ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!

Garbha Sanskar: ಗರ್ಭಾವಸ್ಥೆಯಲ್ಲಿ ತಾಯಿ ಸಂಗೀತ ಕೇಳಿದರೆ, ಮಗುವಿನ ಮೆದುಳು ಅದನ್ನು ಗ್ರಹಿಸಿ ನೆನಪಿನಲ್ಲಿ ಉಳಿಸಿಕೊಂಡಿರುತ್ತದೆ. ಹುಟ್ಟಿದ ನಂತರ ಅದೇ ಹಾಡನ್ನು ನೀವು ಮಗುವಿನ ಕೋಣೆಯಲ್ಲಿ ಕೇಳಿದರೆ ಮಗು ಸುಲಭವಾಗಿ ನಿದ್ರೆಗೆ ಜಾರುತ್ತದೆ. ಅಂದರೆ, ತಾಯಿ ಗರ್ಭಾವಸ್ಥೆಯಲ್ಲಿ ಮಾಡುವ ಕೆಲಸಗಳು, ಅವಳ ಮನಸ್ಥಿತಿ ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!
ಗರ್ಭ ಸಂಸ್ಕಾರ: ಸಂಗೀತವನ್ನು ಅಬಾಲ ವೃದ್ಧರಾಗಿ ಎಲ್ಲರೂ ಇಷ್ಟಪಡುತ್ತಾರೆ, ಗರ್ಭಾವಸ್ಥೆಯಲ್ಲಿ ಸಂಗೀತದ ಮಹತ್ವ ತಿಳಿಯಿರಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 04, 2022 | 6:06 AM

ಗರ್ಭ ಸಂಸ್ಕಾರ: ಹಿಂದೂ ಧರ್ಮದಲ್ಲಿ 16 ಸಂಸ್ಕಾರಗಳು ಆಚರಣೆಯಲ್ಲಿವೆ. ಅದರಲ್ಲಿ ಗರ್ಭ ಸಂಸ್ಕಾರವೂ ಒಂದು. ಪುರಾಣದಲ್ಲಿ… ಪ್ರಹ್ಲಾದ ಗರ್ಭದಲ್ಲಿದ್ದಾಗ ನಾರದ ಕಲಿಸಿದ ವಿಷ್ಣು ನಾಮ ಜಪ ಅವನ ವ್ಯಕ್ತಿತ್ವವನ್ನು ರೂಪಿಸಿತ್ತು. ತಾಯಿ ಸುಭದ್ರೆ ಗರ್ಭದಲ್ಲಿದ್ದಾಗಲೇ ಚಕ್ರವ್ಯೂಹ ಭೇದಿಸುವ ವಿದ್ಯೆಯನ್ನು ಕಲಿತ ಅಭಿಮನ್ಯುವಿನ ಕಥೆ ಎಲ್ಲರಿಗೂ ಗೊತ್ತಿದೆ. ಗರ್ಭಸಂಸ್ಕಾರ (Garbha Samskara) ಅಂದರೆ ಹೊಟ್ಟೆಯೊಳಗೆ ಬೆಳೆಯುತ್ತಿರುವ ಮಗುವಿನಿಂದಲೇ, ಅದಕ್ಕೆ ಶಿಕ್ಷಣ ನೀಡುವುದು ಎಂದರ್ಥ. ಮಕ್ಕಳು ತಾಯಿಯ ಹೊಟ್ಟೆಯೊಳಗಿರುವಾಗಲೇ ಎಲ್ಲವನ್ನು ಗ್ರಹಿಸಿ, ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ ಎಂದು ಜ್ಞಾನಿಗಳು ಮತ್ತು ವಿಜ್ಞಾನಿಗಳು ಕೂಡ ತಿಳಿಸುತ್ತಾರೆ. ಹಾಗಾದರೆ, ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸಂಗೀತ/ಭಜನೆ ಕೇಳುವುದರಿಂದಾಗುವ (Garbha sanskar music) ಪ್ರಯೋಜನಗಳೇನೆಂದು ತಿಳಿಯೋಣ. ಹಾಡುಗಳು ಮನಸ್ಸನ್ನು ಉಲ್ಲಾಸದಿಂದಿಡುತ್ತದೆ. ಸಂಗೀತವನ್ನು ಇಷ್ಟಪಡದವರಿಲ್ಲ. ಪುಟ್ಟ ಮಕ್ಕಳಿನಿಂದ ಹಿಡಿದು ವಯಸ್ಸಾದವರು ಸಹ ಸಂಗೀತವನ್ನು ಇಷ್ಟ ಪಡುತ್ತಾರೆ. ಗರ್ಭಾವಸ್ಥೆಯಲ್ಲಿ ಸಂಗೀತ ಕೇಳುವುದರಿಂದ ಒಳಗಿರುವ ನಿಮ್ಮ ಪುಟ್ಟ ಕೂಸು (foetus in womb) ಎಷ್ಟು ಖುಷಿ ಪಡುತ್ತದೆ ಎಂದು ನಿಮಗೆ ಗೊತ್ತೇ?

