Horoscope Today 18 January 2025: ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದು

ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.

Horoscope Today 18 January 2025: ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದು
ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದು
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 18, 2025 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಫಲ್ಗುಣೀ, ಯೋಗ: ಶೋಭನ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 23 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09: 53 ರಿಂದ 11:18ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:08 ರಿಂದ 03:33 ರವರೆಗೆ, ಗುಳಿಕ ಬೆಳಿಗ್ಗೆ 07:03 ರಿಂದ 08:28 ರವರೆಗೆ.

ಮೇಷ ರಾಶಿ: ನೀವು ವೃತ್ತಿಯ ಜೀವನನ್ನು ಸಹಜವಾಗಿ ಸ್ವೀಕರಿಸುವಿರಿ. ಸಂಗಾತಿಯ ಭಾವನೆಗೆ ಸ್ಪಂದಿಸಿದಷ್ಟು ನೀವು ಸುಖಿಗಳು. ಯಾವ ವಸ್ತುವನ್ನು ಎಲ್ಲಿ ಇಡಬೇಕು ಎನ್ನುವ ಔಚಿತ್ಯ ಗೊತ್ತಿರಲಿ. ಅಚಾನಕ್ಕಾಗಿ ಬಂದ ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡೂ ಸಂತೋಷದಿಂದ ಇರುವುದು ಗೊತ್ತು. ಹೊಸ ವಸ್ತ್ರಗಳನ್ನು ಧರಿಸುವಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ‌ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ಬದಲಾಣೆಗೆ ನೀವು ತೆರೆದುಕೊಳ್ಳಬೇಕಾದೀತು. ಸಂಗಾತಿಯನ್ನು ಭೇಟಿಯಾಗಲು ನಾನಾ ಕಾರಣವನ್ನು ಹುಡುಕುವಿರಿ. ನಿಮ್ಮ ಮಾತಿನಿಂದ ತಾಯಿಗೆ ನೋವಾಗಬಹುದು.

ವೃಷಭ ರಾಶಿ; ಉನ್ನತ ವ್ಯಾಸಂಗಕ್ಕೆ ಅವಕಾಶವು ಹುಡುಕುವಿರಿ. ಕಲಾವಿದರ ವರ್ತನೆಗೆ ಅಪ್ರಶಂಸೆಯು ಬರಬಹುದು. ಕಚೇರಿದಲ್ಲಿ ಇಂದು ಸಿಗುವ ಉನ್ನತ ಅಧಿಕಾರಿಗಳ ಬೆಂಬಲದಿಂದ ನೀವು ಖುಷಿಯಾಗುವಿರಿ ಉದ್ಯೋಗದಲ್ಲಿ ಪ್ರಗತಿಯ ಕಡೆ ಮುಖಮಾಡುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಕುಟುಂಬದಿಂದ ದೂರ ಉಳಿಯಬೇಕಾದ ಸಂದರ್ಭ ಬರಬಹುದು. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗುವುದು. ಹಣದ ಅಭಾವವಿದ್ದರೂ ಖರ್ಚನ್ನು‌ ಮಾಡಬೇಕಾದ ಸ್ಥಿತಿಯು ಬರಬಹುದು. ಮನೆಯಿಂದ ದೂರವಿದ್ದು ಬೇಸರವಾಗಲಿದೆ. ಭವಿಷ್ಯದ ಬಗ್ಗೆ ಗಂಭೀರವಾದ ಚಿಂತನೆ ಮಾಡುವಿರಿ.

ಮಿಥುನ ರಾಶಿ: ಇಂದು ನಿಮ್ಮ ವರ್ತನೆಯು ಭಿನ್ನವಾಗಿ ಕಾಣಿಸುವುದು. ಪ್ರೇಮದಲ್ಲಿ ಮನಸ್ತಾಪ ಸಹಜ, ಆದರೂ ಮನಸ್ಸಿಗೆ ತಂದುಕೊಳ್ಳುವುದು ಬೇಡ. ದೈವದಲ್ಲಿ ಪೂರ್ಣ ವಿಶ್ವಾಸದಿಂದ ಕೆಲಸ ಮಾಡಿ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಿರಿಯರಿಗೆ ಅಗೌರವದ ಮಾತುಗಳನ್ನು ತಪ್ಪಿಯೂ ಆಡುವುದು ಬೇಡ. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಸೋಲಿಗೆ ದುಃಖ ಪಡುವುದಕ್ಕಿಂತ ಕಾರಣ ಹುಡುಕಿದರೆ ನೆಮ್ಮದಿ ಹೆಚ್ಚು‌. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಬೇಕಾಗುವುದು. ವಾತಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಉತ್ಸಾಹಕ್ಕೆ ಭಂಗ.

