BMRCL Ticket Hike: ಬಸ್​ ಟಿಕೆಟ್ ಬೆನ್ನಲ್ಲೇ ಮತ್ತೊಂದು ದರ ಏರಿಕೆ ಶಾಕ್: ನಮ್ಮ ಮೆಟ್ರೋ ಪ್ರಯಾಣ ದುಬಾರಿ

ಬಿಎಂಆರ್​​ಸಿಎಲ್​​ನ ಬೋರ್ಡ್ ಮೀಟಿಂಗ್​​ನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. 105% ರಷ್ಟು ಏರಿಕೆಗೆ ಮನವಿ ಮಾಡಲಾಗಿದ್ದರೂ, 40-45% ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕನಿಷ್ಠ ದರ 10 ರೂಪಾಯಿ ಯಥಾವತ್ತಾಗಿ ಉಳಿಯಲಿದೆ, ಆದರೆ ಗರಿಷ್ಠ ದರ 60 ರಿಂದ 90 ರೂ. ಏರಿಕೆಯಾಗುವ ಸಾಧ್ಯತೆ ಇದೆ. ನಾಳೆ ಬಿಎಂಆರ್​​ಸಿಎಲ್ ಅಧಿಕೃತ ಘೋಷಣೆ ಮಾಡಲಿದೆ.

BMRCL Ticket Hike: ಬಸ್​ ಟಿಕೆಟ್ ಬೆನ್ನಲ್ಲೇ ಮತ್ತೊಂದು ದರ ಏರಿಕೆ ಶಾಕ್: ನಮ್ಮ ಮೆಟ್ರೋ ಪ್ರಯಾಣ ದುಬಾರಿ
ಬಸ್​ ಟಿಕೆಟ್ ಬೆನ್ನಲ್ಲೇ ಮತ್ತೊಂದು ದರ ಏರಿಕೆ ಶಾಕ್: ನಮ್ಮ ಮೆಟ್ರೋ ಪ್ರಯಾಣ ದುಬಾರಿ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Jan 17, 2025 | 3:03 PM

ಬೆಂಗಳೂರು, ಜನವರಿ 17: ನಗರದಲ್ಲಿ ದಿನದಿಂದ ದಿನಕ್ಕೆ ಮೆಟ್ರೋ (Namma Metro) ಜಾಲ ವಿಸ್ತರಣೆ ಆಗುತ್ತಿದೆ. ಮೆಟ್ರೋದಲ್ಲಿ ಸಂಚಾರ ಮಾಡುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಲು ಬಿಎಂಆರ್​ಸಿಎಂ ಮುಂದಾಗಿತ್ತು. ಇದೀಗ ಕೊನೆಗೂ ಬಿಎಂಆರ್​ಸಿಎಲ್​ ಬೋರ್ಡ್​ ದರ ಏರಿಕೆಗೆ ಅಸ್ತು ಎಂದಿದೆ. ನಾಳೆ ಅಧಿಕೃತ ಘೋಷಣೆ ಮಾಡಲಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್​ ನೀಡಿದೆ.

ಇಂದು ಶಾಂತಿನಗರದ ಬಿಎಂಆರ್​ಸಿಎಲ್​ ಮುಖ್ಯ ಕಚೇರಿಯಲ್ಲಿ ದರ ಏರಿಕೆ ಸಂಬಂಧ ಸಭೆ ಮಾಡಲಾಯಿತು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಂಆರ್​​ಸಿಎಲ್​ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್, ಸಭೆಯಲ್ಲಿ ದರ ಏರಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ನಾಳೆ ಸುದ್ದಿಗೋಷ್ಠಿ ಮಾಡಲಿರುವ ಬಿಎಂಆರ್​ಸಿಎಲ್​​, ಅಧಿಕೃತ ಘೋಷಣೆ ಮಾಡಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ ಮಾದಾವರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧ

ಜೊತೆಗೆ ಯಾವತ್ತಿನಿಂದ ದರ ಜಾಸ್ತಿ ಮಾಡಬೇಕು ಎನ್ನುವ ಸಿದ್ದತೆಗೆ ಬಿಎಂಆರ್​ಸಿಎಲ್​ಗೆ ಬೋರ್ಡ್ ಸೂಚಿಸಿದ್ದು, ಅದರಂತೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಎಷ್ಟಾಗಬೇಕು, ಎಷ್ಟು ದರ ನಿಗದಿ ಎನ್ನುವ ಬಗ್ಗೆ ನಾಳೆ ನಿರ್ಧಾರ ಮಾಡಿ ಬಿಎಂಆರ್​ಸಿಎಲ್​ ಮಾಹಿತಿ ನೀಡಲಿದೆ.

105% ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಆರ್​ಸಿಎಲ್​​ ಮನವಿ ಮಾಡಿತ್ತು. ಆದರೆ ಬಹುತೇಕ 40% ರಿಂದ 45% ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಮೆಟ್ರೋದಲ್ಲಿ ಟಿಕೆಟ್ ದರ ಕನಿಷ್ಠ 10 ರೂ. ಇದೆ. ಅದರಲ್ಲಿ ಯಾವುದೇ ಹೆಚ್ಚಳವಾಗಲ್ಲ.

ಗರಿಷ್ಠ 60 ರೂ ಇರುವ ದರದಲ್ಲಿ 90 ರೂ. ವರೆಗೆ ಹೆಚ್ಚಳವಾಗಲಿದೆ. ಪ್ರತಿ ಎರಡು ಕಿ.ಮೀ ನಂತರ ಹತ್ತು ರೂಪಾಯಿಯಷ್ಟು ಹೆಚ್ಚಳ ಮಾಡಲು ಪ್ಲಾನ್​ ಮಾಡಿರುವುದಾಗಿ ಟಿವಿ9 ಗೆ ನಮ್ಮ ಮೆಟ್ರೋ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೋಲ್ಕತ್ತಾದಿಂದ ಬೆಂಗಳೂರಿನತ್ತ ಚಾಲಕ ರಹಿತ ರೈಲು

ಕಳೆದ ಏಳು ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ. ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಲು ನಮ್ಮ ಮೆಟ್ರೋ ಇತ್ತೀಚೆಗೆ ಕಮಿಟಿ ಕೂಡ ರಚನೆ ಮಾಡಿತ್ತು. ಆ ಮೂಲಕ ಅಕ್ಟೋಬರ್ 3 ರಿಂದ 28ರ ವರೆಗೆ ಪ್ರಯಾಣಿಕರ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗಿತ್ತು. ಪ್ರಯಾಣಿಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದ ಕಮಿಟಿ, ಆ ವರದಿಯನ್ನು ಡಿಸೆಂಬರ್ ಕೊನೆ ವಾರದಲ್ಲಿ ಬಿಎಂಆರ್​ಸಿಎಲ್​​ಗೆ ಸಲ್ಲಿಸಲಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:01 pm, Fri, 17 January 25

ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