ಮನೆ ಬಾಗಿಲಿಗೆ ಸ್ವಸ್ತಿಕ ಚಿಹ್ನೆ ಹಾಕಿ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ತೆಲುಗು ಕುಟುಂಬ

ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡ ತೆಲುಗು ಕುಟುಂಬವೊಂದು ತಮ್ಮ ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ' ಚಿಹ್ನೆಯ ಚಿತ್ರ ಅಳವಡಿಸಿ ಸಂಕಷ್ಟಕ್ಕೆ ಸಿಲುಕಿದೆ.

ಮನೆ ಬಾಗಿಲಿಗೆ ಸ್ವಸ್ತಿಕ ಚಿಹ್ನೆ ಹಾಕಿ ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ತೆಲುಗು ಕುಟುಂಬ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:May 19, 2023 | 6:28 PM

ಜೆದ್ದಾ: ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡ ತೆಲುಗು ಕುಟುಂಬವೊಂದು ತಮ್ಮ ಮನೆಯ ಮುಖ್ಯ ದ್ವಾರದ ಮೇಲೆ ‘ಸ್ವಸ್ತಿಕ’ ಚಿಹ್ನೆಯ ಚಿತ್ರ ಅಳವಡಿಸಿ ಸಂಕಷ್ಟಕ್ಕೆ ಸಿಲುಕಿದೆ. ‘ಸ್ವಸ್ತಿಕ’ ಚಿಹ್ನೆಯು ಹಿಂದೂಗಳಿಗೆ ಪವಿತ್ರವಾಗಿದೆ. ಹೊಸ ವಾಹನಗಳು ಮತ್ತು ಮನೆಗಳ ಮೇಲೆ ಚಿಹ್ನೆಯನ್ನು ಮುದ್ರಿಸುವ ಕ್ರಮ ಸಾಮಾನ್ಯವಾಗಿದೆ. ಇದುವೇ ತೆಲುಗು ಕುಟುಂಬದವರಿಗೆ ಮುಳುವಾಗಿದೆ. ಗುಂಟೂರಿನ ಎಂ ಅರವಿಂದ್ ಅವರು ಇತ್ತೀಚೆಗಷ್ಟೇ ಸೌದಿ ಅರೇಬಿಯಾಕ್ಕೆ ಬಂದು ಪೂರ್ವ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವರು, ತಮ್ಮ ಫ್ಲಾಟ್‌ನ ಮುಖ್ಯ ದ್ವಾರದ ಮೇಲೆ ಚಿಹ್ನೆಯನ್ನು ಬಿಡಿಸುವ ಮೂಲಕ ಕುಟುಂಬ ಸಮೇತ ಸೌದಿ ಜೀವನವನ್ನು ಇತ್ತೀಚೆಗೆ ಆರಂಭಿಸಿದ್ದರು.

ಅದೇ ಅಪಾರ್ಟ್​​ಮೆಂಟ್​ನಲ್ಲಿ ವಾಸಿಸುವ ಅರಬ್ ವ್ಯಕ್ತಿ ಈ ಚಿಹ್ನೆಯನ್ನು ಗಮನಿಸಿ, ತಪ್ಪಾಗಿ ಭಾವಿಸಿ ನಾಜಿ ಲಾಂಛನವನ್ನು ಪೋಸ್ಟ್ ಮಾಡಿದ್ದಾರೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾರೆ. ನಾಜಿ ಲಾಂಛನವು ವಾಸ್ತವವಾಗಿ 45 ಡಿಗ್ರಿಳಷ್ಟು ಓರೆಯಾಗಿದೆ ಮತ್ತು ‘ಸ್ವಸ್ತಿಕ’ ಚಿಹ್ನೆಯಿಂದ ಭಿನ್ನವಾಗಿದೆ, ಆದರೆ ಅರಬ್ ವ್ಯಕ್ತಿಗೆ ಸ್ಪಷ್ಟವಾಗಿ ಈ ವ್ಯತ್ಯಾಸ ತಿಳಿದಿರಲಿಲ್ಲ.

ಅವರು ಮೊದಲು ಅರವಿಂದ್ ಅವರ ಕುಟುಂಬಕ್ಕೆ ಚಿಹ್ನೆಯನ್ನು ಅಳಿಸಲು ವಿನಂತಿಸಿದರು. ಆದರೆ, ಅವರೊಗೆ ಮನವರಿಕೆ ಮಾಡಿಕೊಡಲು ಮುಂದಾದ ಅರವಿಂದ್, ಚಿಹ್ನೆಯು ನಾಜಿ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಹಿಂದೂ ಸಂಪ್ರದಾಯ ಪ್ರಕಾರ ಮಂಗಳಕರವಾದದ್ದು ಎಂದು ವಿವರಿಸಲು ಪ್ರಯತ್ನಿಸಿದರು. ಆದರೆ, ಅರಬ್ ವ್ಯಕ್ತಿಗೆ ಮನವರಿಕೆಯಾಗಲಿಲ್ಲ ಮತ್ತು ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಿದರು. ಪರಿಣಾಮವಾಗಿ ಅಲ್ಲಿನ ಪೊಲೀಸರು ಅರವಿಂದ ಅವರನ್ನು ಬಂಧಿಸಿದ್ದಾರೆ.

ಮತ್ತಷ್ಟು ಓದಿ: Indigo Flight: ಇಂಡಿಗೋ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ, ಇಬ್ಬರು ಪ್ರಯಾಣಿಕರ ಬಂಧನ

ಅರವಿಂದ್ ಅವರ ಪತ್ನಿ ಲೀಲಾ ಕುಮಾರಿ ಈಗ ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ತೆಲುಗು ಸಾಮಾಜಿಕ ಕಾರ್ಯಕರ್ತ ಮುಝಾಮಿಲ್ ಶೇಖ್ ಅವರನ್ನು ಸಂಪರ್ಕಿಸಿದ್ದಾರೆ. ಭಾರತೀಯ ಸಮುದಾಯದ ಪ್ರಮುಖ ಸ್ವಯಂಸೇವಕ ನಾಸ್ ವೊಕ್ಕಮ್ ಕೂಡ ಅರವಿಂದ್ ಅವರ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ.

‘ಸ್ವಸ್ತಿಕ’ ಚಿಹ್ನೆಯ ಬಗ್ಗೆ ಪರಿಚಯವಿಲ್ಲದ ಜನರು ಅದನ್ನು ನಾಜಿ ಚಿಹ್ನೆಯೊಂದಿಗೆ ತಪ್ಪಾಗಿ ಗ್ರಹಿಸಿದ ಹಲವಾರು ನಿದರ್ಶನಗಳಿವೆ. ಆದರೆ, ಸೌದಿಯಲ್ಲಿ ಇದು ಮೊದಲ ನಿದರ್ಶನವಾಗಿರಬಹುದು ಎಂದು ಭಾವಿಸಲಾಗಿದೆ. ಈ ಚಿಹ್ನೆಯನ್ನು ಬಳಸಿದ್ದಕ್ಕಾಗಿ ಭಾರತೀಯನೊಬ್ಬ ಜೈಲುಪಾಲಾಗುವಂತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:28 pm, Fri, 19 May 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್