Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಗೆ ಮದ್ವೆಯಾಗಿದ್ದೂ ಬಿಡಲಿಲ್ಲ, ಕೊನೆಗೆ ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ

ಆತ ಆಕೆಯನ್ನು ಬಾಲ್ಯದಿಂದ ಪ್ರೀತಿಸುತ್ತಿದ್ದ. ಆದ್ರೆ, ಆಕೆಗೆ ಬೇರೊಬ್ಬನ ಜೊತೆ ಮದುವೆಯಾಗಿದೆ. ಆದರೂ ಸಹ ಆಕೆಯ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗಿರಲಿಲ್ಲ. ಆಕೆಯನ್ನು ಬಿಡದೆ ಹುಚ್ಚನಂತೆ ಪ್ರೀತಿಸುತ್ತಿದ್ದ. ಅಲ್ಲದೇ ಪ್ರೇಯಸಿ ಜೊತೆ ಒಡನಾಟ ಹೊಂದಿದ್ದ. ಇದೀಗ ಆ ಹುಚ್ಚು ಪ್ರೀತಿಯೇ ಆತನ ಪ್ರಾಣಕ್ಕೆ ಸಂಚಕಾರ ತಂದಿದೆ. ಹಾಗಾದ್ರೆ, ಏನಿದು ಪ್ರಕರಣ? ಲವರ್ ಬಾಯ್ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ಯುವತಿಗೆ ಮದ್ವೆಯಾಗಿದ್ದೂ ಬಿಡಲಿಲ್ಲ, ಕೊನೆಗೆ ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ
Mysuru Vinay
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on: Jan 17, 2025 | 11:09 PM

ಮೈಸೂರು, (ಜನವರಿ 17): ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಅಂದ್ಹಾಗೆ ಈತನ ಹೆಸರು ವಿನಯ್. ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಅದು ಕುಟುಂಬಸ್ಥರಿಗೂ ಗೊತ್ತಾಗಿ ಅಂತಿಮವಾಗಿ ವಿನಯ್​ನಿಂದ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್​ ಪ್ರಾಣ ಕಳೆದುಕೊಂಡಿದ್ದಾನೆ.

ಯುವತಿ ಪೋಷಕರು ಈತನ ಪ್ರೀತಿಗೆ ಅಡ್ಡಿಯಾದರೂ. ಅಷ್ಟೇ ಅಲ್ಲ ಯುವತಿಯನ್ನು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ರು. ಯುವತಿ ಬೇರೆ‌ ಹುಡುಗನ ಜೊತೆ ಮದುವೆಯಾದ ಮೇಲೆ‌ ಎಲ್ಲಾ ಸರಿಯಾಗುತ್ತೇ ಅಂದುಕೊಂಡಿದ್ದರು. ಆದ್ರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ಇಬ್ಬರು ಹಾಯಾಗಿ ಸುತ್ತಾಡಿಕೊಂಡಿದ್ದರು.

ಇದನ್ನೂ ಓದಿ: ಮಾವ ಎನ್ನುವ ಕಾಮ‌ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿದ ಸೊಸೆ ಟೆಕ್ಕಿ

ಮದುವೆ ನಂತರವೂ ಆಕೆ ವಿನಯ್ ಜೊತೆ ಸುತ್ತಾಟ ಮುಂದುವರಿಸಿದ್ದಳು. ಸಾಲದಕ್ಕೆ ಎರಡ್ಮೂರು ಬಾರಿ ಆಕೆ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದಳು. ಮನೆಯವರು ಹುಡುಕಿ ಕರೆದುಕೊಂಡು ಬಂದಿದ್ದರು.‌ ಈ ಸಂಬಂಧ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ನಿನ್ನೆ (ಜನವರಿ 16) ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಇದು ವಿನಯ್‌ಗೆ ಅವಮಾನವಾಗಿತ್ತು.‌ ಕೊನೆಗೆ ಆಕೆ ಸಹ ನಾನು ನನ್ನ ಪತಿ ಜೊತೆ ಹೋಗುವುದಾಗಿ ಹೇಳಿದ್ದಳು. ಇದು ಸಹಜವಾಗಿ‌ ವಿನಯ್ ಅಸಮಾಧಾನಕ್ಕೆ ಕಾರಣವಾಗಿತ್ತು.

ನಂತರವೂ ಆಕೆಯನ್ನು ಸಂಪರ್ಕಿಸಲು ವಿನಯ್ ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದ ವಿನಯ್, ಮೇಗಳಾಪುರದ ತನ್ನ ಸಹೋದರಿಯ ಮನೆಗೆ ಹೋಗಿ ನೇಣಿಗೆ ಶರಣಾಗಿದ್ದಾನೆ‌. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡಿದ್ದಾನೆ. ಇನ್ನು ಈ ಸಾವಿಗೆ ಯುವತಿಯ‌ ಮನೆಯವರೇ ಕಾರಣ ಎಂದು ವಿನಯ್ ಮನೆಯವರ ಆರೋಪ ಮಾಡಿದ್ದಾರೆ.

ಆಕೆ ಆತನ ಜೊತೆ ಚೆನ್ನಾಗಿಯೇ ಇದ್ದಳು. ಮದುವೆ ಆದ ಮೇಲೂ ಸಹ ಚೆನ್ನಾಗಿದ್ದಳು, ಅವರ ಮನೆಯವರು ಅವಮಾನ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನೋದು ವಿನಯ್ ಮನೆಯವರ ಒತ್ತಾಯ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಗೆ ವಿನಯ್ ಸಂಬಂಧಿಕರು ದೂರು ನೀಡಿದ್ದಾರೆ. ಇದೆಲ್ಲಾ ಏನೇ ಇರಲಿ ಮದುವೆಯ ನಂತರವೂ ಪ್ರೀತಿಯ ಹುಚ್ಚಾಟಕ್ಕೆ ಬಿದ್ದ ವಿನಯ್ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದು ಮಾತ್ರ ದುರಂತ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್