Shani Dev: ಶನಿವಾರದಂದು ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಗೆ ತರಬೇಡಿ

ಶನಿವಾರ ಶನಿದೇವರ ಪೂಜೆಗೆ ಶುಭ ದಿನವಾದರೂ, ಕೆಲವು ವಸ್ತುಗಳನ್ನು ಖರೀದಿಸುವುದು ಅಶುಭವೆಂದು ಜ್ಯೋತಿಷಿಗಳು ಹೇಳುತ್ತಾರೆ. ಸಾಸಿವೆ ಎಣ್ಣೆ, ಉಪ್ಪು, ಕಪ್ಪು ಎಳ್ಳು, ಕಬ್ಬಿಣದ ವಸ್ತುಗಳು, ಮತ್ತು ಪೊರಕೆಗಳನ್ನು ಶನಿವಾರ ಖರೀದಿಸದಿರಿ. ಇವುಗಳನ್ನು ಖರೀದಿಸುವುದರಿಂದ ಆರೋಗ್ಯ, ಆರ್ಥಿಕ ಮತ್ತು ಸಂಬಂಧಗಳಲ್ಲಿ ಸಮಸ್ಯೆಗಳು ಉಂಟಾಗಬಹುದು.

Shani Dev: ಶನಿವಾರದಂದು ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಗೆ ತರಬೇಡಿ
Shani Dev

Updated on: Jun 13, 2025 | 3:52 PM

ಶನಿವಾರವನ್ನು ಶನಿ ದೇವರನ್ನು ಪೂಜಿಸಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಆದರೆ ಶನಿವಾರ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದರಿಂದ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ಆದ್ದರಿಂದ ಶನಿವಾರ ಯಾವ ವಸ್ತುಗಳನ್ನು ಖರೀದಿಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಾಸಿವೆ ಎಣ್ಣೆ ಖರೀದಿಸಬೇಡಿ:

ಶನಿವಾರದಂದು ಸಾಸಿವೆ ಎಣ್ಣೆಯನ್ನು ತಪ್ಪಾಗಿ ಕೂಡ ಖರೀದಿಸಬಾರದು. ಶನಿವಾರದಂದು ಸಾಸಿವೆ ಎಣ್ಣೆಯನ್ನು ಖರೀದಿಸುವುದು ಕುಟುಂಬದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಶನಿವಾರ ಪೊರಕೆಯನ್ನು ಖರೀದಿಸಬಾರದು. ನೀವು ಪೊರಕೆಯನ್ನು ಖರೀದಿಸಲು ಬಯಸಿದರೆ, ಶುಕ್ರವಾರ ಅದಕ್ಕೆ ಶುಭ ದಿನವಾಗಿದೆ. ಶನಿವಾರ ಪೊರಕೆಯನ್ನು ಖರೀದಿಸುವುದು ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತದೆ.

ಉಪ್ಪು ಖರೀದಿಸಬೇಡಿ:

ಶನಿವಾರದಂದು ಉಪ್ಪನ್ನು ಖರೀದಿಸಬಾರದು ಅಥವಾ ಮನೆಗೆ ತರಬಾರದು. ಶನಿವಾರ ಉಪ್ಪು ಖರೀದಿಸುವುದರಿಂದ ಸಾಲ ಹೆಚ್ಚಾಗುತ್ತದೆ ಮತ್ತು ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗಬಹುದು. ನೀವು ಉಪ್ಪು ಖರೀದಿಸಲು ಬಯಸಿದರೆ, ಶುಕ್ರವಾರದಂದು ಖರೀದಿಸಿ.

ಇದನ್ನೂ ಓದಿ
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

ಕಪ್ಪು ಎಳ್ಳು ಖರೀದಿಸಬೇಡಿ:

ಶನಿವಾರದಂದು ಕಪ್ಪು ಎಳ್ಳು ಮತ್ತು ಕಪ್ಪು ಉದ್ದಿನ ಬೇಳೆಯನ್ನು ಖರೀದಿಸಬಾರದು ಅಥವಾ ಮನೆಗೆ ತರಬಾರದು. ಹಾಗೆ ಮಾಡುವುದರಿಂದ ನಿಮ್ಮ ಪ್ರಮುಖ ಕೆಲಸ ವಿಳಂಬವಾಗಬಹುದು. ಶನಿವಾರದಂದು ಶನಿ ದೇವರಿಗೆ ಕಪ್ಪು ಎಳ್ಳು ಮತ್ತು ಕಪ್ಪು ಉದ್ದಿನ ಬೇಳೆಯನ್ನು ಅರ್ಪಿಸಲು ಬಯಸಿದರೆ ಹಿಂದಿನ ದಿನವೇ ಖರೀದಿಸಿಡಿ.

ಕಬ್ಬಿಣ ಖರೀದಿಸಬೇಡಿ:

ಶನಿವಾರದಂದು ಕಬ್ಬಿಣ ಖರೀದಿಸಬಾರದು. ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸುವುದರಿಂದ ದುರದೃಷ್ಟ ಬರುತ್ತದೆ. ಈ ದಿನ ಕಬ್ಬಿಣ ಖರೀದಿಸುವುದರಿಂದ ಶನಿದೇವರು ಕೋಪಗೊಳ್ಳುತ್ತಾನೆ. ಇದಲ್ಲದೇ ಶನಿವಾರ ಕತ್ತರಿ ಖರೀದಿಸಬಾರದು. ಹಾಗೆ ಮಾಡುವುದರಿಂದ ಸಂಬಂಧಗಳಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಸಂಬಂಧಗಳಲ್ಲಿ ಒತ್ತಡ ಮತ್ತು ತೊಂದರೆಗಳನ್ನು ಎದುರಾಗಬಹುದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Fri, 13 June 25