AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಶುಕ್ರವಾರ ಸಂಜೆ ಸುರಿದ ಮಳೆಗೆ ಮರಗಳು ಧರೆಶಾಯಿ, ನಗರದ ವಿವಿಧಡೆ ಸುರಿದ ಮಳೆ ಪ್ರಮಾಣ ಎಷ್ಟು?

ಬೆಂಗಳೂರು ಹಲವಡೆ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿನ ಗಿಡ-ಮರಗಳು ಧರಾಶಾಯಿಯಾಗಿದ್ದವು. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಆಫಿಸ್​ನಿಂದ ಮನೆಗಳಿಗೆ ತೆರಳುವವರು ಪರದಾಡುವಂತಾಯಿತು. ಹಾಗಿದ್ದರೆ ಶುಕ್ರವಾರ ಸುರಿದ ಮಳೆ ಪ್ರಮಾಣ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಶುಕ್ರವಾರ ಸಂಜೆ ಸುರಿದ ಮಳೆಗೆ ಮರಗಳು ಧರೆಶಾಯಿ, ನಗರದ ವಿವಿಧಡೆ ಸುರಿದ ಮಳೆ ಪ್ರಮಾಣ ಎಷ್ಟು?
ಬೆಂಗಳೂರು ಮಳೆ
ಶಾಂತಮೂರ್ತಿ
| Edited By: |

Updated on:Oct 05, 2024 | 11:10 AM

Share

ಬೆಂಗಳೂರು, ಅಕ್ಟೋಬರ್​ 05: ಆಗಾಗ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರು (Bengaluru) ಮಂದಿಗೆ ಶುಕ್ರವಾರ ಸಂಜೆ ವರುಣರಾಯ ತಂಪೆರೆದಿದ್ದಾನೆ. ಶುಕ್ರವಾರ ಸಂಜೆ ಶುರುವಾದ ಮಳೆ (Rain) ಶನಿವಾರ ಬೆಳಗ್ಗೆ 7:30ರವರೆಗೆ ನಗರದ ವಿವಿಧೆಡೆ ಭರ್ಜರಿಯಾಗಿ ಸುರಿದಿದೆ. ಈ ಮೂಲಕ ವಾರದ ಬಳಿಕ ಮತ್ತೆ ಮಳೆರಾಯನ ಆರ್ಭಟ ಬೆಂಗಳೂರಿನಲ್ಲಿ ಮತ್ತೆ ಶುರುವಾಗಿದೆ.

ನಗರದ ಹಲವಡೆ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿನ ಗಿಡ-ಮರಗಳು ಧರಾಶಾಯಿಯಾಗಿದ್ದವು. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಆಫಿಸ್​ನಿಂದ ಮನೆಗಳಿಗೆ ತೆರಳುವವರು ಪರದಾಡುವಂತಾಯಿತು. ಜಯನಗರದ 4th ಬ್ಲಾಕ್ ಸುತ್ತಮುತ್ತ ಧರೆಗುರುಳಿದ ರೆಂಬೆ, ಕೊಂಬೆಗಳು ಧರೆಗೆ ಉರಿಳಿದ್ದವು.

ನವರಾತ್ರಿ ಶುಕ್ರವಾರವಾಗಿದ್ದ ಹಿನ್ನೆಲಯಲ್ಲಿ ದೇವಿ ದೇವಸ್ಥಾನಗಳಿಗೆ ತೆರಳುತ್ತಿದ್ದ ಭಕ್ತಾದಿಗಳಿಗೆ ಮಳೆ ಅಡ್ಡಿಯಾಯಿತು. ಉತ್ಸವಗಳು ತಡವಾಗಿ ಆರಂಭವಾದವು. ಭಕ್ತರು ಮಳೆಯಲ್ಲಿ ನೆಂದು ದೇವಸ್ಥಾನಗಳಿಗೆ ತೆರಳುವಂತಾಯಿತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣಾರ್ಭಟ: ವಿಕೇಂಡ್ ಮೂಡ್​ನಲ್ಲಿರುವ ಬೆಂಗಳೂರಿಗರಿಗೆ ಮಳೆ ಕಾಟ

ಹಲವು ಬಡಾವಣೆಗಳಲ್ಲಿ ಸುರಿದ ಮಳೆ ಪ್ರಮಾಣ

ಶುಕ್ರವಾರ ಹೆಎಚ್​ಎಸ್​ಆರ್​ ಲೇಔಟ್​ನಲ್ಲಿ 35 ಮಿ.ಮೀ ಮಳೆಯಾಗಿದೆ. ಬಾಣಸವಾಡಿ 24 ಮಿ.ಮೀ, ರಾಮಮೂರ್ತಿ ನಗರ 22 ಮಿ.ಮೀ, ಹಂಪಿನಗರ 21 ಮಿ.ಮೀ, ವಿಶ್ವೇಶ್ವರಯ್ಯಪುರಂ 21 ಮಿ.ಮೀ, ಬಿಟಿಎಂ ಲೇಔಟ್ 16 ಮಿ.ಮೀ, ಚಾಮರಾಜಪೇಟೆ 16 ಮಿ.ಮೀ, ಬೊಮ್ಮನಹಳ್ಳಿ 18 ಮಿ.ಮೀ, ಬಸವನಪುರ 17.50 ಮಿ.ಮೀ, ಹೊರಮಾವು 16 ಮಿ.ಮೀ ಮತ್ತು ಕೋರಮಂಗಲದಲ್ಲಿ 16 ಮಿ.ಮೀ ಮಳೆಯಾಗಿದೆ.

ಅಕ್ಟೋಬರ್​ 8ವರೆಗು ಮಳೆ

ಅಕ್ಟೋಬರ್​ 8ವರೆಗು ಬೆಂಗಳೂರಿನ ವಿವಿಧಡೆ ಬೆಳಗ್ಗೆ ಅಥವಾ ಸಂಜೆ ನಂತರ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆ ವೇಳೆ ಮನೆಯಿಂದ ಹೊರಗೆ ಹೋಗುವರು ಮತ್ತು ಕಚೇರಿ ನೌಕರರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಸಮುದ್ರ ಮೇಲ್ಮೈನಲ್ಲಿ ಉಂಟಾದ ಸ್ಟ್ರಫ್ ಕಾರಣದಿಂದ ಹಾಗೂ ಹಿಂಗಾರು ಮಳೆ ಸುರಿಸುವ ಮಾರುತಗಳು ನಿಗದಿತ ಸಮಯದಲ್ಲಿ ಸಕ್ರಿಯಗೊಂಡ ಪರಿಣಾಮ ಮಳೆಆಯಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:09 am, Sat, 5 October 24

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು