ರಾಮನಲ್ಲಿಟ್ಟಿದ್ದ ಬೇಡಿಕೆಯನ್ನು ಪೂರೈಸಿದ ಕೃಷ್ಣ, ಗೋವರ್ಧನ ಬೆಟ್ಟಕ್ಕಿದೆ ರಾಮ-ಕೃಷ್ಣನ ಲಿಂಕ್

ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಕಪಿಗಳು ಬಂಡೆ, ಮಹಾ ಪರ್ವತಗಳನ್ನು ಎತ್ತಿ ತಂದು ಪೂರೈಸುತ್ತಿದ್ದರು. ಹನುಮಂತನ ಮಹಾ ಬಲದಿಂದಲೇ ಸೇತುವೆ ಪೂರ್ಣವಾಯಿತು ಎನ್ನಬಹುದು. ಕೊನೆಗೆ ಉಳಿದ ಸ್ವಲ್ಪ ಭಾಗ ಮುಚ್ಚಲು, ಹನುಮಂತನು ಗೋವರ್ಧನ ಗಿರಿಯನ್ನು ಕೀಳಲು ಪ್ರಯತ್ನಿಸಿದ.

ರಾಮನಲ್ಲಿಟ್ಟಿದ್ದ ಬೇಡಿಕೆಯನ್ನು ಪೂರೈಸಿದ ಕೃಷ್ಣ, ಗೋವರ್ಧನ ಬೆಟ್ಟಕ್ಕಿದೆ ರಾಮ-ಕೃಷ್ಣನ ಲಿಂಕ್
ರಾಮನಲ್ಲಿಟ್ಟಿದ್ದ ಬೇಡಿಕೆಯನ್ನು ಪೂರೈಸಿದ ಕೃಷ್ಣ, ಗೋವರ್ಧನ ಬೆಟ್ಟಕ್ಕಿದೆ ರಾಮ-ಕೃಷ್ಣನ ಲಿಂಕ್
Follow us
TV9 Web
| Updated By: ಆಯೇಷಾ ಬಾನು

Updated on: Jan 01, 2022 | 7:15 AM

ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದಲ್ಲಿ ಶ್ರೀ ರಾಮ, ವಾನರ ಸೇನೆಯಿಂದ ನಿರ್ಮಿಸಿದ ಸೇತುವೆ ವೇಳೆ ನಡೆದ ಘಟನೆಗೂ ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನ ಬೆಟ್ಟ ಎತ್ತಿದ್ದಕ್ಕೂ ಇದೆ ಸಂಬಂಧ. ಹಾಗಾದ್ರೆ ಬನ್ನಿ ರಾಮ ಸೇತುವೆ ಕಟ್ಟಿದ ಸಂದರ್ಭಕ್ಕೂ ಕೃಷ್ಣನು ಬೆಟ್ಟ ಎತ್ತಿದ್ದಕ್ಕೂ ಏನು ಸಂಬಂಧ ಎಂಬುವುದನ್ನು ಇಲ್ಲಿ ತಿಳಿಯಿರಿ.

ಸೀತಾಪಹರಣದ ನಂತರ ರಾಮ ಭಕ್ತ ಹನುಮಂತನು ಸೀತೆಯನ್ನು ಹುಡುಕುತ್ತಿರುವಾಗ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟ ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿದನು. ಬಳಿಕ ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ ಲಂಕಾಪುರಿಯನ್ನು ತನ್ನ ಬಾಲದ ಸಹಾಯದಿಂದ ಬೆಂಕಿಯಿಂದ ಸುಟ್ಟು ಮತ್ತೆ ಸಾಗರವನ್ನು ದಾಟಿ ಶ್ರೀರಾಮನ ಬಳಿ ಬಂದು ಸೀತೆಯನ್ನು ಕಂಡು ಹಿಡಿದ ಶುಭ ಸುದ್ದಿಯನ್ನು ತಿಳಿಸುತ್ತಾನೆ. ಸಂತೋಷಭರಿತನಾದ ಶ್ರೀರಾಮನು ರಾವಣನ ಸೆರೆಯಿಂದ ಸೀತೆಯನ್ನು ಬಿಡಿಸಿ ತರಲು ವಾನರ ಸೈನ್ಯದ ಸಮೇತ ಈಗಿನ ರಾಮೇಶ್ವರದ ಬಳಿಯಿರುವ ಧನುಷ್ಕೋಟಿಯ ಸಮುದ್ರತೀರಕ್ಕೆ ಬರುತ್ತಾನೆ.

