
ನಿದ್ರೆಯ ಸಮಯದಲ್ಲಿ ಕನಸು ಕಾಣುವುದು ಒಂದು ಸಹಾಯಕ ಪ್ರಕ್ರಿಯೆ. ಆಳವಾದ ನಿದ್ರೆಯ ಸಮಯದಲ್ಲಿ ವಿವಿಧ ಕನಸುಗಳು ಬರುತ್ತವೆ. ಕೆಲವೊಂದು ಕನಸುಗಳು ಖುಷಿಕೊಟ್ಟರೆ, ಇನ್ನೂ ಕೆಲವು ಕನಸುಗಳು ಬೆಚ್ಚಿಬಿದ್ದು ಎಚ್ಚರಗೊಳ್ಳುವಂತೆ ಮಾಡುತ್ತದೆ. ನೀವು ಎಂದಾದರೂ ವಿಷ ಕುಡಿಯುತ್ತಿದ್ದಂತೆ ಕನಸು ಕಂಡಿದ್ದೀರಾ? ಸ್ವಪ್ನ ಶಾಸ್ತ್ರದ ಪ್ರಕಾರ ಈ ಕನಸಿನ ಅರ್ಥವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸ್ವಪ್ನ ಶಾಸ್ತ್ರ ಪ್ರಕಾರ, ನೀವು ವಿಷ ಕುಡಿದಂತೆ ಕನಸು ಕಂಡರೆ, ಅಂತಹ ಕನಸು ಭವಿಷ್ಯದಲ್ಲಿ ಉದ್ಭವಿಸುವ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ಗಂಟೆ. ವಿಷಕಾರಿ ಸಂಬಂಧ, ಮೋಸದ ಸ್ನೇಹ ಅಥವಾ ನಿಮ್ಮ ಶಕ್ತಿ ಮತ್ತು ಮನಸ್ಸಿನ ಶಾಂತಿಯನ್ನು ಹೀರುವ ನಕಾರಾತ್ಮಕ ಕೆಲಸ, ಉದಾಹರಣೆಗೆ ನಿಮಗೆ ನಿಧಾನವಾಗಿ ಅಪಾಯವನ್ನು ತಂದೊಡ್ಡಲಿದೆ ಎಂಬುದರ ಮುನ್ಸೂಚನೆ ಎಂದು ಹೇಳಲಾಗುತ್ತದೆ.
ಅಂತಹ ಕನಸು ನಿಮ್ಮ ಸ್ವಂತ ಜೀವನದ ನಿರ್ಧಾರಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವಿಕೆಯನ್ನು ಸೂಚಿಸುತ್ತದೆ. ಇತರರು ನಿಮ್ಮ ಹಾದಿಯಲ್ಲಿ ಪ್ರಾಬಲ್ಯ ಸಾಧಿಸುತ್ತಿರಬಹುದು. ನೀವು ನಿಮ್ಮ ಸಮಗ್ರತೆಯನ್ನು ಕಳೆದುಕೊಳ್ಳಬಾರದು. ನೀವು ಪರಿಸ್ಥಿತಿಯನ್ನು ಸರಿಪಡಿಸದಿದ್ದರೆ, ಅದು ನಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಸಂಖ್ಯೆ 7ರ ಹಿಂದಿನ ರಹಸ್ಯಗಳು; ಇದು ಶುಭವೋ, ಅಶುಭವೋ?
ಜ್ಯೋತಿಷಿಗಳು ಹೇಳುವಂತೆ ಅಂತಹ ಕನಸುಗಳು ಹೆಚ್ಚಾಗಿ ಎಚ್ಚರಿಕೆಯ ಸೂಚನೆಯಾಗಿ ಕಾರ್ಯನಿರ್ವಹಿಸುತ್ತವೆ. ಅವು ನಿಮ್ಮ ಜೀವನದಲ್ಲಿ ಮುಂಬರುವ ಸನ್ನಿವೇಶಗಳ ಬಗ್ಗೆ ಹೇಳುತ್ತವೆ ಮತ್ತು ಇಂದಿನಿಂದ ವಾಸ್ತವವನ್ನು ಎದುರಿಸಲು ಸಿದ್ಧರಾಗಿರಲು ನಿಮಗೆ ಎಚ್ಚರಿಕೆ ನೀಡುತ್ತವೆ. ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಇದು ಎಚ್ಚರಿಕೆ ಎಂದು ಪರಿಗಣಿಸಲಾಗುತ್ತದೆ.
ಆದ್ದರಿಂದ ನೀವು ವಿಷ ಕುಡಿಯುತ್ತಿದ್ದಂತೆ ಕನಸು ಕಂಡರೆ ನಿಮ್ಮ ಶಕ್ತಿ ಕ್ಷೇತ್ರವನ್ನು ಶುದ್ಧೀಕರಿಸಲು ಉಪ್ಪುಸಹಿತ ನೀರಿನಿಂದ ಸ್ನಾನ ಮಾಡಿ. ನಿಮ್ಮ ನೆಚ್ಚಿನ ದೇವರ ಬಗ್ಗೆ ಯೋಚಿಸುತ್ತಾ ಧ್ಯಾನ ಮಾಡಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