ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರ ಜೋಡಿ ಎಂದು ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಗುರುತಿಸಿಕೊಂಡಿದ್ದರು. ಇಬ್ಬರ ನಡುವೆ ಪ್ರೀತಿ-ಪ್ರೇಮ ನಡೆಯುತ್ತಿದೆ ಎಂದು ಮನೆ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಕೆಲವು ದಿನಗಳ ಹಿಂದೆ ಸಹ ಇಬ್ಬರೂ ಇದೇ ವಿಷಯ ಚರ್ಚೆ ಮಾಡಿದ್ದರು. ಆದರೆ ಈಗ ಇಬ್ಬರೂ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭ ಆದಾಗಿನಿಂದಲೂ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಆತ್ಮೀಯವಾಗಿದ್ದಾರೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಮಾತು ಮನೆ ಮಂದಿಯ ನಡುವೆ ಹರಿದಾಡುತ್ತಿದೆ. ಶನಿವಾರದ ಎಪಿಸೋಡ್ನಲ್ಲಿ ಇಬ್ಬರೂ ಪ್ರೀತಿ-ಪ್ರೇಮದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅದಾದ ಎರಡೇ ದಿನಕ್ಕೆ ಇಬ್ಬರೂ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ಗೆ ಸಂಬಂಧಿಸಿದಂತೆ ಭವ್ಯಾ ಹಾಗೂ ತ್ರಿವಿಕ್ರಮ್ ಅವರುಗಳು ಕಿತ್ತಾಡಿಕೊಂಡಿದ್ದಾರೆ. ಭವ್ಯಾ ಅಂತೂ ನನ್ನಿಂದ ದೂರ ಇರು ಎಂದು ತ್ರಿವಿಕ್ರಮ್ಗೆ ಹೇಳಿದ್ದಾರೆ. ತ್ರಿವಿಕ್ರಮ್ ಸಹ ಭವ್ಯಾ ಅನ್ನು ಅವಮಾನಿಸಿ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 13, 2025 04:03 PM
Latest Videos