ಗಾಂಧಿ ಭಾರತ ಪೂರ್ವಭಾವಿ ಸಭೆಯಲ್ಲಿ ಸುರೇಶ್ ಮತ್ತು ಸತೀಶ್ ಅಕ್ಕಪಕ್ಕ ಕೂರುವಂತೆ ಮಾಡಿದ ಸುರ್ಜೆವಾಲಾ
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ಡಿಕೆ ಸುರೇಶ್ ಕೆಪಿಸಿಸಿ ಅಧ್ಯಕ್ಷನಾಗಲು ಹವಣಿಸುತ್ತಿದ್ದಾರೆ. ಅದರೆ ಸತೀಶ್ ಜಾರಕಿಹೊಳಿ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಒಬರಿಗೆ ಒಂದೇ ಹುದ್ದೆ ಸಾಕು ಅನ್ನೋದನ್ನು ಕಾಂಗ್ರೆಸ್ ಪಕ್ಷ ಕೂಡ ಹೇಳುತ್ತದೆಯಾದರೂ ಅನುಷ್ಠಾನ ಮಾತ್ರ ಅಷ್ಟಕ್ಕಷ್ಟೇ. ಹಾಗಾಗಿ ಸತೀಶ್ ಜಾರಕಿಹೊಳಿ ಮಂತ್ರಿಸ್ಥಾನ ಬಿಡುವರೇ ಅನ್ನೋದು ಚರ್ಚೆಯ ವಿಷಯ
ಬೆಳಗಾವಿ: ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಬೆಳಗಾವಿಯಲ್ಲಿ ಗಾಂಧಿ ಭಾರತ ಪೂರ್ವಭಾವಿ ಸಭೆಯನ್ನು ನಡೆಸಿದರು. ಪಕ್ಷದ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಇದರ ಮತ್ತೊಂದು ವಿಶೇಷತೆ ಎಂದರೆ ಸುರ್ಜೆವಾಲಾ ಅವರು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಂಸದ ಡಿಕೆ ಸುರೇಶ್ ಅಕ್ಕಪಕ್ಕ ಕೂರುವಂತೆ ಮಾಡಿದ್ದು. ಹಾಗೆ ನೋಡಿದರೆ, ಸತೀಶ್ ಮತ್ತು ಸುರೇಶ್ ನಡುವೆ ಪಕ್ಷದಲ್ಲಿ ಯಾವುದೇ ರೀತಿಯ ತಿಕ್ಕಾಟವಿಲ್ಲ, ಅದೇನಾದರೂ ಶುರುವಾಗುವ ಹಾಗಿದ್ದರೆ ಸತೀಶ್ ಮತ್ತು ಶಿವಕುಮಾರ್ ನಡುವೆ ನಡೆಯುತ್ತಿರುವ ಸಂಘರ್ಷದ ಕಾರಣಕ್ಕೆ ಆರಂಭವಾಗಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂತ್ರಿಗಳ ಕಾರ್ಯವೈಖರಿ ಕುರಿತು ರಂದೀಪ್ ಸುರ್ಜೆವಾಲಾಗೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
Latest Videos