ಗಣೇಶನ ಪೂಜೆಗೆ ಯಾವ ವಸ್ತುಗಳನ್ನು ಅರ್ಪಿಸಬೇಕು, ಅರ್ಪಿಸಬಾರದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2024 | 1:03 PM

ಗಣೇಶನ ಪೂಜೆ ಮಾಡುವವರು ಕೆಲವು ಆಚಾರ ವಿಚಾರಗಳನ್ನು ಕೂಡ ರೂಢಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಅಥವಾ ಇದಕ್ಕೆ ತದ್ವಿರುದ್ಧವಾಗಿ, ಕೆಲವು ವಸ್ತುಗಳನ್ನು ಅರ್ಪಿಸಿದರೆ ಗಣಪತಿ ಕುಪಿತನಾಗುತ್ತಾನೆ ಅದಲ್ಲದೆ ಇದರಿಂದ ನೀವು ಅನೇಕ ರೀತಿಯ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಬಹುದು. ಆದ್ದರಿಂದ, ಗಣೇಶನ ಪೂಜೆಯಲ್ಲಿ ಯಾವ ವಸ್ತುಗಳನ್ನು ಅರ್ಪಿಸಬೇಕು, ಯಾವುದನ್ನೂ ಅರ್ಪಿಸಬಾರದು ಎಂಬುದನ್ನು ತಿಳಿದುಕೊಳ್ಳಿ. ಬಳಿಕ ದಿನನಿತ್ಯ ಪೂಜೆ ಮಾಡುವಾಗ ಈ ಪರಿಪಾಠಗಳನ್ನು ಅನುಸರಿಸಿ.

ಗಣೇಶನ ಪೂಜೆಗೆ ಯಾವ ವಸ್ತುಗಳನ್ನು ಅರ್ಪಿಸಬೇಕು, ಅರ್ಪಿಸಬಾರದು?
Follow us on

ಯಾವುದೇ ಶುಭ ಸಮಾರಂಭವನ್ನು ಆರಂಭಿಸುವ ಮುನ್ನ ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಏಕೆಂದರೆ ಹಿಂದೂ ಧರ್ಮದಲ್ಲಿ ವಿನಾಯಕನಿಗೆ ಪ್ರಥಮ ಪೂಜೆ ಮಾಡಲಾಗುತ್ತದೆ. ಬುಧವಾರದಂದು ಮನಃಪೂರ್ವಕವಾಗಿ ಗಣಪತಿಯನ್ನು ಪೂಜಿಸುವುದರಿಂದ ಆತ ಸಂತುಷ್ಟನಗುತ್ತಾನೆ ಎನ್ನಲಾಗುತ್ತದೆ. ಇನ್ನು ದೇವಸ್ಥಾನಗಳಿಗೆ ಹೋಗಲು ಸಾಧ್ಯವಿಲ್ಲದಾಗ ಅಥವಾ ಹತ್ತಿರದಲ್ಲಿ ದೇವಾಲಯಗಳು ಇಲ್ಲದಿರುವವರು ಮನೆಯಲ್ಲಿಯೇ ಗಣಪತಿ ಫೋಟೋ ಇಟ್ಟು ಪೂಜೆ ಮಾಡಬಹುದು. ಗಣೇಶನ ಆರಾಧನೆಗೆ ವಿಶೇಷವಾದ ಮಹತ್ವವಿದ್ದು ಅದನ್ನು ತಪ್ಪದೇ ಅನುಸರಿಸಬೇಕು. ನೀವು ಪೂಜೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿದಲ್ಲಿ ಗಣೇಶನ ಕೃಪೆ ಸದಾ ಇರುತ್ತದೆ.

ಗಣೇಶನ ಪೂಜೆ ಮಾಡುವವರು ಕೆಲವು ಆಚಾರ ವಿಚಾರಗಳನ್ನು ಕೂಡ ರೂಢಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಅಥವಾ ಇದಕ್ಕೆ ತದ್ವಿರುದ್ಧವಾಗಿ, ಕೆಲವು ವಸ್ತುಗಳನ್ನು ಅರ್ಪಿಸಿದರೆ ಗಣಪತಿ ಕುಪಿತನಾಗುತ್ತಾನೆ ಅದಲ್ಲದೆ ಇದರಿಂದ ನೀವು ಅನೇಕ ರೀತಿಯ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಬಹುದು. ಆದ್ದರಿಂದ, ಗಣೇಶನ ಪೂಜೆಯಲ್ಲಿ ಯಾವ ವಸ್ತುಗಳನ್ನು ಅರ್ಪಿಸಬೇಕು, ಯಾವುದನ್ನೂ ಅರ್ಪಿಸಬಾರದು ಎಂಬುದನ್ನು ತಿಳಿದುಕೊಳ್ಳಿ. ಬಳಿಕ ದಿನನಿತ್ಯ ಪೂಜೆ ಮಾಡುವಾಗ ಈ ಪರಿಪಾಠಗಳನ್ನು ಅನುಸರಿಸಿ.