ಋಷಿ ಮುನಿಗಳ ಶಾಪ, ವರವಾಯ್ತು ಆಗ ಸಮುದ್ರ ನೋಡಿ ವಾನರ ಸೇನೆ ಜೊತೆ ಹೇಗೆ ಈ ಸಮುದ್ರ ದಾಡುವುದು ಎಂಬ ಚಿಂತೆಯಾಗುತ್ತೆ. ಈ ವೇಳೆ ಇದರಲ್ಲಿ ವಿಶ್ವಕರ್ಮರಿಂದ ಶಾಪ ಪಡೆದ ವಾನರ ಪುತ್ರರಾದ ನಳ – ನೀಲರ ಸಹಕಾರ ಸಮಸ್ಯೆಯನ್ನು ದೂರಾಗಿಸಿತು. ಅವರ ತುಂಟತನದ ಸ್ವಭಾವದಿಂದಾಗಿ, ಅವರು ಹೆಚ್ಚಾಗಿ ಋಷಿಮುನಿಗಳ ವಿಗ್ರಹಗಳನ್ನು ನೀರಿನಲ್ಲಿ ಎಸೆಯುತ್ತಿದ್ದರು. ಪರಿಣಾಮವಾಗಿ, ಈ ಕೋತಿಗಳು ಯಾವುದೇ ವಸ್ತುಗಳನ್ನು ನೀರಿಗೆ ಎಸೆದರೂ ಆ ವಸ್ತು ಮುಳುಗುವುದಿಲ್ಲವೆಂದು ಋಷಿ ಮುನಿಗಳು ನಳ-ನೀಲರಿಗೆ ಶಾಪವಿತ್ತರು. ಅವರಿಗೆ ಋಷಿಮುನಿಗಳು ನೀಡಿದ್ದ ಈ ಶಾಪವೇ ರಾಮ ಸೇತುವೆ ನಿರ್ಮಾಣಕ್ಕೆ ಸಹಕಾರಿಯಾಯಿತು.

ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಕಪಿಗಳು ಬಂಡೆ, ಮಹಾ ಪರ್ವತಗಳನ್ನು ಎತ್ತಿ ತಂದು ಪೂರೈಸುತ್ತಿದ್ದರು. ಹನುಮಂತನ ಮಹಾ ಬಲದಿಂದಲೇ ಸೇತುವೆ ಪೂರ್ಣವಾಯಿತು ಎನ್ನಬಹುದು. ಕೊನೆಗೆ ಉಳಿದ ಸ್ವಲ್ಪ ಭಾಗ ಮುಚ್ಚಲು, ಹನುಮಂತನು ಗೋವರ್ಧನ ಗಿರಿಯನ್ನು ಕೀಳಲು ಪ್ರಯತ್ನಿಸಿದ. ಆದರೆ ಕೀಳಲಾಗಲಿಲ್ಲ. ಆಗ ಆ ಪರ್ವತರಾಜನು, “ನನಗೆ ರಾಮದರ್ಶನ ಮಾಡಿಸುವೆಯಾದರೆ, ರಾಮನ ಚರಣದಿಂದ ನನ್ನನ್ನು ತುಳಿಸುವೆಯಾದರೆ ನಾನು ನಿನ್ನೊಡನೆ ಬರುವೆ” ಎಂದ. ಹನುಮಂತ ಅದಕ್ಕೊಪ್ಪಿ ಪರ್ವತವೆತ್ತಿ ತರಲು, ಕಪಿಗಳು ಬೇರೆ ಪರ್ವತ ತಂದು ಉಳಿದ ಭಾಗ ಮುಚ್ಚಿಬಿಟ್ಟಿದ್ದರು. ಆಗ ಮಾರುತಿ ನಿರುಪಾಯನಾಗಿ ಕ್ಷಮೆ ಕೇಳಿದ. ಆಗ ಗೋವರ್ಧನನು ರಾಮನಿಗೆ ನನ್ನನ್ನು ಕಾಲಿನಿಂದ ತುಳಿಯಲು ಸಾಧ್ಯವಾಗದಿದ್ದರೆ, ಕೈಹಿಡಿದು ನನ್ನನ್ನು ಎತ್ತಿ ಜಗತ್ತಿಗೆ ಪರಿಚಯ ಮಾಡಿಸಲಿ. ಒಂದೋ ನಾನು ಅವನಿಂದ ತುಳಿಯಲ್ಪಡಬೇಕು ಅಥವಾ ಎತ್ತಲ್ಪಡಬೇಕು ಎಂದ. ಹನುಮಂತ ಹಾಗೇ ರಾಮಚಂದ್ರನಿಗೆ ವಿನಂತಿಸಿದ. ಮುಂದೆ ಕೃಷ್ಣಾವತಾರದಲ್ಲಿ ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನ ಬೆಟ್ಟ ಎತ್ತಿದ.

ಇದನ್ನೂ ಓದಿ: ನಾರಾಯಣ ಪ್ರಿಯ ನಾರದನಿಂದ ವಿಷ್ಣುವಿಗೆ ಶಾಪ, ರಾಮನ ಅವತಾರದಲ್ಲಿ ಹನುಮಂತನ ಸಹಾಯ ಪಡೆಯಲು ಕಾರಣವಾಗಿದ್ದು ಇದೇ ಕೋಪ

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