Balipadyami: ಬಲಿಪಾಡ್ಯಮಿಯ ಇತಿಹಾಸ, ಆಚರಣೆಗಳ ಬಗ್ಗೆ ತಿಳಿದಿದೆಯಾ? ಈ ದಿನ ಗೋಪೂಜೆ ಏಕೆ ಮಾಡಬೇಕು? ಮಾಹಿತಿ ಇಲ್ಲಿದೆ

ದೀಪಾವಳಿಯ ವಿಶೇಷ ಆಚರಣೆಗಳಲ್ಲಿ ಬಲಿಪಾಡ್ಯಮಿಯೂ ಒಂದು. ವಿಷ್ಣುವು ವಾಮನನ ಅವತಾರದ ಕಥೆಯ ಹಿನ್ನೆಲೆಯಲ್ಲಿ ಬಲಿಪಾಡ್ಯಮಿಯ ಹಬ್ಬ ನಡೆಯುತ್ತದೆ. ಇದನ್ನು ಹಲವು ಭಾಗದಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಬಲೀಂದ್ರ ಚಕ್ರವರ್ತಿಯನ್ನು ನರಕ ಚತುರ್ದಶಿಯಂದು ಪ್ರತಿಷ್ಠಾಪಿಸಿ ಬಲಿ ಪಾಡ್ಯಮಿಯ ಸಂಜೆ ಪೂಜೆ ಮಾಡಿ ಅವನನ್ನು ಕಳುಹಿಸಿ ಕೊಡಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಅದರಲ್ಲಿಯೂ ತುಳುನಾಡಿನಲ್ಲಿ ಬಲಿಪಾಡ್ಯಮಿಯ ಸಂಜೆ ಮನೆಯ ತುಳಸಿ ಕಟ್ಟೆಯ ಮುಂದೆ ಬಲೀಂದ್ರನನ್ನು ಮಾಡಿಟ್ಟು ಷೋಡಶ ಉಪಾಚಾರಗಳಿಂದ ಪೂಜೆಯನ್ನು ಮಾಡಲಾಗುತ್ತದೆ.

Balipadyami: ಬಲಿಪಾಡ್ಯಮಿಯ ಇತಿಹಾಸ, ಆಚರಣೆಗಳ ಬಗ್ಗೆ ತಿಳಿದಿದೆಯಾ? ಈ ದಿನ ಗೋಪೂಜೆ ಏಕೆ ಮಾಡಬೇಕು? ಮಾಹಿತಿ ಇಲ್ಲಿದೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Nov 10, 2023 | 6:57 PM

ಬೆಳಕಿನ ಕಲರವವನ್ನು ಮೂಡಿಸುವ ಹಬ್ಬವೇ ದೀಪಾವಳಿ. ಪ್ರತಿ ಮನೆಯ ಮುಂದೆ ಉರಿಯುವ ಹಣತೆ, ಪಟಾಕಿ ಸದ್ದು ಮುಂತಾದವುಗಳು ಈ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸುತ್ತದೆ. ಈ ಹಬ್ಬವನ್ನು ಹಲವು ಪುರಾಣ ಕಾಲದ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸ ಸಮ್ಮಿಲನದ ದ್ಯೋತಕವಾಗಿ ಆಚರಿಸಲಾಗುತ್ತದೆ. ಪ್ರತಿ ದಿನಕ್ಕೂ ಅದರದ್ದೇ ಆದ ಮಹತ್ವಗಳಿವೆ. ದೀಪಾವಳಿಯ ವಿಶೇಷ ಆಚರಣೆಗಳಲ್ಲಿ ಬಲಿಪಾಡ್ಯಮಿಯೂ ಒಂದು. ವಿಷ್ಣುವು ವಾಮನನ ಅವತಾರದ ಕಥೆಯ ಹಿನ್ನೆಲೆಯಲ್ಲಿ ಬಲಿಪಾಡ್ಯಮಿಯ ಹಬ್ಬ ನಡೆಯುತ್ತದೆ. ಇದನ್ನು ಹಲವು ಭಾಗದಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಬಲೀಂದ್ರ ಚಕ್ರವರ್ತಿಯನ್ನು ನರಕ ಚತುರ್ದಶಿಯಂದು ಪ್ರತಿಷ್ಠಾಪಿಸಿ ಬಲಿ ಪಾಡ್ಯಮಿಯ ಸಂಜೆ ಪೂಜೆ ಮಾಡಿ ಅವನನ್ನು ಕಳುಹಿಸಿ ಕೊಡಲಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ಅದರಲ್ಲಿಯೂ ತುಳುನಾಡಿನಲ್ಲಿ ಬಲಿಪಾಡ್ಯಮಿಯ ಸಂಜೆ ಮನೆಯ ತುಳಸಿ ಕಟ್ಟೆಯ ಮುಂದೆ ಬಲೀಂದ್ರನನ್ನು ಮಾಡಿಟ್ಟು ಷೋಡಶ ಉಪಾಚಾರಗಳಿಂದ ಪೂಜೆಯನ್ನು ಮಾಡಲಾಗುತ್ತದೆ. ಆ ದಿನ ಬಲೀಂದ್ರನು ಭೂಲೋಕಕ್ಕೆ ಬಂದು ಮೂರು ಮೂಕ್ಕಾಲು ಘಳಿಗೆ ಇರುವನೆಂಬುದು ತುಳು ನಾಡಿನ ಜನರ ನಂಬಿಕೆಯಾಗಿದೆ.

