Lord Yama Temple : ಯಮ ಧರ್ಮರಾಯನ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಈ ದೇವಾಲಯದ ವಿಶೇಷತೆಗಳೇನು ಗೊತ್ತಾ?

ಧರ್ಮಪುರಿಗೆ ಭೇಟಿ ನೀಡಿದರೆ ಸಾಕ್ಷಾತ್​​ ಯಮಪುರಿ ದೂರವಾಗುತ್ತದೆ ಎಂಬ ಪ್ರತೀತಿಯಿದೆ.. ಇಲ್ಲಿ ಯಮನನ್ನು ನೋಡಿ ಭಕ್ತರು ಮನಃಶಾಂತಿಯಿಂದ ಹಿಂತಿರುಗುತ್ತಾರೆ!

Lord Yama Temple : ಯಮ ಧರ್ಮರಾಯನ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಈ ದೇವಾಲಯದ ವಿಶೇಷತೆಗಳೇನು ಗೊತ್ತಾ?
ಯಮ ಧರ್ಮರಾಯನ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
Follow us
ಸಾಧು ಶ್ರೀನಾಥ್​
|

Updated on: Jul 21, 2023 | 2:17 PM

ಧರ್ಮಪುರಿ -ಈ ಹೆಸರನ್ನು ಕೇಳಿದಾಗ ಎರಡು ವೈಶಿಷ್ಟ್ಯಗಳು ನೆನಪಿಗೆ ಬರುತ್ತವೆ. ಒಂದು ದಕ್ಷಿಣಾಭಿಮುಖವಾಗಿ ಹರಿಯುವ ಪವಿತ್ರ ಗೋದಾವರಿ. ಎರಡು, ಯೋಗನೃಸಿಂಹಸ್ವಾಮಿ. ಗೋದಾವರಿ ತೀರ್ಥದ ಬಗ್ಗೆ.. ನರಸಿಂಹಸ್ವಾಮಿ ಕ್ಷೇತ್ರದ ಬಗ್ಗೆ (Sri Lakshmi Narasimha Swamy Temple).. ಅಲ್ಲಿನ ಶೇಶಪ್ಪನ ಕಾವ್ಯದ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಆದರೆ.. ಧರ್ಮಪುರಿಯಲ್ಲಿ ಇರುವ ಇನ್ನೊಂದು ದೇವಸ್ಥಾನದ ಬಗ್ಗೆಯೂ ತಿಳಿಯಬೇಕಿದೆ. ಇಲ್ಲಿದೆ ಯಮನ ದೇವಸ್ಥಾನ (Lord Yama Dharmaraja temple). ಅದೂ ನಮ್ಮ ಪ್ರಾಣವನ್ನೇ ಕಬಳಿಸುವ ಯಮನಿಗೆ ಮಂದಿರ! ಯಮನ ದೇವಸ್ಥಾನ ಬೇರೆ ಎಲ್ಲಿಯೂ ಇಲ್ಲ ಎಂಬುದು ಗಮನಾರ್ಹ. ಹಾಗಾದರೆ ಏನಿದರ ವಿಶೇಷ, ತಿಳಿಯೋಣ ಬನ್ನಿ.