ಮನೆಯಲ್ಲಿ ಗಣೇಶನ ಪೂಜೆಯಲ್ಲಿ ನೈವೇದ್ಯ ಅರ್ಪಣೆ ಮಾಡುವವರು ಮೋದಕವನ್ನು, ಸಿಹಿ ಕಡುಬು, ಲಡ್ಡುಗಳನ್ನು ಅರ್ಪಿಸಿದರೆ ಒಳ್ಳೆಯದು. ಇದರಿಂದ ಗಣೇಶ ಸಂತುಷ್ಟನಾಗುತ್ತಾನೆ. ಇನ್ನು ಅಲಂಕಾರಕ್ಕಾಗಿ ಕೆಂಪು, ಹಳದಿ ಹೂವುಗಳನ್ನು ಬಳಸಬಹುದು. ಇನ್ನು ದೂರ್ವೆ ಗಣೇಶನಿಗೆ ಪ್ರೀಯವಾದ್ದರಿಂದ ನೀವು ಪೂಜೆಯಲ್ಲಿ ತಪ್ಪದೇ ಬಳಸಬಹುದು. ಆದರೆ ತುಳಸಿಯನ್ನು ಎಂದಿಗೂ ಗಣೇಶನಿಗೆ ಅರ್ಪಿಸಬಾರದು. ತುಳಸಿಯನ್ನು ಕೇವಲ ಕೃಷ್ಣನಿಗೆ ಮಾತ್ರ ಅರ್ಪಣೆ ಮಾಡಬೇಕು ಅದರ ಹೊರತಾಗಿ ಶಿವನ ಪೂಜೆಯುಲ್ಲಿಯೂ ಕೂಡ ತುಳಸಿ ಬಳಸಬಾರದು.

ಇದನ್ನೂ ಓದಿ: ಕರ್ನಾಟಕದಲ್ಲಿ ಅತಿ ಎತ್ತರದ ನಂದಿ ವಿಗ್ರಹಗಳು ಎಲ್ಲೆಲ್ಲಿವೆ ಗೊತ್ತಾ?

ಗಣೇಶನ ಪೂಜೆಯಲ್ಲಿ ಯಾವುದನ್ನು ಬಳಸಬಾರದು?

– ಬಿಳಿ ಚಂದನ, ಬಿಳಿ ಬಟ್ಟೆ, ಬಿಳಿ ಪವಿತ್ರ ದಾರ ಇತ್ಯಾದಿಗಳನ್ನು ಅರ್ಪಿಸಬಾರದು.

– ಕೇಸರಿ ಹೂವುಗಳನ್ನು ಸಹ ಗಣೇಶನನ್ನು ಪೂಜಿಸುವಾಗ ಬಳಸಲಾಗುವುದಿಲ್ಲ.

– ಗಣೇಶನ ಪೂಜೆಯಲ್ಲಿ ಬಳಸುವ ಅಕ್ಷತೆ ಮುರಿದಿರಬಾರದು. ಇದು ಒಳ್ಳೆಯದಲ್ಲ. ಅದರಲ್ಲಿಯೂ ಗಣೇಶನಿಗೆ ಮುರಿದ ಅಕ್ಷತೆ ಹಾಕಿ ಪೂಜೆ ಮಾಡುವುದು ಮನೆಗೆ ಶ್ರೇಯಸ್ಸ ಅಲ್ಲ ಎನ್ನಲಾಗುತ್ತದೆ.

– ಗಣಪತಿಯನ್ನು ಪೂಜಿಸುವಾಗ ಬಿಳಿ ಬಣ್ಣದ ಹೂವನ್ನು ಅಥವಾ ದೇವ ಕಣಗಿಲೆ ಹೂವುಗಳನ್ನು ಅರ್ಪಿಸಬಾರದು. ಇದನ್ನು ಶಿವನ ಪೂಜೆಯಲ್ಲಿಯೂ ಕೂಡ ಬಳಸಬಾರದು.

– ನಿಮ್ಮ ದಿನನಿತ್ಯದ ಪೂಜೆಯಲ್ಲಿ ಒಣಗಿದ ಮತ್ತು ಹಳೆಯ ಹೂವುಗಳನ್ನು ಅರ್ಪಿಸಬೇಡಿ. ಇದರಿಂದ ಮನೆಯಲ್ಲಿ ಬಡತನ ನೆಲೆಸುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಇದೆಲ್ಲದರ ಹೊರತಾಗಿ ನೀವು ಮನೆಯಲ್ಲಿ ಮೂರ್ತಿ ಪೂಜೆ ಮಾಡುವವರಾಗಿದ್ದರೆ ಪ್ರತಿದಿನ ನೈವೇದ್ಯ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಗಣಪನ ಶಾಪ ತಟ್ಟುತ್ತದೆ, ಹಾಗಾಗಿ ಈ ಬಗ್ಗೆ ನೀವು ಜ್ಯೋತಿಷ್ಯರ ಬಳಿ ವಿಚಾರಿಸಿ, ಪೂಜೆ ಮಾಡುವುದು ಒಳಿತು. ಇಲ್ಲವಾದಲ್ಲಿ ದೇವರಲ್ಲಿಯೇ ಪ್ರಶ್ನೆ ಕೇಳುವ ಸಂಪ್ರದಾಯ ಕೆಲವು ದೇವಸ್ಥಾನಗಳಲ್ಲಿ ಇದ್ದು ಅಲ್ಲಿ ಈ ಬಗ್ಗೆ ವಿಚಾರಿಸಬಹುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