ಇನ್ನು ಹಳ್ಳಿಗಳಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲು‌ ಬಲೀಂದ್ರನ ಪೂಜಿಸಬೇಕೆಂಬ ನಂಬಿಕೆ‌ ಇದೆ.‌ ಕೃಷಿ ಪ್ರಧಾನವಾದ ನಾಡಿನಲ್ಲಿ ‌ಬಲೀಂದ್ರನನ್ನು ಭೂಮಿಯ ಒಡೆಯ ಎನ್ನುವ ‌ನಂಬಿಕೆಯೊಂದಿಗೆ ಪೂಜಿಸುತ್ತಾರೆ. ರಾಜ ಬಲೀಂದ್ರ ‌ತನ್ನ‌ ಸಮೃದ್ಧ ಸಾಮ್ರಾಜ್ಯದ ಸಿರಿ ‌ಸೊಬಗನ್ನು ನೋಡಲು ಬಂದಾಗ ಅವನ ಭೂಮಿ ಸಮೃದ್ಧವಾಗಿದ್ದು ಅವನು ಸಂತೋಷದಿಂದ ಹರಸಿ, ಹಾರೈಸಿ ಹೋಗಬೇಕು ಎನ್ನುವ ಕಾರಣಕ್ಕಾಗಿ ಪ್ರತಿ ಮನೆಯಲ್ಲಿಯೂ ಹಬ್ಬದ ವಾತಾವರಣ ಕಳೆಗಟ್ಟಿರುತ್ತದೆ. ಇನ್ನು ಕೆಲವು ರೈತ ಕುಟುಂಬಗಳು ವ್ಯವಸಾಯ ಪರಿಕರಗಳಾದ ನೇಗಿಲು, ನೊಗ, ಹಾರೆ, ಪಿಕ್ಕಾಸು, ಬುಟ್ಟಿ, ಕತ್ತಿ, ಕಳಸೆ, ಸೇರು, ಪಾವುಗಳನ್ನು ಶುಚಿಗೊಳಿಸಿ ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಅವುಗಳಿಗೆ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಭತ್ತದ ರಾಶಿ, ಗದ್ದೆ, ತೋಟ, ಹಟ್ಟಿ ಗೊಬ್ಬರದ ಗುಂಡಿಗಳಲ್ಲಿ ಅಗೇಲು (ಬಲಿಗೆ ನೈವೇದ್ಯ) ಇಡುವ ಪದ್ಧತಿ ಇದೆ.

ತುಳುನಾಡಿನಲ್ಲಿ ‘ಬಲೀಂದ್ರ ಲೆಪ್ಪು’ ಬಲಿಚಕ್ರವರ್ತಿಯು ತುಳುನಾಡನ್ನು ಆಳಿದ್ದ ಚಕ್ರವರ್ತಿ ಎಂಬ ಪ್ರತೀತಿ ಇದೆ, ವರ್ಷಕ್ಕೊಮ್ಮೆ ಬರುವ ಬಲಿಯನ್ನು ಕರೆಯುವ ಆಚರಣೆಯೇ ‘ಬಲೀಂದ್ರ ಲೆಪ್ಪು’. ಕತ್ತಲಾಗುತ್ತಿದ್ದಂತೆ ಅಂಗಳದ ಸುತ್ತಲೂ ದೀಪವನ್ನು ಬೆಳಗಲಾಗುತ್ತದೆ. ಮನೆಯ ಗಂಡಸರು ಗದ್ದೆಯ ಬದಿ ಬಿದಿರಿನ ಕೋಲಿಗೆ ಬಟ್ಟೆಯನ್ನು ಸುತ್ತಿ, ಎಣ್ಣೆಯನ್ನು ಹಚ್ಚಿದ ದೊಂದಿಯನ್ನು ಉರಿಸುತ್ತಾರೆ. ನಂತರ ಬಲೆಕಿ ಮರದ ಅಡಿಯಲ್ಲಿ ಗೆರಸೆಯಲ್ಲಿ ತೆಂಗಿನಕಾಯಿ, ಅವಲಕ್ಕಿ, ಗಟ್ಟಿ ಹಾಕಿ ಬಲೀಂದ್ರ ಕೂ.. ಕೂ..ಕೂ ಎಂದು ಮೂರು ಬಾರಿ ಬಲೀಂದ್ರನನ್ನು ಕರೆಯುತ್ತಾರೆ. ನಂತರ ಗೋವಿನ ಹಟ್ಟಿಗೆ ತೆರಳಿ ಗೋವಿಗೆ, ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡುತ್ತಾರೆ.

