ಮಂತ್ರಿಗಳ ಕಾರ್ಯವೈಖರಿ ಕುರಿತು ರಂದೀಪ್ ಸುರ್ಜೆವಾಲಾಗೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್

ಮಂತ್ರಿಗಳ ಕಾರ್ಯವೈಖರಿ ಕುರಿತು ರಂದೀಪ್ ಸುರ್ಜೆವಾಲಾಗೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 13, 2025 | 3:19 PM

ಆಂತರಿಕ ತುಮುಲಗಳ ಹೊರತಾಗಿಯೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಗುಳ್ನಗುತ್ತ ರಂದೀಪ್ ಸುರ್ಜೆವಾಲಾ ಪಕ್ಕ ಕೂತಿದ್ದರು. ಮಂತ್ರಿಗಳ ಕಾರ್ಯ ವೈಖರಿಯನ್ನು ವಿಶ್ಲೇಷಿಸಲು ಹೈಕಮಾಂಡ್ ಒಂದು ಚಿಕ್ಕ ಹೊತ್ತಿಗೆಯಲ್ಲಿ ಕ್ವೆಶ್ಚನ್ನೇರ್ ಮಾದರಿಯಲ್ಲಿ ನಾಲ್ಕೈದು ಪ್ರಶ್ನೆಗಳನ್ನು ಕೇಳಿತ್ತು. ಆ ಪ್ರಶ್ನೆಗಳ ಆಧಾರದಲ್ಲಿ ಪ್ರತಿ ಮಂತ್ರಿಯ ಕಾರ್ಯವೈಖರಿಯನ್ನು ಸಿಎಂ ಮತ್ತು ಡಿಸಿಎಂ ವಿಶ್ಲೇಷಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗಾಗಿ ಗುದ್ದಾಟ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಟವೆಲ್ ಹಾಕುವ ಕೆಲಸ ಮತ್ತು ದಲಿತ ನಾಯಕರು ನಡೆಸಬೇಕೆಂದಿದ್ದ ಡಿನ್ನರ್ ಮೀಟಿಂಗ್ ರದ್ದಾಗಿದ್ದು-ಮೊದಲಾದ ಸನ್ನಿವೇಶಗಳ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವರ ಕಾರ್ಯವೈಖರಿಯ ಬಗ್ಗೆ ವರದಿಯನ್ನು ಸುರ್ಜೇವಾಲಾಗೆ ನೀಡಿದರು. ಅವರಿಬ್ಬರಿಂದ ಬುಕ್ಲೆಟ್ ಮಾದರಿಯಲ್ಲಿರುವ ವರದಿಗಳನ್ನು ಸುರ್ಜೆವಾಲಾ ಸ್ವೀಕರಿಸಿದ್ದು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜೊತೆಯಾಗಿ ಊಟ ಮಾಡಲೂ ಹೈಕಮಾಂಡ್ ಅನುಮತಿ ಬೇಕಾ ಅಂತ ಕೇಳಿದರೆ ಪರಮೇಶ್ವರ್ ಸಮಂಜಸ ಉತ್ತರ ನೀಡಲಿಲ್ಲ