್ಲಿಯೇ ಆರೋಗ್ಯಕರ ರೀತಿಯಲ್ಲಿ ಈ ಕೆಲವು ಸಿಹಿ ತಿನಿಸುಗಳನ್ನು ತಯಾರಿಸಬಹುದು. ಈ ಸಿಹಿ ಪದಾರ್ಥಗಳ ಪಾಕವಿಧಾನದ ಮಾಹಿತಿ ಇಲ್ಲಿದೆ.

Deepavali Recipes: ದೀಪಾವಳಿಯಂದು ಕಾಜು ಬರ್ಫಿ, ಕೇಸರಿ ಪೇಡಾ ಮನೆಯಲ್ಲಿಯೇ ತಯಾರಿಸಿ, ಇಲ್ಲಿದೆ ಸುಲಭ ವಿಧಾನ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 10, 2023 | 6:30 PM

ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸುವ ದೀಪಾವಳಿ ಹಬ್ಬ ಬಂದೇ ಬಿಟ್ಟಿತು. ಸಿಹಿ ಇಲ್ಲದೆ ದೀಪಾವಳಿ ಅಪರಿಪೂರ್ಣ ಅಂತಾನೇ ಹೇಳಬಹುದು. ಈ ಹಬ್ಬದಲ್ಲಿ   ಜನರು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ದೀಪಾವಳಿ ಹಬ್ಬದ ದಿನ ಹೆಚ್ಚಿನವರು ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿ ತಿನಿಸುಗಳು ಆರೋಗ್ಯಕರವಾದವು ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಸಿಹಿ ತಿಂಡಿಗಳನ್ನು ಕಲಬೆರಕೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ.  ಹೀಗಿರುವಾಗ ಆರೋಗ್ಯದ ದೃಷ್ಟಿಯಿಂದ  ನೀವು ಮನೆಯಲ್ಲಿಯೇ ಸುಲಭವಾಗಿ ಸಿಹಿ ತಿನಿಸುಗಳನ್ನು ತಯಾರಿಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಬಹುದು. ಈ ಬಾರಿಯ ಹಬ್ಬದ ದಿನ ಯಾವೆಲ್ಲಾ ಸ್ವೀಟ್ಸ್ ತಯಾರಿಸಬಹುದು ಎಂಬುದರ  ಮಾಹಿತಿ ಇಲ್ಲಿದೆ.

ಕಾಜು ಬರ್ಫಿ:

ವಿಶೇಷವಾಗಿ ದೀಪಾವಳಿ ಹಬ್ಬದಲ್ಲಿ  ಸಿಹಿ ತಿಂಡಿ ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವಂತಹದ್ದೇ ಕಾಜು ಬರ್ಫಿ.  ಸಾಮಾನ್ಯವಾಗಿ ಕಾಜು ಬರ್ಫಿ ಎಂದರೆ ಎಲ್ಲರಿಗೂ   ತುಂಬಾ ಇಷ್ಟ. ನೀವು ಈ ಸಿಹಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಆರೋಗ್ಯದ ದೃಷ್ಟಿಯಿಂದ ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು.

ಕಾಜು ಬರ್ಫಿ ಮಾಡಲು ಬೇಕಾಗುವ ಸಾಮಾಗ್ರಿಗಳು :

• ಗೋಡಂಬಿ – 250 ಗ್ರಾಂ

• ಹಾಲಿನ ಪುಡಿ – ½ ಕಪ್

• ಸಕ್ಕರೆ – ½ ಕಪ್

• ಏಲಕ್ಕಿ ಪುಡಿ – ½ ಟೀಸ್ಪೂನ್

• ತುಪ್ಪ – 2  ಸ್ಪೂನ್

• ಸಿಲ್ವರ್ ಪೇಪರ್/ಬೆಳ್ಳಿ ಲೇಪನ (ಐಚ್ಛಿಕ)

ಕಾಜು ಬರ್ಫಿ ಮಾಡುವ ಸುಲಭ ವಿಧಾನ:

• ಮೊದಲನೆಯದಾಗಿ 250 ಗ್ರಾಂ ಗೋಡಂಬಿಯನ್ನು ತೆಗೆದುಗೊಂಡು  ಅದನ್ನು ಮಿಕ್ಸಿ ಜಾರ್ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಅದನ್ನು ಜರಡಿಯಲ್ಲಿಟ್ಟು ಶೋಧಿಸಿಕೊಳ್ಳಿ. ಶೋಧಿಸಿಟ್ಟ ಗೋಡಂಬಿ ಪುಡಿಗೆ ಅರ್ಧ ಕಪ್ ಹಾಲಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಪಕ್ಕಕ್ಕೆ ಇಟ್ಟುಬಿಡಿ.