ಕರ್ಕಾಟಕ ರಾಶಿ: ಇಂದು ಅನಿರೀಕ್ಷಿತ ಸಹಯವನ್ನು ನೀವು ಅಪೇಕ್ಷಿಸುವಿರಿ. ಅಪರೂಪದ ವ್ಯಕ್ತಿಗಳ ಸಹವಾಸ ಸಿಗಲಿದೆ. ಆರ್ಥಿಕತೆಗೆ ಸಂಬಂಧಿಸಿದಂತೆ ಅನಗತ್ಯ ಕೋಪವನ್ನು ತಪ್ಪಿಸಬೇಕು. ಕೆಲಸದ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ಇಂದು ಮನೋರಂಜನೆಗೆ ಹೆಚ್ಚಿನ ಒತ್ತು ಕೊಡುವಿರಿ. ಸಿಗದ ವಸ್ತುಗಳನ್ನು ಬಲಾತ್ಕಾರವಾಗಿ ಪಡೆಯುವ ಪ್ರಯತ್ನ ಮಾಡುವಿರಿ.

ಸಿಂಹ ರಾಶಿ: ಸಣ್ಣ ಸಂಸ್ಥೆಯೊಂದನ್ನು ಹುಟ್ಟುಹಾಕುವ ಯೋಚನೆ ಬರುವುದು. ವೃತ್ತಿಪರರಾಗಿ ನೀವು ಇನ್ನಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಸಂಗಾತಿಯ ಜೊತೆ ಸಂಬಂಧವು ಸುಧಾರಿಸುತ್ತದೆ. ವ್ಯಾಪಾರ ವಿಸ್ತರಿಸಬಹುದು. ಹಿರಿಯರಿಂದ ಆಶೀರ್ವಾದ ಪಡೆಯುವಿರಿ. ನೀವು ಪೂರ್ವಿಕರ ಆಸ್ತಿಯಿಂದಲೂ ಲಾಭ ಪಡೆಯಬಹುದು. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು. ಇಂದು ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿರುವ ಜನರು ಬರುವರು. ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಕರ್ತವ್ಯದತ್ತ ನಿಮ್ಮ ಗಮನಹರಿಸುವಿರಿ. ನಿಮ್ಮ ಮೇಲೆ‌ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ‌ ಹಾಕಲು ಪ್ರಯತ್ನಿಸುವಿರಿ.

ಕನ್ಯಾ ರಾಶಿ: ಉದ್ಯಮಕ್ಕೆ ಆಪ್ತರ,‌ ಪರಿಚಿತರ ಪ್ರೋತ್ಸಾಹವು ಸಿಗಲಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರಕ್ಕಾಗಿ ನೀವು ನಿಮ್ಮ ತಂದೆಯಿಂದ ಹಣವನ್ನು ಪಡೆಯಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ತಂದೆ ಮತ್ತು ಮಕ್ಕಳ ನಡುವೆ ಪ್ರೀತಿ ಇರುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ನಿಮ್ಮ ಕಾಳಜಿಯನ್ನು ವಹಿಸಿಕೊಂಡವರಿಗೆ ಬೇಸರ ಮಾಡದಂತೆ ನಿಮ್ಮನ್ನು ತೋರಿಸಿಕೊಳ್ಳಿ. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು. ಸ್ತ್ರೀಸಂಬಂಧವಾದ ಆರೋಪವು ಬರಲಿದ್ದು, ಆತಂಕವೂ ಆಗುವುದು.

