ಪ್ರಯಾಣಿಕರ ಗಮನಕ್ಕೆ: ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಸಮಯ ಬದಲಾವಣೆ

ಕರ್ನಾಟಕದ ಏಕೈಕ ಮೆಟ್ರೋ ನಗರ ಬೆಂಗಳೂರಿನಲ್ಲಿ ಟ್ರಾಫಿಕ್‌ಮುಕ್ತವಾಗಿ ಸಂಚಾರ ಮಾಡುವ ಏಕೈಕ ಸಾರಿಗೆ ವ್ಯವಸ್ಥೆ ನಮ್ಮ ಮೆಟ್ರೋ. ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಟ್ರಾಫಿಕ್​ ಬೇಸತ್ತು ಅದೆಷ್ಟೋ ಪ್ರಯಾಣಿಕರು ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಪ್ರತಿದಿನ ಲಕ್ಷಾಂತರ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿರುವ ನಮ್ಮ ಮೆಟ್ರೋ ಸಂಚಾರದ ಸಮಯವನ್ನು ಬದಲಾವಣೆಯಾಗಿದೆ.

ಪ್ರಯಾಣಿಕರ ಗಮನಕ್ಕೆ: ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಸಮಯ ಬದಲಾವಣೆ
ನಮ್ಮ ಮೆಟ್ರೋ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 10, 2025 | 8:49 PM

ಬೆಂಗಳೂರು (ಜನವರಿ.10): ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಬಿಎಂಆರ್​ಸಿಎಲ್​ ಹೊಸ ಅಪ್ಡೇಟ್​ವೊಂದನ್ನು ಹೊತ್ತು ತಂದಿದೆ. ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ  ಸಮಯದಲ್ಲಿ ಬದಲಾವಣೆಯಾಗಿದೆ. ಇನ್ನುಮುಂದೆ ಸೋಮವಾರ (ಜನವರಿ 13) ದಿನದಂದು ಮಾತ್ರ ಮೆಟ್ರೋ ಸೇವೆ ಮುಂಜಾನೆ ಬೆಳಗ್ಗೆ 4.15ರಿಂಲದೇ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ(ಬಿಎಂಆರ್‌ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ. ಗೊಂದಲ ಬೇಡ ಪ್ರತಿ ಸೋಮವಾರ ಮಾತ್ರ ಮೆಟ್ರೋ ರೈಲು ಸಂಚಾರದಲ್ಲಷ್ಟೇ ಬದಲಾವಣೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್ ಸಂಸ್ಥೆಯು ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಎಲ್ಲಾ ನಿಲ್ದಾಣಗಳಿಂದ ಮೆಟ್ರೋ ಸೇವೆಯನ್ನು 2025ರ ಜನವರಿ 13ರಿಂದ ಜಾರಿಗೆ ಬರುವಂತೆ ಬೆಳಗ್ಗೆ 4:15 ರಿಂದ ಪ್ರಾರಂಭಿಸಲಿದೆ.

ಇದನ್ನೂ ಓದಿ: Namma Metro: ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಕಾದಿದೆ ಟಿಕೆಟ್ ದರ ಏರಿಕೆಯ ಶಾಕ್..!

ಈಗ ಮುಂಜಾನೆ 5:00 ಮೆಟ್ರೋ ಸೇವೆ ಆರಂಭವಾಗುತ್ತಿದ್ದು, ಅದನ್ನು ಸೋಮವಾರ ಮಾತ್ರ 45 ನಿಮಿಷ ಮುಂಚಿತವಾಗಿ ಆರಂಭಿಸಲಾಗುತ್ತಿದೆ. ಉಳಿದಂತೆ ವಾರದ ಉಳಿದ ಎಲ್ಲ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಉಳಿದ ದಿನಗಳಲ್ಲಿ ಎಂದಿನಂತೆ ಬೆಳಗ್ಗೆ 5 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ. ಇನ್ನುಮುಂದೆ ಪ್ರತಿ ಸೋಮವಾರ ಬೆಳಗ್ಗೆ ಬೆಂಗಳೂರು ನಗರಕ್ಕೆ ಬರುವ ಸಾರ್ವಜನಿಕರು 4.15ರಿಂದಲೇ ಮೆಟ್ರೋ ಸೇವೆಯನ್ನು ಪಡೆದುಕೊಳ್ಳಬಹುದು. ಮೆಟ್ರೋ ಮಾರ್ಗದ ನಾಲ್ಕು ಡಿಪೋಗಳಿಂದ ಬೆಳಗ್ಗೆಯೇ ಮೆಟ್ರೋ ಸೇವೆ ಆರಂಭವಾಗಲಿದೆ. ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ಈ ಸಮಯ ಬದಲಾವಣೆಯಿಂದ ಪ್ರಯಾಣಿಕರಿಗೆ ಅನುಕೂಲ ಹಾಗೂ ಟ್ರಾಫಿಕ್ ದಟ್ಟಣೆ ಸಹ ಕಡಿಮೆಯಾಗಲಿದೆ. ಕಚೇರಿಗೆ, ಶಾಲಾ, ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತೆರಳಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:47 pm, Fri, 10 January 25

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್