Pancha Bhootas: ಪಂಚಭೂತಗಳು ನಮ್ಮ ದೇಹದೊಂದಿಗೆ ಹೇಗೆ ಬೆರೆತುಕೊಂಡಿವೆ ಮತ್ತು ಅವುಗಳ ಗುಣವಿಶೇಷಗಳು ಏನು?

ಮೇಘದೂತ: ಆಕಾಶದ ಗುಣ ಶಬ್ದ. ಆಕಾಶದಲ್ಲಿ ಶಬ್ದ ಪ್ರವಹಿಸಬಲ್ಲದು. 'ಓಂ' ಕಾರವು ನಿತ್ಯನಿರಂತರವಾಗಿ ಆಕಾಶದಲ್ಲಿ ಪ್ರವಹಿಸುತ್ತಿದೆ. ಅದೇ ಆಕಾಶದಲ್ಲಿ ಭೂಮಿ ಅಥವಾ ಇತರ ಗ್ರಹಗಳ ಸುತ್ತ ವ್ಯಾಪಿಸಿರುವ ವಾಯುವಿನಲ್ಲಿ ಶಬ್ದ ಮತ್ತು ಸ್ಪರ್ಶಗಳ ಗುಣಗಳಿವೆ. ಬೀಸುವ ಗಾಳಿಯ ಶಬ್ದವನ್ನು ನಾವು ಕೇಳಬಹುದು. ಅಲ್ಲದೆ ಗಾಳಿಯ ಮೂಲಕ ಶಬ್ದವು ಇನ್ನಷ್ಟು ವೇಗವಾಗಿ ಪ್ರವಹಿಸಬಲ್ಲದು. ಗಾಳಿಯ ಸ್ಪರ್ಶದ ಅನುಭವವೂ ನಮಗಾಗುತ್ತದೆ. ಆದರೆ ಅದಕ್ಕೆ ರೂಪವಿಲ್ಲ. ಆದ್ದರಿಂದ ವಾಯುವನ್ನು ನೋಡಲಾರೆವು.

Pancha Bhootas: ಪಂಚಭೂತಗಳು ನಮ್ಮ ದೇಹದೊಂದಿಗೆ ಹೇಗೆ ಬೆರೆತುಕೊಂಡಿವೆ ಮತ್ತು ಅವುಗಳ ಗುಣವಿಶೇಷಗಳು ಏನು?
Pancha Bhootas: ಪಂಚಭೂತಗಳು ನಮ್ಮ ದೇಹದೊಂದಿಗೆ ಹೇಗೆ ಬೆರೆತುಕೊಂಡಿವೆ ಮತ್ತು ಅವುಗಳ ಗುಣವಿಶೇಷಗಳು ಏನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 03, 2022 | 6:59 AM

ಪಂಚಭೂತಗಳು ಮತ್ತು ಅವುಗಳ ಗುಣವಿಶೇಷಗಳನ್ನು ತಿಳಿಯುವ ಪ್ರಯತ್ನ ಮಾಡೋಣ. ಈ ಗುಣವಿಷಯಗಳನ್ನೇ ಪಂಚ ತನ್ಮಾತ್ರೆಗಳು ಎಂದು ಕರೆಯುತ್ತಾರೆ. ಪಂಚಭೂತಗಳಲ್ಲಿ ಆಕಾಶ ಅತ್ಯಂತ ಸೂಕ್ಷ್ಮವಾಗಿದ್ದು ಅಥವಾ ನಿರಾಕಾರವಾದುದು. ಉಳಿದವು.. ಒಂದೊಂದೇ ಸ್ಥೂಲಗೊಳ್ಳುತ್ತಾ ಸಾಗಿ ಕೊನೆಯಲ್ಲಿ ಪೃಥ್ವಿ ಅಥವಾ ಭೂಮಿಯು ಅತ್ಯಂತ ಸ್ಥೂಲವಾದುದಾಗಿದೆ.

ಮೇಘದೂತ: ಆಕಾಶದ ಗುಣ ಶಬ್ದ. ಆಕಾಶದಲ್ಲಿ ಶಬ್ದ ಪ್ರವಹಿಸಬಲ್ಲದು. ‘ಓಂ’ ಕಾರವು ನಿತ್ಯನಿರಂತರವಾಗಿ ಆಕಾಶದಲ್ಲಿ ಪ್ರವಹಿಸುತ್ತಿದೆ. ಅದೇ ಆಕಾಶದಲ್ಲಿ ಭೂಮಿ ಅಥವಾ ಇತರ ಗ್ರಹಗಳ ಸುತ್ತ ವ್ಯಾಪಿಸಿರುವ ವಾಯುವಿನಲ್ಲಿ ಶಬ್ದ ಮತ್ತು ಸ್ಪರ್ಶಗಳ ಗುಣಗಳಿವೆ. ಬೀಸುವ ಗಾಳಿಯ ಶಬ್ದವನ್ನು ನಾವು ಕೇಳಬಹುದು. ಅಲ್ಲದೆ ಗಾಳಿಯ ಮೂಲಕ ಶಬ್ದವು ಇನ್ನಷ್ಟು ವೇಗವಾಗಿ ಪ್ರವಹಿಸಬಲ್ಲದು. ಗಾಳಿಯ ಸ್ಪರ್ಶದ ಅನುಭವವೂ ನಮಗಾಗುತ್ತದೆ. ಆದರೆ ಅದಕ್ಕೆ ರೂಪವಿಲ್ಲ. ಆದ್ದರಿಂದ ವಾಯುವನ್ನು ನೋಡಲಾರೆವು.