1. ಮಗುವಿನ ಶಬ್ಧಗ್ರಹಿಕೆಯನ್ನು ವೃದ್ಧಿಸುತ್ತದೆ: ಬಳಸಿ ಸಂಗೀತವನ್ನು ಆಲಿಸುವುದರಿಂದ ಮಗುವಿಣ ಶಬ್ದ ಗ್ರಹಿಕೆಯ ಶಕ್ತಿ ಹಾಗು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಏನೂ ಅರ್ಥ ಆಗದೇ ಇದ್ದರೂ ಹಾಡುಗಳಿಂದ ಹೊರಬರುವ ಶಬ್ದಗಳಿಗೆ ಕಿವಿಗೊಟ್ಟು ಕೇಳುತ್ತವೆ. ಇದರಿಂದ ಮಗುವಿನ ಗ್ರಹಣ ಶಕ್ತಿ ಮತ್ತಷ್ಟು ವೃದ್ಧಿಸುತ್ತದೆ.

2. ಮಗುವಿನ ಚಲನವಲನ ವೃದ್ಧಿಸುತ್ತದೆ: ನೀವು ಹಾಡುಗಳನ್ನು ಆಲಿಸುವಾಗ, ಶಬ್ದ ಹಾಗು ತಾಳಗಳಿಗೆ ಅನುಗುಣವಾಗಿ ಮಗು ಹೊಟ್ಟೆಯೊಳಗೆ ಚಲನೆ ಮಾಡುವುದು, ಕಾಲಿನಿಂದ ಹೊಟ್ಟೆಗೆ ಓದಿಯುವುದನ್ನು ಮಾಡುತ್ತದೆ. ಇದು ಶಬ್ಧಗಳಿಗೆ ಮಗು ಹೇಗೆ ಪ್ರತಿಕ್ರೊಯಿಸುತ್ತದೆ ಎಂದು ತಿಳಿಸುತ್ತದೆ.

3. ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ: ಕೇವಲ ಮಾನಸಿಕವಲ್ಲ, ಶಾರೀರಿಕ ಬೆಳವಣಿಗೆಗೂ ಸಂಗೀತ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕರ್ಕಶ ಹಾಡುಗಳು ಮಗುವನ್ನು ಕೊಪೋದ್ರಿಕ್ತರನ್ನಾಗಿ ಮಾಡುತ್ತದೆ. ಆದರೆ ಮೃದು ಸಂಗೀತ ಮಗುವಿನ ಮನಸ್ಸನ್ನು ತಿಳಿಗೊಳಿಸಿ, ಹುಟ್ಟಿದ ನಂತರ ಜೋಗುಳದಂತೆ ಅನ್ನಿಸಿ ನಿದ್ರೆಗೆ ಜಾರುತ್ತದೆ.

4. ಮಗುವಿನ ಮನಸ್ಸಿನ ಒತ್ತಡ ಕಡಿಮೆಗೊಳಿಸುತ್ತದೆ: ಒತ್ತಡ ಕೇವಲ ದೊಡ್ದವರಿಗಲ್ಲ, ಹೊಟ್ಟೆಯಲ್ಲಿರುವ ನಿಮ್ಮ ಕಂದಮ್ಮಗಳು ಕೂಡ ಒತ್ತಡಕ್ಕೆ ಒಳಗಾಗುತ್ತವೆ. ಸಂಗೀತ ಕೇಳುವುದರಿಂದ ಮಗುವಿನ ಮನಸ್ಸು ಪ್ರಶಾಂತವಾಗಿ, ಚೆನ್ನಾಗಿ ನಿದ್ರೆ ಮಾಡುತ್ತದೆ.

5. ಹುಟ್ಟಿದ ನಂತರ, ಜೋಗುಳದಂತೆ.. ಗರ್ಭಾವಸ್ಥೆಯಲ್ಲಿ ತಾಯಿ ಸಂಗೀತ ಕೇಳಿದರೆ, ಮಗುವಿನ ಮೆದುಳು ಅದನ್ನು ಗ್ರಹಿಸಿ ನೆನಪಿನಲ್ಲಿ ಉಳಿಸಿಕೊಂಡಿರುತ್ತದೆ. ಹುಟ್ಟಿದ ನಂತರ ಅದೇ ಹಾಡನ್ನು ನೀವು ಮಗುವಿನ ಕೋಣೆಯಲ್ಲಿ ಕೇಳಿದರೆ ಮಗು ಸುಲಭವಾಗಿ ನಿದ್ರೆಗೆ ಜಾರುತ್ತದೆ. ಇವೆಲ್ಲವುದರಿಂದ ನಮಗೆ ತಿಳಿದುಬರುವುದು, ತಾಯಿ ಗರ್ಭಾವಸ್ಥೆಯಲ್ಲಿ ಮಾಡುವ ಕೆಲಸಗಳು, ಅವಳ ಮನಸ್ಥಿತಿ ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಗರ್ಭಾವಸ್ಥೆಯನ್ನು ಸಂತೋಷದಿಂದ ಅನುಭವಿಸಿ. (ಸತ್ಸಂಗ ಸಂಗ್ರಹ)

Also Read: Nitya Puja rituals: ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವಾಗ ಈ ಇಪ್ಪತ್ತು ಸರಳ ಆಚಾರ-ವಿಚಾರಗಳನ್ನು ಪಾಲಿಸಿ

Also Read: Pancha Bhootas: ಪಂಚಭೂತಗಳು ನಮ್ಮ ದೇಹದೊಂದಿಗೆ ಹೇಗೆ ಬೆರೆತುಕೊಂಡಿವೆ ಮತ್ತು ಅವುಗಳ ಗುಣವಿಶೇಷಗಳು ಏನು?

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