ಲೆಕ್ಸ್ ಫ್ರೀಡ್ಮ್ಯಾನ್ ಪೋಡ್ಕ್ಯಾಸ್ಟ್: ಆಡಳಿತ ಸುಧಾರಣೆ ಬಗ್ಗೆ ಪ್ರಧಾನಿ ಮೋದಿ ಮಾತು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಆಡಳಿತ ಸುಧಾರಣೆಗಳನ್ನು ಎತ್ತಿ ತೋರಿಸಿದ್ದಾರೆ. ನೇರ ನಗದು ವರ್ಗಾವಣೆ (DBT) ಪದ್ದತಿಯ ಮೂಲಕ 10 ಕೋಟಿ ನಕಲಿ ಫಲಾನುಭವಿಗಳನ್ನು ಗುರುತಿಸಿ ತೆಗೆದುಹಾಕಲಾಗಿದೆ, ಇದರಿಂದಾಗಿ 3 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ. ಹೆಚ್ಚುವರಿಯಾಗಿ, 1500 ಬಳಕೆಯಲ್ಲಿಲ್ಲದ ಕಾನೂನುಗಳು ಮತ್ತು 45000ಕ್ಕೂ ಹೆಚ್ಚು ಅನುಸರಣೆಗಳನ್ನು ರದ್ದುಗೊಳಿಸಲಾಗಿದೆ, ಇದು ಆಡಳಿತವನ್ನು ಸುಗಮಗೊಳಿಸುತ್ತದೆ.
ನವದೆಹಲಿ, ಮಾರ್ಚ್ 16: ಅಮೆರಿಕನ್ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ (Lex Fridman) ಸುದೀರ್ಘ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ರಮುಖ ಆಡಳಿತ ಸುಧಾರಣೆಗಳ ಬಗ್ಗೆ ಒತ್ತಿ ಹೇಳಿದರು. ತಮ್ಮ ಸರ್ಕಾರವು ಕಲ್ಯಾಣ ಯೋಜನೆಗಳಿಂದ 10 ಕೋಟಿ ನಕಲಿ ಫಲಾನುಭವಿಗಳನ್ನು ಗುರುತಿಸಿ ತೆಗೆದುಹಾಕಿದೆ. ಇದರಿಂದ 3 ಲಕ್ಷ ಕೋಟಿ ರೂ ಉಳಿತಾಯವಾಗಿದೆ. ಜೊತೆಗೆ ಆಡಳಿತವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ 1,500 ಬಳಕೆಯಲ್ಲಿಲ್ಲದ ಕಾನೂನುಗಳು ಮತ್ತು 45000ಕ್ಕೂ ಹೆಚ್ಚು ಅನುಸರಣೆಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.