ತುಲಾ ರಾಶಿ: ಹಣಕಾಸಿನ‌ ವಿಚಾರದಲ್ಲಿ ದುಡುಕುವುದು ಬೇಡ. ನಿಮ್ಮ ಯೋಜನೆಗಳು ಕ್ರಮವನ್ನು ಅನುಸರಿಸಿ ಇರಲಿ.‌ ಈ ದಿನ ಏರಿಳಿತಗಳಿಂದ ಕೂಡಿರುವ ಸಾಧ್ಯತೆ ಇದೆ. ಇಂದು ಕೆಲವು ಕಡೆ ತಾಳ್ಮೆಯ ಕೊರತೆ ನಿಮಗೆ ಗೊತ್ತಾಗಲಿದೆ. ಮತ್ತೊಬ್ಬರ ಜೊತೆ ಮಾತನಾಡುವಾಗ ಮಾತುಗಳ ಮೇಲೆ ಎಚ್ಚರ ಇರಲಿ. ಶ್ರಮ ಹಾಗೂ ಆರ್ಥಿಕ ವೆಚ್ಚಗಳು ಹೆಚ್ಚಾಗಬಹುದು. ಆದಾಯ ಮತ್ತು ವೆಚ್ಚಗಳ ನಡುವೆ ತುಲನೆ ಬೇಕು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರು. ಕಳೆದು ಹೋದ ಪ್ರೇಮವನ್ನು ಮತ್ತೆ ಯಾರಾದರೂ ನೆನಪಿಸುವರು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ನಿಮ್ಮ ಬಗ್ಗೆ ಬೇರೆಯವರಿಗೆ ಔದಾರ್ಯಭಾವವು ಇರಲಿದೆ. ನಿಮ್ಮ‌ ಅಸಾಮಾನ್ಯ ಚಿಂತನೆಯು ನಿಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದು. ಅಪ್ರಾಪ್ತರ ಜೊತೆ ವಾಗ್ವಾದ ಬೇಡ.

ವೃಶ್ಚಿಕ ರಾಶಿ: ವ್ಯವಹಾರದಲ್ಲಿ ಕಾಳಜಿ ತಪ್ಪಿದ ಕಾರಣ ನಷ್ಟ ಮಾಡಿಕೊಳ್ಳುವಿರಿ. ಕಾರ್ಯಗಳು ನಿಧಾನವಾಗುತ್ತಿದೆ ಎಂಬ ಬೇಸರವು ಬೇಡ. ನಿಮ್ಮ ತಾಯಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರಿಗಳಿಗೆ ಇಂದು ಲಾಭವಾಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ‌ ಮೇಲೆ ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ‌ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ‌ ಸ್ನೇಹಿತರ ಮನೆಗೆ ಹೋಗುವಿರಿ. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ನಿರ್ಲಕ್ಷ್ಯದಿಂದ ನೋಡುವಿರಿ.

ಧನು ರಾಶಿ: ಲೋಹದ ವಸ್ತುಗಳಿಂದ ಘಾಸಿಯಾಗಬಹುದು. ಕಲೆ ಅಥವಾ ಸಂಗೀತದ ಕಡೆಗೆ ಒಲವು ಹೆಚ್ಚಾಗಬಹುದು. ವ್ಯವಹಾರದಲ್ಲಿ ಹೆಚ್ಚಿನ ಜಂಜಾಟವಿರುತ್ತದೆ. ಉದ್ಯೋಗಕ್ಕಾಗಿ ಯಾವುದಾದರೂ ಸಂದರ್ಶನವನ್ನು ಎದುರಿಸುವುದಿದ್ದರೆ ನಿಮಗೆ ಶುಭ. ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಬೇಕಾಗುವುದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ‌ ಮನಸ್ಸಿನಿಂದ ಮಾತನಾಡುವಿರಿ.‌ ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ. ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ನಿಮಗೆ ಇಂದು ಪ್ರೀತಿ ಪಾತ್ರರಿಂದ ಉಡುಗೊರೆ ಬರಲಿದೆ. ವಿದ್ಯಾಭ್ಯಾಸವನ್ನು ಯೋಗ್ಯರೀತಿಯಲ್ಲಿ ನಡೆಸಲು ಕಷ್ಟವಾದೀತು.

