AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಕಾದಿದೆ ಟಿಕೆಟ್ ದರ ಏರಿಕೆಯ ಶಾಕ್..!

ನಮ್ಮ ಮೆಟ್ರೋ ಸಿಲಿಕಾನ್ ಸಿಟಿ ಜನರ ಸಂಚಾರ ಜೀವನಾಡಿ. ಇತ್ತೀಚಿಗೆ ಸಾಕಷ್ಟು ಅಪ್‌ ಗ್ರೇಡ್‌ ಕೂಡ ಆಗುತ್ತಿದೆ. ಮೆಟ್ರೋ ಮಾರ್ಗಗಳ ವಿಸ್ತರಣೆಯೂ ಆಗುತ್ತಿದೆ. ಲಕ್ಷಾಂತರ ಜನಕ್ಕೆ ನಮ್ಮ ಮೆಟ್ರೋದಿಂದ ಅನುಕೂಲ ಆಗಿದೆ ಎಂದು ಹ್ಯಾಪಿ ಯಾಗುತ್ತಿರುವಾಗಲೇ, ಇದೀಗ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ವೊಂದು ಕಾದಿದೆ ನೋಡಿ..

Namma Metro: ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಕಾದಿದೆ ಟಿಕೆಟ್ ದರ ಏರಿಕೆಯ ಶಾಕ್..!
ನಮ್ಮ ಮೆಟ್ರೋ
Kiran Surya
| Updated By: ರಮೇಶ್ ಬಿ. ಜವಳಗೇರಾ|

Updated on: Oct 05, 2024 | 10:14 AM

Share

ಬೆಂಗಳೂರು. (ಅಕ್ಟೋಬರ್ 05): ಬೆಂಗಳೂರು ಜನರಿಗೆ ಮತ್ತೊಂದು ದರ ಏರಿಕೆಯ ಶಾಕ್ ಸದ್ಯದಲ್ಲೇ ತಟ್ಟಲಿದೆ. ಈಗಾಗಲೇ ಹಲವು ಬಾರಿ‌ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್​ಸಿಎಲ್​ ಪ್ಲಾನ್ ಮಾಡಿತ್ತು, ಏಳು ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ. ಸದ್ಯ 15 ರಿಂದ 20% ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿಕೆಟ್ ದರ ಏರಿಕೆಗೆ ನಮ್ಮ ಮೆಟ್ರೋ.’ದಿ ಫೇರ್‌ ಪಿಕ್ಸೇಷನ್‌ ಕಮಿಟಿ’ (ಎಫ್‌ಎಫ್‌ಸಿ) ರಚನೆ ಮಾಡಿದೆ. ಇದೊಂದು ಸ್ವಾತಂತ್ರ ಕಮಿಟಿಯಾಗಿದ್ದು,ಪ್ರಯಾಣಿಕರ ಸಲಹೆ ಪಡೆದು ಟಿಕೆಟ್ ದರ ಏರಿಕೆಗೆ ಈ ಕಮಿಟಿ ಮುಂದಾಗಲಿದ್ದು, ಅ.21 ರೊಳಗೆ ಪ್ರಯಾಣಿಕರು ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಲಾಗಿದೆ. ಪ್ರಯಾಣಿಕರ ಸಲಹೆಯನ್ನffc@bmrc.co.in ಗೆ ಕಳಿಸುವಂತೆ ಸೂಚನೆ ನೀಡಲಾಗಿದೆ.

2017ರ ನಂತರ ಇದೀಗ ಮೆಟ್ರೋ ದರ ಏರಿಕೆಗೆ ತೀರ್ಮಾನ ಮಾಡಿದೆ‌‌. ಎಷ್ಟು ದರ ಏರಿಕೆ ಮಾಡಬೇಕೆಂದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಸಾರ್ವಜನಿಕರನೊಳಗೊಂಡ ಕಮಿಟಿ ರಚನೆ ಮಾಡಿದ್ದು, ಈ ಬಗ್ಗೆ ಅಧಿಕೃತವಾಗಿ ಬಿಎಂಆರ್‌ಸಿಎಲ್ ಜಾಹೀರಾತು ನೀಡಿದೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಈಗಾಗಲೇ ಹಾಲು, ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡಲಾಗಿದೆ. ಇದೀಗ ಮತ್ತೆ ದರ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ ಎನ್ನುವುದು ಪ್ರಯಾಣಿಕರ ಮಾತು.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್​ನ್ಯೂಸ್: ನಾಗಸಂದ್ರ To ಮಾದಾವರ ಮೆಟ್ರೋಗೆ ಗ್ರೀನ್ ಸಿಗ್ನಲ್

ಟಿಕೆಟ್​ ದರ ಎಷ್ಟು ಏರಿಕೆ?

ಈಗಾಗಲೇ ನಮ್ಮ ಮೆಟ್ರೋದ ಟಿಕೆಟ್ ದರ ಕನಿಷ್ಠ ದರ 10 ರೂ ಆಗಿದ್ದು, ಗರಿಷ್ಠ ದರ 60 ರೂ. ವರೆಗೆ ಇದೆ. ಈಗ 15 ರಿಂದ 20 ರಷ್ಟು ಟಿಕೆಟ್ ದರ ಏರಿಕೆ ಆಗಲಿದೆಯಂತೆ. ಮುಂದಿನ ತಿಂಗಳಿಂದ ಹೊಸ ದರ ಜಾರಿ ಆಗುವ ಸಾಧ್ಯತೆಯಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಕಮಿಟಿ ಆಗಿದ್ದು, ಈಗಾಗಲೇ ಒಂದು ಸುತ್ತಿನ ಸಭೆ ಕೂಡ ಆಗಿದೆ. ಕಮಿಟಿ ಶೀಘ್ರದಲ್ಲೇ ಬಿಎಂಆರ್​ಸಿಎಲ್​​ಗೆ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಮಾಡಲಾಗುತ್ತದೆ.

ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ಇದಾಗಿದ್ದು, ಕಮಿಟಿಯು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಿದೆ. ನಮ್ಮ ಖರ್ಚು,ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ ಅಂತಾರೇ ಬಿಎಂಆರ್​ಸಿಎಲ್​​ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್.

ಒಟ್ಟಿನಲ್ಲಿ ಬಿಎಂಆರ್​ಸಿಎಲ್​ ಏನೋ ಏಳು ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ, ಖರ್ಚು ವೆಚ್ಚಗಳು ಹೆಚ್ಚಾಗಿದ್ದು ಅದನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯ ಅಂತಿದೆ. ಆದರೆ ಪ್ರಯಾಣಿಕರು ಮಾತ್ರ ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆ ಆಗಿದೆ ಇನ್ನೊಂದು ವರ್ಷ ಟಿಕೆಟ್ ದರ ಏರಿಕೆ ಮಾಡಬೇಡಿ ಎನ್ನುತ್ತಿದ್ದಾರೆ. ಈ ಬಗ್ಗೆ ಕಮಿಟಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