ನರಕವೇ ಪಾಪ.. ಪಾಪ ಮಾಡಿದರೆ ಹೋಗುವುದು ನರಕಕ್ಕೆ. ಇಂತಹ ನರಕದಲ್ಲಿ ಪಾಪಿಗಳ ಜೊತೆ ಕಾಲ ಕಳೆಯುವವನಿಗೆ ಮನಃಶಾಂತಿ ಇರುವುದಿಲ್ಲ. ಅದಾಗಲೇ ಹಿರಣ್ಯಕಶಿಪುವನ್ನು ಕೊಂದು ಕ್ರುದ್ಧನಾಗಿದ್ದ ನರಸಿಂಹನು ಪ್ರಹ್ಲಾದನ ಪ್ರಾರ್ಥನೆಯಿಂದ ಶಾಂತನಾಗಿ ಯೋಗರೂಪಿಯಾಗಿ ರೂಪುಗೊಂಡ! ಅದುವೇ ಈ ಧರ್ಮಪುರಿ ಕ್ಷೇತ್ರದ ವಿಶೇಷತೆ. ಅದೇ ಸಮಯದಲ್ಲಿ, ಬ್ರಹ್ಮನು ದೇವತೆಗಳು, ಋಷಿಗಳು ಮತ್ತು ಮುನಿಗಳ ಜೊತೆಯಲ್ಲಿ ಬೇರೆಲ್ಲೂ ಇಲ್ಲದ ಧರ್ಮಪುರಿಯಲ್ಲಿರುವ ದಕ್ಷಿಣಾಭಿಮುಖವಾಗಿ ಹರಿಯುವ ಗೋದಾವರಿಯಲ್ಲಿ ಸ್ನಾನ ಮಾಡಿ ಆ ಯೋಗನರಸಿಂಹನ ದರ್ಶನವನ್ನು ಪಡೆದನು ಎಂದು ಧರ್ಮಪುರಿ ಸ್ಥಳ ಪುರಾಣಗಳು ಹೇಳುತ್ತವೆ. ಎಷ್ಟೋ ದೇವತೆಗಳೂ ಆ ನರಸಿಂಹನ ದರ್ಶನ ಮಾಡಿ ಪುನೀತರಾದರು.

ಇನ್ನು ಸಾಕ್ಷಾತ್​​ ಯಮ ಧರ್ಮರಾಯ ಸಹ ಧರ್ಮಪುರಿ ಬಗ್ಗೆ ಆಲೋಚನೆ ಮಾಡತೊಡಗಿದ. ನಿತ್ಯ ನರಕಕ್ಕೆ ಬರುವ ಪಾಪಿಗಳನ್ನು ನೋಡುವುದು, ಅವರ ಅಪರಾಧಗಳ ಬಗ್ಗೆ ಕೇಳುವುದು, ಅವರನ್ನು ನಾನಾ ರೀತಿಯಲ್ಲಿ ದಂಡಿಸುತ್ತಾ.. ಮನಃಶಾಂತಿಯಿಂದ ವಂಚಿತನಾಗಿದ್ದ ಯಮ.. ಅದೆಲ್ಲರಿಂದ ದೂರವಾಗಲು ಬಯಸಿ.. ನರಸಿಂಹಸ್ವಾಮಿಯ ಆಶೀರ್ವಾದ ಪಡೆಯಲು ಧರ್ಮಪುರಿಗೆ ಬಂದನೆಂಬ ಪ್ರತೀತಿಯಿದೆ. ಹಾಗಾಗಿ ನಾನಾ ಕಡೆ ಯಾತ್ರೆಗಳನ್ನು ಮಾಡಿ ಕೊನೆಗೆ ಧರ್ಮಪುರಿ ಬಳಿ ಪುಣ್ಯ ಗೋದಾವರಿಗೆ ಬಂದು ತಲುಪಿದ ಯಮಧರ್ಮರಾಯ.

ಅಲ್ಲಿಯವರೆಗೂ ಪಾಪಿಗಳಿಗೆ ಶಿಕ್ಷೆ ಕೊಡುವುದರಿಂದ ಸುತ್ತಿಕೊಂಡ ಪಾಪಗಳು, ಮಾನಸಿಕ ಅಶಾಂತಿಯಿಂದ ಯಮ ದೂರವಾದ. ಯೋಗ ನರಸಿಂಹಸ್ವಾಮಿ ತನ್ನ ಎಲ್ಲಾ ದೋಷಗಳನ್ನು ಮತ್ತು ಮಾನಸಿಕ ಅಶಾಂತಿಯನ್ನು ತೊಡೆದುಹಾಕಿದನು ಎಂದು ಯಮ ಸಂತಷ್ಟಗೊಂಡ ಎಂದು ಬ್ರಹ್ಮಾಂಡ ಮತ್ತು ಸ್ಕಂಧ ಪುರಾಣಗಳು ತಿಳಿಸುತ್ತವೆ. ನೈಮಿಶಾರಣ್ಯದಲ್ಲಿ ಸೂತ ಪುರಾಣಿಕನು ಶೌನಕಾದಿ ಮುನಿಗಳಿಗೆ ಇದನ್ನು ವಿವರಿಸಿದನು ಎಂದೂ ಮತ್ತು ನಾರದನು ಪೃಥು ಮಹಾರಾಜನಿಗೆ ಕ್ಷೇತ್ರದ ಮಹತ್ವವನ್ನು ವಿವರಿಸುವಾಗ ಇದನ್ನೆಲ್ಲಾ ಹೇಳಿದನು ಎಂಬ ಮಾತೂ ಇದೆ.

