AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali Gift Ideas: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ  ಈ ವಿಶೇಷ ಉಡುಗೊರೆಯನ್ನು ನೀಡಿ 

ಅನೇಕರು ದೀಪಾವಳಿ ಹಬ್ಬದಂದು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯನ್ನು ನೀಡುವ ಮೂಲಕ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ನೀವು ಸಹ ಈ ಬಾರಿಯ ಹಬ್ಬದ ದಿನ ನಿಮ್ಮ ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆಯನ್ನು ನೀಡಲು ಬಯಸಿದರೆ ಈ ಕೆಲವು ವಿಶಿಷ್ಟ ಉಡುಗೊರೆಯನ್ನು ನೀಡಬಹುದು. 

Deepavali Gift Ideas: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ  ಈ ವಿಶೇಷ ಉಡುಗೊರೆಯನ್ನು ನೀಡಿ 
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 10, 2023 | 4:35 PM

Share

ಬೆಳಕಿನ ಹಬ್ಬ ದೀಪಾವಳಿಗೆ (Deepavali)ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಿರುವಾಗ ಜನ ಉತ್ಸಾಹದಿಂದ  ಹಬ್ಬದ ತಯಾರಿ ಆರಂಭಿಸಿದ್ದಾರೆ. ದೀಪಾವಳಿಯಲ್ಲಿ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಲು  ಜನರು ತಮ್ಮ ಮನೆಗಳನ್ನು ದೀಪ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಅಲಂಕರಿಸುತ್ತಾರೆ, ವಿವಿಧ ರೀತಿಯ ಸಿಹಿ, ಖಾರ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಅದೇ ಸಮಯದಲ್ಲಿ ದೀಪಾವಳಿಯಂದು ಉಡುಗೊರೆಗಳನ್ನು ನೀಡುವ ಸಂಪ್ರದಾಯವೂ ಇದೆ. ದೀಪಾವಳಿಯಂದು ಜನರು  ತಮ್ಮ ಸ್ನೇಹಿತರು, ಸಂಬಂಧಿಕರು, ತಮ್ಮ ಪ್ರೀತಿಪಾತ್ರರಿಗೆ  ಸಿಹಿ ತಿನಿಸು  ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ.  ನೀವೂ ಕೂಡ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡಲು ಬಯಸಿದರೆ ಈ ಕೆಲವು ವಿಶಿಷ್ಟ ಉಡುಗೊರೆಗಳನ್ನು ನೀಡಬಹುದು.

ಈ ಕೆಲವು ಉಡುಗೊರೆಗಳನ್ನು  ನೀಡುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿ:

ಬೆಳ್ಳಿ ನಾಣ್ಯ:

ದೀಪಾವಳಿ ಹಬ್ಬ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.  ಈ ದೀಪಗಳ ಹಬ್ಬದಲ್ಲಿ ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಹಾಗೂ ಈ ಹಬ್ಬದ ಸಮಯದಲ್ಲಿ ಚಿನ್ನ, ಬೆಳ್ಳಿಯ ವಸ್ತುಗಳನ್ನು ಖರೀದಿಸುವುದು  ಮಂಗಳಕರವೆಂದು  ಹೇಳಲಾಗುತ್ತದೆ.  ಹಾಗಿರುವಾಗ ಈ ಹಬ್ಬದ ಸಮಯದಲ್ಲಿ ನಿಮ್ಮ  ಪ್ರೀತಿಪಾತ್ರರಿಗೆ, ನಿಮ್ಮ ಬಜೆಟ್ಗೆ ಅನುಗುಣವಾದ ಬೆಳ್ಳಿಯ ನಾಣ್ಯವನ್ನು ಉಡುಗೊರೆ ರೂಪದಲ್ಲಿ ನೀಡಬಹುದು.

ಇಂಡೋರ್ ಪ್ಲಾಂಟ್ಸ್:

ಸಾಮಾನ್ಯವಾಗಿ ಗಿಫ್ಟ್ ಹ್ಯಾಂಪರ್, ಡ್ರೈ ಫ್ರೂಟ್ಸ್, ಸಿಹಿ ತಿನಿಸುಗಳನ್ನು ಉಡುಗೊರೆ ರೂಪದಲ್ಲಿ ನೀಡಲಾಗುತ್ತದೆ. ಈ ಬಾರಿಯ ಹಬ್ಬದಲ್ಲಿ ವಿಶೇಷವಾಗಿ ನೀವು ಒಳಾಂಗಣ ಸಸ್ಯಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಮನಿ ಪ್ಲಾಂಟ್, ಪೀಸ್ ಲಿಲಿ, ಲಕ್ಕಿ ಬ್ಯಾಂಬೂ, ರಬ್ಬರ್ ಪ್ಲಾಂಟ್, ಸ್ನೇಕ್ ಪ್ಲಾಂಟ್ ಇತ್ಯಾದಿ ಸುಂದರವಾದ ಒಳಾಂಗಣ ಸಸ್ಯವನ್ನು ಉಡುಗೊರೆಯಾಗಿ ನೀಡಬಹುದು.