• ಈಗ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಹಾಕಿಕೊಳ್ಳಿ ಮತ್ತು ಸಕ್ಕರೆ ಕರಗಲು ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ. ಸಕ್ಕರೆ ಪಾಕ ತಯಾರಾಗುವವರೆಗೂ ಚೆನ್ನಾಗಿ ಬೆರೆಸಿಕೊಳ್ಳಿ,

• ಸಕ್ಕರೆ ಕರಗಿದ ಬಳಿಕ ಮೊದಲೇ ತಯಾರಿಸಿಟ್ಟ ಗೋಡಂಬಿ ಪುಡಿ ಮತ್ತು ಹಾಲಿನ ಪುಡಿ ಮಿಶ್ರಣವನ್ನು ಇದಕ್ಕೆ ಸೇರಿಸಿಕೊಂಡು, ಈ ಮಿಶ್ರಣ ಗಂಟುಕಟ್ಟಿಕೊಳ್ಳದ ಹಾಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.

• ಈಗ ಈ ಮಿಶ್ರಣಕ್ಕೆ 1 ಟೀ ಸ್ಪೂನ್ ತುಪ್ಪ ಮತ್ತು ¼ ಟೀಸ್ಪೂನ್ ಏಲಕ್ಕಿ ಪುಡಿಯನ್ನು (ಐಚ್ಛಿಕ)  ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಬರ್ಫಿ ಮಿಶ್ರಣ ತಳ ಬಿಡಲು ಆರಂಭಿಸಿದಾಗ ಗ್ಯಾಸ್ ಆಫ್ ಮಾಡಿ.

• ಈಗ ಒಂದು ಟ್ರೇ  ಅಥವಾ ಬಟ್ಟಿಲಿಗೆ ತುಪ್ಪವನ್ನು ಸವರಿ ( ಟ್ರೇ ಮೇಲೆ ಬಟರ್ ಪೇಪರ್ ಕೂಡಾ ಹಾಕಬಹುದು) ಅದರ  ಮೇಲೆ ಬರ್ಫಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಸೆಟ್ ಮಾಡಿಕೊಳ್ಳಿ, ಈಗ ಅದರ ಮೇಲೆ ಬೆಳ್ಳಿ ಲೇಪನವನ್ನು ಅಂಟಿಸಿ, ಬರ್ಫಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಬರ್ಫಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ತುಂಡರಿಸಿ ಮನೆಯವರಿಗೆ ಬಡಿಸಿ.

ಕೇಸರಿ ಪೇಡಾ:

ಪೇಡಾ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಹಾಲಿನಿಂದ  ಮಾಡುವ ಈ ಒಂದು ರೆಸಿಪಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಬಾರಿಯ  ದೀಪಾವಳಿಯ ಸಮಯದಲ್ಲಿ ಪೇಡಾ ಸ್ವೀಟ್ನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ.

ಕೇಸರಿ ಪೇಡಾ ಮಾಡಲು ಬೇಕಾಗುವ ಸಾಮಾಗ್ರಿಗಳು:

• ಖೋವಾ – 2 ಕಪ್

• ಸಕ್ಕರೆ ಪುಡಿ – ½ ಕಪ್

• ಕೇಸರಿ ದಳ – ¼ ಕಪ್

• ಹಾಲು – 2 ಚಮಚ

• ಏಲಕ್ಕಿ ಪುಡಿ – ¼ ಟೀಸ್ಪೂನ್

• ತುಪ್ಪ – 1 ಟೀಸ್ಪೂನ್

ಕೇಸರಿ ಪೇಡಾ ಮಾಡುವ ವಿಧಾನ:

• ಕೇಸರಿ ಪೇಡಾ ಮಾಡಲು ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕೇಸರಿ ದಳ ಮತ್ತು ಹಾಲನ್ನು ಸೇರಿಸಿ  ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪಕ್ಕಕ್ಕೆ ಇಟ್ಟುಬಿಡಿ.

• ಈಗ ಒಲೆ ಮೇಲೆ ಒಂದು ಪ್ಯಾನ್ ಇಟ್ಟು ಬಿಸಿಯಾಗಲು ಬಿಡಿ, ನಂತರ ಖೋವಾವನ್ನು ಚೆನ್ನಾಗಿ ಮ್ಯಾಶ್ ಮಾಡಿ ಮತ್ತು ಸಕ್ಕರೆ  ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣ ದಪ್ಪವಾಗುವವರೆ ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ದಳ  ಮತ್ತು ಏಲಕ್ಕಿ ಪುಡಿಯನ್ನು ಈ ಮಿಶ್ರಣಕ್ಕೆ ಸೇರಿಸಿಕೊಳ್ಳಿ. ಮತ್ತು ಪೇಡಾ ಮಿಶ್ರಣ ತಳ ಬಿಡುವವರೆ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ.

• ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಕೈಗೆ ಸ್ವಲ್ಪ ತುಪ್ಪವನ್ನು ಸವರಿಕೊಂಡು  ಚಿಕ್ಕ ಚಿಕ್ಕ ಪೇಡಾ ಉಂಡೆ ತಯಾರಿಸಿ.  ಕೊನೆಯಲ್ಲಿ ಅದರ ಮೇಲೆ   ಪಿಸ್ತಾ ಮತ್ತು ಬಾದಮಿ ಚೂರುಗಳನ್ನು ಉದುರಿಸಿ.

ಮಖಾನ ಖೀರ್:

ಈ ಬಾರಿಯ ಹಬ್ಬದ ಸಂದರ್ಭದಲ್ಲಿ ಆರೋಗ್ಯರ ಸಿಹಿ ಪದಾರ್ಥವನ್ನು ಮಾಡಬೇಕೆಂದುಕೊಂಡಿದ್ದರೆ, ನೀವು ಮಖಾನ ಖೀರ್ ಮಾಡಬಹುದು. ಮಖಾನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ  ಈ ವಿಶೇಷ ಉಡುಗೊರೆಯನ್ನು ನೀಡಿ 

ಮಖಾನ ಖೀರ್ ಬೇಕಾಗುವ ಸಾಮಾಗ್ರಿಗಳು:

• ಮಖಾನ – 1 ಕಪ್

• ಭರಿತ ಹಾಲು – 1 ಲೀಟರ್

• ಸಕ್ಕರೆ – 1 ಕಪ್

• ತುಪ್ಪ – 3 ಚಮಚ

• ಕೇಸರಿ ದಳ – 2 ರಿಂದ 3

• ಏಲಕ್ಕಿ ಪುಡಿ – 1 ಟೀಸ್ಪೂನ್

• ಗೋಡಂಬಿ, ಬಾದಮಿ, ಪಿಸ್ತಾ ಚೂರುಗಳು

ತಯಾರಿಸುವ ವಿಧಾನ:

• ಮೊದಲಿಗೆ ಒಲೆಯ ಮೇಲೆ ಒಂದು ಬಾಣಲೆಯನ್ನು ಇಟ್ಟು ಅದಕ್ಕೆ ಎರಡು ಚಮಚ ತುಪ್ಪ ಹಾಕಿ  ಅದರಲ್ಲಿ ಮಖಾನವನ್ನು ಹುರಿದುಕೊಂಡು ಪಕ್ಕಕ್ಕೆ ಇಟ್ಟುಬಿಡಿ.

• ಈಗ ಇನ್ನೊಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಹಾಲನ್ನು ಹಾಕಿ ಕುದಿಯಲು ಬಿಡಿ. ಹಾಲು ಚೆನ್ನಾಗಿ ಕುದಿದ ಬಳಿಕ ಅದಕ್ಕೆ ಹುರಿದಿಟ್ಟ ಮಖಾನವನ್ನು ಸೇರಿಸಿ. ಜೊತೆಗೆ ಗೋಡಂಬಿ, ಬಾದಮಿ, ಪಿಸ್ತಾ ಚೂರುಗಳನ್ನು ಕೂಡಾ ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಎಲ್ಲವನ್ನೂ ಚೆನ್ನಾಗಿ ಬೇಯಿಸಿಕೊಳ್ಳಿ.

• ಮಿಶ್ರಣ ದಪ್ಪವಾಗುವವರೆಗೂ ಕೈಯಾಡಿಸುತ್ತಲೇ ಬೇಯಿಸಿಕೊಳ್ಳಬೇಕು. ಮಿಶ್ರಣ ದಪ್ಪವಾಗಲು ಆರಂಭಿಸಿದಾಗ ಅದಕ್ಕೆ 1 ಟೀಸ್ಪೂನ್ ಏಲಕ್ಕಿ ಪುಡಿ,   ಮತ್ತು ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಸೇರಿಸಿಕೊಂಡು  ಚೆನ್ನಾಗಿ ಬೇಯಿಸಿ. ಕೊನೆಯಲ್ಲಿ ಕೇಸರಿ ದಳವನ್ನು ಕೀರ್ಗೆ ಸೇರಿಸಿಕೊಂಡು ಸ್ವಲ್ಪ ಒತ್ತು ಬೇಯಲು ಬಿಟ್ಟರೆ ಆರೋಗ್ಯಕ ಸಿಹಿ ರೆಸಿಪಿ ಮಖಾನ ಖೀರ್ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Fri, 10 November 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