ಪಂಚಭೂತಗಳಲ್ಲಿ ಮೂರನೆಯದಾದ ಅಗ್ನಿಯಲ್ಲಿ ಶಬ್ದ, ಸ್ಪರ್ಶ ಮತ್ತು ರೂಪವಿದೆ. ಉರಿವ ಜ್ವಾಲೆಯ/ಬೆಂಕಿಯ ಶಬ್ದ ಕೇಳಬಹುದು. ಬೆಂಕಿಯನ್ನು ಸ್ಪರ್ಶಿಸಿದರೆ ಸುಡುವುದು. ಹೀಗಾಗಿ ಅಲ್ಲಿ ಸ್ಪರ್ಶವಿದೆ. ಮತ್ತು ನಾವು ಅದನ್ನು ನೋಡಲೂಬಹುದು. ಹೀಗಾಗಿ ಅದಕ್ಕೆ ರೂಪವಿದೆ.

ಪಂಚ ಭೂತಗಳಲ್ಲಿ ನಾಲ್ಕನೆಯದಾದ ಜಲ ಅಥವಾ ನೀರಿಗೆ ಶಬ್ದ, ಸ್ಪರ್ಶ, ರೂಪ ಹಾಗೂ ರಸದ ಗುಣವಿಶೇಷಗಳಿವೆ. ರಸವೆಂದರೆ ದ್ರವ, ಹರಿಯುವಂತದ್ದು, ಆಕಾರವಿದ್ದಾಗ್ಯೂ ನಿರ್ದಿಷ್ಟ ಆಕಾರವಿಲ್ಲದ ಗುಣ.

ಇನ್ನು ಐದನೆಯದು ಪೃಥ್ವಿ ಅಥವಾ ಭೂಮಿ ಅತ್ಯಂತ ಸ್ಥೂಲವಾಗಿದ್ದು ಶಬ್ದ, ಸ್ಪರ್ಶ, ರೂಪ, ರಸ ಹಾಗೂ ಗಂಧವುಳ್ಳದ್ದು. ನಮಗೆ ದೊರೆತಿರುವ ಪ್ರತಿಯೊಂದು ವಸ್ತುವೂ ಭೂಮಿಯಿಂದಲೇ ಬಂದದ್ದು. ಈ ವಸ್ತುಗಳಿಗೆ ನಾಲ್ಕು ಗುಣಗಳ ಜತೆಗೆ ಗಂಧ/ವಾಸನೆಯೂ ಸೇರಿಕೊಂಡಿದೆ. ಗಂಧದಲ್ಲಿ ವಾಸನೆ, ರುಚಿ, ಬಣ್ಣವೂ ಅಡಗಿದೆ.

ಹೀಗೆ ಸೂಕ್ಷ್ಮ ಆಕಾಶದಿಂದ ತೊಡಗಿ ಸ್ಥೂಲಗೊಳ್ಳುತ್ತಾ.. ಪೃಥ್ವಿಯವರೆಗೆ ಪಂಚಭೂತಗಳು ವಿಸ್ತರಿಸಿವೆ. ಜೀವಿಗಳ ಶರೀರಗಳು ಈ ಪಂಚಭೂತಗಳಿಂದ ನಿರ್ಮಿತವಾಗಿವೆ. ಆಕಾಶವು ಬಾಯಿಯಲ್ಲಿ, ಅನ್ನನಾಳಗಳಲ್ಲಿ, ಜಠರದಲ್ಲಿ, ಮೂಗಿನಲ್ಲಿ, ಮೂಗಿನ ಮೂಲಕ ಶ್ವಾಸನಾಳಗಳಲ್ಲಿ, ಕಿವಿಗಳೊಳಗೆ ವ್ಯಾಪಿಸಿಕೊಂಡಿದೆ.

ಆಕಾಶದ ಗುಣವಾದ ಶಬ್ದವು ಹೃದಯವು ರಕ್ತವನ್ನು ಪಂಪ್ ಮಾಡುವಾಗ (ಲಬ್ ಡಬ್) ಸೂಕ್ಷ್ಮ ಶಬ್ದವಾಗಿ ಹೊರಬರುವುದು. ನಮ್ಮ ಗಂಟಲ ಭಾಗದಲ್ಲಿರುವ ಧ್ವನಿಪೆಟ್ಟಿಗೆಯು ಶಬ್ದ ಹೊರಡಿಸಬಲ್ಲದು. ಪದಗಳು, ಮಾತುಗಳು, ಭಾಷೆಗಳು ಹುಟ್ಟಿದ್ದು ಅಲ್ಲಿಂದಲೇ. ಕಿವಿಯು ಶಬ್ದವನ್ನು ಕೇಳಬಲ್ಲದು.