ಯೋಗ ಲಕ್ಷ್ಮಿ ನೃಸಿಂಹನ ದರ್ಶನಕ್ಕೆ ಮೊದಲು ನಾವು ಧರ್ಮಪುರಿ ದೇವಸ್ಥಾನದಲ್ಲಿ ಯಮನ ದೇವಾಲಯವನ್ನು ಕಾಣುತ್ತೇವೆ. ದಕ್ಷಿಣ ದಿಶಾಧಿಪತಿಯಾದ ಯಮನ ವಿಗ್ರಹದಲ್ಲಿ ದೊಡ್ಡ ಕೋರೆಹಲ್ಲುಗಳೊಂದಿಗೆ ಉಗ್ರ ರೂಪ ಕಂಡುಬರುತ್ತದೆ. ಅಲ್ಲದೆ ಪುರಾಣಗಳ ಪ್ರಕಾರ, ಪರಾಶರನು ನರಸಿಂಹನು ಮಂಗಳದ ಅಧಿಪತಿ ಎಂದು ಹೇಳುತ್ತಾನೆ, ಇದು ಗ್ರಹಗಳ ದೃಷ್ಟಿಯಿಂದ ದಕ್ಷಿಣ ದಿಕ್ಕಿಗೆ ಅಧಿಪತಿ. ಈ ಕ್ರಮದಲ್ಲಿ ಧರ್ಮಪುರಿಗೆ ಭೇಟಿ ನೀಡಿದರೆ ಯಮಪುರಿ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ಇದರಿಂದ ಧರ್ಮಪುರಿಗೆ ಆಗಮಿಸುವ ಭಕ್ತರು ಯಮಧರ್ಮರಾಜನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ಬಹುವಿದಿಯ, ಯಮದ್ವಿತೀಯ ದಿನ ಯಮನಿಗೆ ವಿಶೇಷವಾದ ದಿನವಾಗಿದೆ. ಭಗಿನಿ ಹಸ್ತದೊಡನೆ ಯಮ ಊಟ ಮಾಡಲು ಹೋದ ದಿನ. ಅಂದರೆ ದೀಪಾವಳಿಯ ನಂತರದ ಎರಡನೇ ದಿನ ಇದಾಗಿದೆ. ಮಹಾರಾಷ್ಟ್ರದಲ್ಲಿ ಇದನ್ನು ಭಾಯಿ ದೂಜ್ ಎಂದೂ ಕರೆಯುತ್ತಾರೆ. ಆ ಸಮಯದಲ್ಲಿ ಅಕಾಲಿಕ ಮರಣವನ್ನು ತಡೆಯಲು ಅಥರ್ವಣ ವೇದದಲ್ಲಿ ಆಯುಷ್ಯಸೂಕ್ತ ಪೂಜೆಗಳ ಜೊತೆಗೆ ಯಮಸೂಕ್ತ, ಮಂತ್ರಸೂಕ್ತ, ಪುರುಷಸೂಕ್ತ, ಶ್ರೀಸೂಕ್ತ, ಜ್ವರಹರ ಸ್ತೋತ್ರ, ರೋಗ ನಿವಾರಕ ಸೂಕ್ತ, ಯಮಾಷ್ಟಕಾದಿಗಳನ್ನು ಆಚ್ರಿಸುತ್ತಾರೆ. ಆದರಿಂದಲೇ ಧರ್ಮಪುರಿಗೆ ಭೇಟಿ ನೀಡಿದರೆ ಸಾಕ್ಷಾತ್​​ ಯಮಪುರಿ ದೂರವಾಗುತ್ತದೆ ಎಂಬ ಪ್ರತೀತಿಯಿದೆ.. ಇಲ್ಲಿ ಯಮನನ್ನು ನೋಡಿ ಭಕ್ತರು ಮನಃಶಾಂತಿಯಿಂದ ಹಿಂತಿರುಗುತ್ತಾರೆ.