ಇದನ್ನೂ ಓದಿ:  ನರಕ ಚತುರ್ದಶಿಯನ್ನು ಏಕೆ ಆಚರಿಸಬೇಕು? ಅದರ ಪ್ರಾಮುಖ್ಯತೆ ಏನು?

ಬಲಿ ಪಾಡ್ಯಮಿಯಂದು ಗೋಪೂಜೆಯ ಮಹತ್ವ ಮತ್ತು ಇತಿಹಾಸ?

ಬಲಿ ಪಾಡ್ಯಮಿಯ ಮತ್ತೊಂದು ವಿಶೇಷತೆ ಎಂದರೆ ಪ್ರತಿ ಮನೆಯಲ್ಲಿಯೂ ಬೆಳಗ್ಗೆ ಗೋ ಪೂಜೆಯನ್ನು ಮಾಡುತ್ತಾರೆ. ಅಂದು ಹಸುಗಳ ಮೈ ತೊಳೆದು ಅಲಂಕಾರ ಮಾಡಿ, ಮೈಗೆ ರಂಗೋಲಿ ಹಚ್ಚಿ, ಹೂ ಮಾಲೆ ಹಾಕಿ, ಆರತಿ ಮಾಡಿ, ಅವಳಿಗೆ ನೈವೇದ್ಯ ಇರಿಸಿ ಪೂಜೆ ಮಾಡಲಾಗುತ್ತದೆ. ಗೋ ಪೂಜೆ ಮಾಡಲು ಕೂಡ ಒಂದು ಹಿನ್ನೆಲೆಯಿದೆ. ಶ್ರೀ ಕೃಷ್ಣ ಬೃಂದಾವನಕ್ಕೆ ಬರುವ ಮೊದಲು ಅಲ್ಲಿನ ಜನರೆಲ್ಲ ದೇವೇಂದ್ರನನ್ನು ಪೂಜಿಸುತ್ತಿದ್ದರು. ಅದನ್ನು ಕಂಡ ಕೃಷ್ಣ ಗೋವರ್ಧನ ಪರ್ವತದಿಂದ ಸಕಲ ಅನುಕೂಲ ಪಡೆಯುತ್ತಿರುವ ಜನರು ಇಂದ್ರನನ್ನು ಪೂಜಿಸದೆ ಗೋವರ್ಧನ ಗಿರಿಯನ್ನು ಪೂಜಿಸುವ ವ್ಯವಸ್ಥೆ ‌ಮಾಡುತ್ತಾನೆ. ಇದರಿಂದ ಕೋಪಗೊಂಡ ಇಂದ್ರ, ಒಂದೇ ಸಮನೆ ಮಳೆ ಸುರಿಸಿ ಜಲಪ್ರಳಯ ಉಂಟು ಮಾಡುತ್ತಾನೆ. ಆಗ ಜನರೆಲ್ಲಾ ಕಂಗಲಾದಾಗ ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋವುಗಳಿಗೆ ಹಾಗೂ ಅಲ್ಲಿನ ವಾಸಿಗಳಿಗೆ ಆಶ್ರಯ ನೀಡಿದ. ಗೋವರ್ಧನ ಗಿರಿ ಎತ್ತಿ ಗೋಕುಲವನ್ನು ರಕ್ಷಿಸಿದ ನೆನಪಿಗಾಗಿ ‌ಗೋವುಗಳ‌ ಪೂಜೆ ಇಂದಿಗೂ ನಡೆಯುತ್ತಾ ಬಂದಿದೆ.

ದೀಪಾವಳಿಯಲ್ಲಿ ತುಳಸಿ ಪೂಜೆಗೂ ಮಹತ್ವವಿದ್ದು ಹೊಸ ಭತ್ತದಲ್ಲಿ ಮಾಡಿದ ಅವಲಕ್ಕಿಯನ್ನು ತುಳಸಿ ಕಟ್ಟೆಯ ಮುಂದೆ ನೈವೇದ್ಯ ರೂಪದಲ್ಲಿ, ಒಂದು ಖಾದ್ಯವನ್ನು ತಯಾರಿಸಿ ಇಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಕೊಯ್ಲು ಮುಗಿದವರು ಭತ್ತದ ರಾಶಿಯನ್ನು ವಿಶೇಷ ರೀತಿಯಲ್ಲಿ‌ ಪೂಜಿಸುವುದು ರೂಢಿ. ಒಟ್ಟಿನಲ್ಲಿ ಈ ಮೂರು ದಿನಗಳು ಮನೆಯ ಸುತ್ತಲೂ ದೀಪ ಬೆಳಗಿಸಿ ಅಂಧಕಾರ ಮರೆಯಾಗಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:41 pm, Fri, 10 November 23

ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, 7 ವರ್ಷದ ಮಗು ಸಾವು
ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, 7 ವರ್ಷದ ಮಗು ಸಾವು
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್