ಮಕರ ರಾಶಿ: ಇಂದು ನೀವು ಅಂದುಕೊಂಡಷ್ಟು ಸರಳವಾಗಿ ಕಾರ್ಯಗಳನ್ನು ಮಾಡಲಾರಿರಿ. ಮಾತಿನ ಭರದಲ್ಲಿ ನಿಮಗೆ ನೋವಾಗುವಂತಹ ಸಂದರ್ಭಗಳು ಬರಬಹುದು. ಮನಸ್ಸಿನಲ್ಲಿ ಬೇಸರ ಇರುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಬುದ್ಧಿವಂತಿಕೆಗೆ ಸಂಬಂಧಿಸಿದ ಕಾರ್ಯಗಳಿಂದ ಆದಾಯ ಹೆಚ್ಚಾಗುತ್ತದೆ. ನೀವು ಸ್ನೇಹಿತರಿಂದ ಬೆಂಬಲ ಪಡೆಯಬಹುದು. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧದಲ್ಲಿ ಒಡಕು ಬರಬಹುದು.‌ ವ್ಯವಹಾರವು ಸರಿಯಾಗಿ ಇರಲಿ. ಅತಿಯಾದ ಕೋಪದಿಂದ ಎಲ್ಲ ಕೆಲಸವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಅಧಿಕಾರಿಯ ವಿಶ್ವಾಸವನ್ನು ಪಡೆದು ಹೆಚ್ಚಿನ ಸ್ಥಾನ ಪಡೆಯುವಿರಿ. ಅನಿರೀಕ್ಷಿತ ರಾಜಕಾರಿಣಿಗಳ ಭೇಟಿಯಿಂದ ಕೆಲವು ಬದಲಾವಣೆಯನ್ನು ಕಾಣುವಿರಿ.

ಕುಂಭ ರಾಶಿ: ಮಾತನಾಡುವಾಗ ಎಚ್ಚರಿಕೆಯು ಅಗತ್ಯ. ಕೆಲವೊಂದು ಕೆಲಸ ಕಾರ್ಯಗಳಲ್ಲಿ ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ಆದರೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ದೂರವಿಡಬೇಕು. ವ್ಯಾಪಾರ ಅಭಿವೃದ್ಧಿಯಾಗಲಿದೆ. ನಿಮ್ಮ ಪ್ರೀತಿಪಾತ್ರರಿಂದ ನೀವು ಬೆಂಬಲ ಪಡೆಯುತ್ತೀರಿ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ದುರ್ಬಲರ‌ ಜೊತೆ ಸಂಘರ್ಷ ಬೇಡ. ಆತುರದಲ್ಲಿ ವಾಹನ ಚಾಲನೆಯಿಂದ ತೊಂದರೆಯಾದೀತು. ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಮನಸ್ಸಿನ ನೋವನ್ನು ಮರೆಯಲು ಒಂಟಿಯಾಗಿ ದೂರ ಹೋಗುವಿರಿ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಅನಾರೋಗ್ಯದಿಂದ ಕೆಲಸಗಳಿಗೆ ವಿಘ್ನವು ಬರುವುದು.

ಮೀನ ರಾಶಿ: ಇಂದು ಪ್ರೇಮಿಗಳು ಪರಸ್ಪರ ಮನಸ್ತಾಪದಿಂದ ಇರುವರು. ಸಾಲವನ್ನು ಪಡೆದುಕೊಳ್ಳಲು ಅವಕಾಶ ಲಭ್ಯವಾಗಬಹುದು. ಇಂದು ಕೆಲವು ಅಪರಿಚಿತರಿಂದ ಸಮಸ್ಯೆಗೆ ಒಳಗಾಗಬಹುದು. ನಿಮ್ಮ ಮಗುವಿನ ಆರೋಗ್ಯ ನೋಡಿಕೊಳ್ಳಿ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಆದರೆ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ಹೇಳಲಾಗದ ಮರೆಯಲಾಗದ ಸ್ಥಿತಿ ಇರಲಿದೆ. ನೀವೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಉಚಿತವಲ್ಲ.‌

ಲೋಹಿತಶರ್ಮಾ – 8762924271 (what’s app only)

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?