Nitya Puja rituals: ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವಾಗ ಈ ಇಪ್ಪತ್ತು ಸರಳ ಆಚಾರ-ವಿಚಾರಗಳನ್ನು ಪಾಲಿಸಿ

| Updated By: ಸಾಧು ಶ್ರೀನಾಥ್​

Updated on: Jan 03, 2022 | 6:55 AM

ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ, ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ. (ಅನಿವಾರ್ಯ ಪರಿಸ್ಥಿತಿಗಳಲ್ಲಿ, ಗ್ರಹಣ ಕಾಲದಲ್ಲಿ ಇತ್ಯಾದಿ ಸಮಯ ಸಂದರ್ಭಗಳಲ್ಲಿ ಮಾಡಬಹುದು)

Nitya Puja rituals: ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವಾಗ ಈ ಇಪ್ಪತ್ತು ಸರಳ ಆಚಾರ-ವಿಚಾರಗಳನ್ನು ಪಾಲಿಸಿ
ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವುದು: ಈ 20 ಸರಳ ಆಚಾರ-ವಿಚಾರಗಳನ್ನು ಪಾಲಿಸಿ
Follow us on

ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು. ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೆ ಮನೆಗೆ, ನಮಗೆ ರಕ್ಷಣೆ. ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರುಗಳೂ ನಮ್ಮ ಮನೆಯನ್ನು ರಕ್ಷಿಸುವುದಿಲ್ಲ. ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು ಮನೆದೇವರು. ಹಾಗಾಗಿ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವುದು: ಈ ಕೆಳಗಿನ ಇಪ್ಪತ್ತು ಸರಳ ಆಚಾರ-ವಿಚಾರಗಳನ್ನು ಪಾಲಿಸಿ

1. ದೇವರ ಮನೆ, ದೀಪಗಳು, ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತವೋ ಅಷ್ಟೂ ಶುಭ ಫಲ ಇರುತ್ತದೆ.

2. ದೇವರ ಮನೆಯಲ್ಲಿ ಒಡೆದಿರುವ, ಭಿನ್ನಗೊಂಡಿರುವ ವಿಗ್ರಹಗಳು, ಫೋಟೋಗಳು, ಯಂತ್ರಗಳನ್ನು ಇಡಬಾರದು.

3. ದೇವರ ಮನೆಯಲ್ಲಿ ಕಸ ಗುಡಿಸುವಾಗ ಬಟ್ಟೆಯಿಂದ ಗುಡಿಸುವುದು ಸೂಕ್ತ/ಸಮಂಜಸ.

4. ದೇವರ ಮನೆಯನ್ನು ಅರಿಶಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸುತ್ತದೆ. ಹಣದ ಸಮಸ್ಯೆ ನಿವಾರಣೆಯಾಗುತ್ತದೆ, ನೆಲ ಒಣಗುವವರೆಗೂ ನೆಲ ತುಳಿಯಬೇಡಿ.

5. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳನ್ನು ಇಡುವುದು ಬೇಡ. ವಿಗ್ರಹಗಳು ಜಾಸ್ತಿಯಾದರೆ ನೈವೇದ್ಯದ ಪ್ರಮಾಣವೂ ಜಾಸ್ತಿ ಮಾಡಬೇಕಾಗುತ್ತದೆ ಎಂಬುದನ್ನ ಮರೆಯಬೇಡಿ!

6. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ, ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ. (ಅನಿವಾರ್ಯ ಪರಿಸ್ಥಿತಿಗಳಲ್ಲಿ, ಗ್ರಹಣ ಕಾಲದಲ್ಲಿ ಇತ್ಯಾದಿ ಸಮಯ ಸಂದರ್ಭಗಳಲ್ಲಿ ಮಾಡಬಹುದು)

7. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಮಿಯ ಮರುದಿನ ದೇವರ ವಿಗ್ರಹಗಳನ್ನು ಅರಿಶಿನದ ನೀರಿನಿಂದ ಶುದ್ಧ ಮಾಡಿ.

8. ದೇವರ ಪೂಜೆಗೆ ಆಂಜನೇಯ ಸ್ವಾಮಿ ಇರುವ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆ ಬಾರಿಸಬೇಕು.

9. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತಾರೆ. ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗುವ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ.

10. ದೇವರ ಪೂಜೆ ಮಾಡುವಾಗ ಆಕಳಿಕೆ, ಕೋಪ, ಮಾತು, ಹರಟೆ ಇವೆಲ್ಲದರಿಂದ ದೂರ ಇರಿ, ಅಸಂಜಸ ಚಟುವಟಿಕೆ ಬೇಡ.

11. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ.

12. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಬೇಕು. ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು. ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ.

13. ಹಣೆಯಲ್ಲಿ ಕುಂಕುಮ, ಗಂಧ ಅಥವಾ ಭಸ್ಮ… ಇತ್ಯಾದಿ ಯಾವುದಾದರೂ ಧರಿಸದೇ ಪೂಜೆ ಮಾಡಬಾರದು. ಇಲ್ಲದಿದ್ದರೆ ಪೂಜಾಫಲ ನಶಿಸುವುದು.

14. ದೇವರ ಪೂಜೆಗೆ ಹಸಿಯಾದ ಹಾಲನ್ನು ಮಾತ್ರ ಬಳಸಿ…

15. ದೇವರ ನೈವೇದ್ಯ ಮಾಡುವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ. ನೈವೇದ್ಯ ಮಾಡುವಾಗ ತುಳಸೀ ಪತ್ರೆ ಬಳಸಬೇಕು.

16. ದೇವರ ಪೂಜೆಯನ್ನ ಸಂಕಲ್ಪ ಇಲ್ಲದೇ ಮಾಡಬೇಡಿ. ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆ ಬೇಗ ಈಡೇರುತ್ತದೆ.

17. ದೇವರ ಮನೆಯಲ್ಲಿ ಜೋಡಿ ಚಿಕ್ಕದೀಪಗಳ ಜೋಡಿಸಿ ಇಡಿ. ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ.

18. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು. ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೆ ಮನೆಗೆ, ನಮಗೆ ರಕ್ಷಣೆ. ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರುಗಳೂ ನಮ್ಮ ಮನೆಯನ್ನು ರಕ್ಷಿಸುವುದಿಲ್ಲ. ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು ಮನೆದೇವರು.

19. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ ಮಹಾಲಕ್ಷ್ಮೀ ಸಾನಿಧ್ಯ ಇರುತ್ತದೆ.

20. ಶ್ರೀ ಚಕ್ರ, ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮ, ಎರಡೂ ಪಾದ ಕಾಣಿಸುವ ಮಹಾಲಕ್ಷ್ಮೀ… ಇತ್ಯಾದಿ ಈ ದೇವರುಗಳೆಲ್ಲಾ ಅಷ್ಟೈಶ್ವರ್ಯಗಳನ್ನು ಪ್ರದಾನಿಸುವ ದೇವರುಗಳು. ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ.

Also Read:
Pancha Bhootas: ಪಂಚಭೂತಗಳು ನಮ್ಮ ದೇಹದೊಂದಿಗೆ ಹೇಗೆ ಬೆರೆತುಕೊಂಡಿವೆ ಮತ್ತು ಅವುಗಳ ಗುಣವಿಶೇಷಗಳು ಏನು?

Published On - 6:25 am, Mon, 3 January 22