ಸುಂದರ ದೀಪಗಳು ಮತ್ತು ಮೇಣದ ಬತ್ತಿ:

ಇತ್ತೀಚಿನ ದಿನಗಳಲ್ಲಿ ವರ್ಣರಂಜಿತ ದೀಪಗಳು ಮತ್ತು ವಿವಿಧ ವಿನ್ಯಾಸದ ದೀಪಗಳು ಮತ್ತು ವಿವಿಧ ವಿನ್ಯಾಸದ ಸುವಾಸನೆಭರಿತ ಮೇಣದ ಬತ್ತಿಗಳ ಸೆಟ್ಗಳು ಮಾರುಕಟ್ಟೆಯಲ್ಲಿ ಹಾಗೂ ಆನ್ಲೈನ್ ವೆಬ್ಸೈಟ್ಗಳಲ್ಲಿ ಲಭ್ಯವಿದೆ. ಈ ದೀಪಾವಳಿಯ ಸಂದರ್ಭದಲ್ಲಿ ಅದನ್ನು ಉಡುಗೊರೆಯ ರೂಪದಲ್ಲಿ ನೀಡಬಹುದು. ಅಲ್ಲದೆ  ದೀಪಾವಳಿಯಲ್ಲಿ ಸುಂದರವಾದ ಬೆಳ್ಳಿ, ತಾಮ್ರ ಅಥವಾ ಇತರ ಲೋಹದ ದೀಪಗಳನ್ನು ಸಹ ಉಡುಗೊರೆ ನೀಡಬಹುದು.

ಇದನ್ನೂ ಓದಿ: ಪಟಾಕಿಯಿಂದ ಹೊರಬರುವ ಹೊಗೆ ಗರ್ಭಿಣಿಯರಿಗೆ ಎಷ್ಟು ಅಪಾಯಕಾರಿ ಗೊತ್ತಾ?

ಚರ್ಮದ ಆರೈಕೆ ಉತ್ಪನ್ನಗಳು:

ಹೆಚ್ಚಾಗಿ ಯುವತಿಯರು ಮೇಕಪ್ ಕಿಟ್ ಮತ್ತು ಚರ್ಮದ ಆರೈಕೆ ಉತ್ಪನ್ನಗಳನ್ನು ಬಹಳ ಇಷ್ಟಪಡುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಈ ಬಾರಿಯ ದೀಪಾವಳಿಯಲ್ಲಿ ಚರ್ಮದ ಆರೈಕೆ ಉತ್ಪನ್ನಗಳನ್ನು ನೀಡಬಹುದು. ಬಾಡಿಲೋಷನ್, ಲಿಪ್ ಸ್ಟಿಕ್, ವಿವಿಧ ರೀತಿಯ ಸ್ಕಿನ್ ಕೇರ್ ಉತ್ಪನ್ನಗಳ ಹ್ಯಾಂಪರ್ಗಳನ್ನು ಉಡುಗೊರೆ ನೀಡಬಹುದು. ಅಲ್ಲದೆ ಮೇಕಪ್ ಕಿಟ್ಗಳನ್ನು ಕೂಡಾ  ಉಡುಗೊರೆ ನೀಡಬಹುದು. ನೀವು ಬಯಸಿದರೆ ಅವುಗಳನ್ನು ಕಸ್ಟಮೈಸ್ ಕೂಡ ಮಾಡಬಹುದು.

ಗ್ಯಾಜೆಟ್​​ಗಳು:

ಯುವತಿಯರಿಗೆ ಸ್ಕಿನ್ ಕೇರ್ ಹಾಗೂ ಮೇಕಪ್ ಉತ್ಪನ್ನಗಳು ಇಷ್ಟವಾಗುವಂತೆ ಹುಡುಗರಿಗೆ ಗ್ಯಾಜೆಟ್ಗಳೆಂದರೆ ಬಲು ಇಷ್ಟ. ಹಾಗಿರುವಾಗಿ ನಿಮ್ಮ ಸ್ನೇಹಿತರಿಗೆ ಅಥವಾ ಅಣ್ಣ ತಮ್ಮಂದಿರಿಗೆ ಏನಾದರೂ ವಿಶೇಷ ಗಿಫ್ಟ್ ನೀಡಬೇಕೆಂದು ಬಯಸಿದರೆ ನೀವು  ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್, ಕ್ಯಾಮೆರಾ ಇತ್ಯಾದಿ ಗ್ಯಾಜೆಟ್ಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು.

ಡ್ರೈ ಫ್ರೂಟ್ಸ್ ಬಾಸ್ಕೆಟ್:

ಪ್ರತಿಬಾರಿ ಸಿಹಿಯನ್ನು ನೀಡುವ ಬದಲು ಆರೋಗ್ಯಕರ ಆಯ್ಕೆಯಾದ ಡ್ರೈ ಫ್ರೂಟ್ಸ್ಗಳನ್ನು ಉಡುಗೊರೆಯ ರೂಪದಲ್ಲಿ ನೀಡಬಹುದು. ಅನೇಕ ಬಗೆಯ ಡ್ರೈ ಫ್ರೂಟ್ಸ್ ಬಾಸ್ಕೆಟ್ಸ್ಗಳು ಮಾಡುಕಟ್ಟೆಯಲ್ಲಿ ಲಭ್ಯವಿದೆ, ಅವುಗಳನ್ನು ಉಡುಗೊರೆಯಾಗಿ ನೀಡಿ.

ಹ್ಯಾಂಪರ್ ಬಾಕ್ಸ್:

ಈ ದೀಪಾವಳಿಯಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ನೀವು ಸುಂದರವಾದ ದೀಪಾವಳಿ ಹ್ಯಾಂಪರ್ಗಳನ್ನು ಉಡುಗೊರೆಯಾಗಿ ನೀಡಬಹುದು. ಆನ್ಲೈನ್ ವೆಬ್ಸೈಟ್ಗಳಲ್ಲಿ ಅನೇಕ ರೀತಿಯ ಹ್ಯಾಂಪರ್ ಬಾಕ್ಸ್ಗಳು ಲಭ್ಯವಿದೆ. ನಿಮ್ಮ ಬಜೆಟ್ಗೆ ಅನುಗುಣವಾಗಿ ನೀವು ಹ್ಯಾಂಪರ್ ಬಾಕ್ಸ್ಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