ಉಸಿರಾಟದ ಮೂಲಕ ನಮ್ಮ ಶರೀರವನ್ನು ಜೀವಂತವಾಗಿ ಇರಿಸಲಿಕ್ಕೆ ವಾಯುವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಪ್ರಾಣವಾಯು ಅಂತಲೂ ಹೆಸರು. ನಮ್ಮ ಶರೀರದ ಕವಚವಾಗಿರುವ ಚರ್ಮವು ಸ್ಪರ್ಶಜ್ಞಾನವುಳ್ಳದ್ದು. ಸೂಕ್ಷ್ಮವಾದ ಗಾಳಿಯ ಅನುಭವವನ್ನೂ ಪಡೆಯಬಲ್ಲದು.

ಇನ್ನು ಅಗ್ನಿ. ನಮ್ಮ ಶರೀರ ಸುರಕ್ಷಿತವಾಗಿರಬೇಕಾದರೆ ದೇಹಕ್ಕೆ ಇಂತಿಷ್ಟು ಉಷ್ಣಾಂಶ ಅತ್ಯಗತ್ಯ ಎಂಬುದನ್ನು ನಾವು ಬಲ್ಲೆವು. ಜಠರಾಗ್ನಿಯು ಆ ಕೆಲಸವನ್ನು ನಿರ್ವಹಿಸುತ್ತದೆ. ಅಗ್ನಿಗೆ ಶಬ್ದ, ಸ್ಪರ್ಶ, ರೂಪಗಳಿವೆ. ಕಣ್ಣುಗಳು ರೂಪವನ್ನು ವೀಕ್ಷಿಸಬಲ್ಲವು.

ನೀರು: ನಮ್ಮ ದೇಹದಲ್ಲಿ ಹರಿಯುವ ರಕ್ತ ದ್ರವ ರೂಪದ್ದು. ನಮ್ಮ ದೇಹದಲ್ಲಿ ಸರಾಸರಿ ಶೇ. 50-60 ನೀರು ಬೆರೆತುಕೊಂಡಿದೆ. ನಾವು ತಿಂದ ಆಹಾರವು ಜೀರ್ಣವಾಗಲು ನೀರು ಬೇಕೇ ಬೇಕು. ಶರೀರ ಆರೋಗ್ಯವಾಗಿರಬೇಕಾದರೆ ವ್ಯಕ್ತಿಯು ದಿನಕ್ಕೆ 10-12 ಲೋಟ ನೀರನ್ನು ಸೇವಿಸಬೇಕಾಗುತ್ತದೆ. ನೀರಿನ ಪ್ರಮುಖ ಗುಣ ರಸ ಅಂದರೆ ದ್ರವ ರೂಪದ್ದು, ಹರಿಯುವಿಕೆ ಅದರ ಸ್ವಭಾವ.

ಇನ್ನು ಅತ್ಯಂತ ಸ್ಥೂಲವಾದ ಪಂಚಭೂತ ಪೃಥ್ವಿ ಯಾ ಭೂಮಿ ತತ್ವವು ದೇಹವು ಆಕಾರಗೊಳ್ಳಲು ಎಲುಬು, ಕೀಲು, ಅಸ್ಥಿ, ಮಾಂಸ, ಮಾಂಸಖಂಡ/ಸ್ನಾಯುಗಳ ಮೂಲಕ ಪ್ರಕಟಗೊಂಡಿದೆ ಎಂದು ಹೇಳಬಹುದು. ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ಈ ಎಲ್ಲಾ ಪಂಚಭೂತಗಳಿಂದ ಇಡೀ ದೇಹವು ಸಾಕಾರಗೊಂಡು ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಅನುಭವ ಪಡೆಯಬಲ್ಲದು.

ಪಂಚ ತನ್ಮಾತ್ರೆಗಳು (Five tanmathras) – ಶಬ್ದ (sound), ಸ್ಪರ್ಶ (touch), ರೂಪ (form), ರಸ (juice), ಗಂಧ (smell). ಪಂಚ ಮಹಾ ಭೂತಗಳು (Five bhootas) – ಆಕಾಶ (sky), ವಾಯು (air), ತೇಜಸ್ಸು (brightness), ಜಲ (water), ಭೂಮಿ (earth). ಪಂಚ ಪ್ರಾಣಗಳು (Five lives) – ವ್ಯಾನ (vyana), ಪ್ರಾಣ (life), ಸಮಾನ (equal), ಉದಾನ (udana), ಅಪಾನ (apana). ಪಂಚ ಜ್ಞಾನೇಂದ್ರಿಯಗಳು (Five senses) – ಕಿವಿ (ear), ಚರ್ಮ (skin), ಕಣ್ಣು (eye), ನಾಲಗೆ (tongue), ಮೂಗು(nose).

Also Read: Nitya Puja rituals: ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವಾಗ ಈ ಇಪ್ಪತ್ತು ಸರಳ ಆಚಾರ-ವಿಚಾರಗಳನ್ನು ಪಾಲಿಸಿ

Published On - 6:51 am, Mon, 3 January 22

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?