AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಿನಲ್ಲಿ ಮೆಟ್ಟಿಲು ಹತ್ತುವುದು ಅಥವಾ ಇಳಿಯುವುದು ಕಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?

ಕನಸುಗಳು ಭವಿಷ್ಯದ ಸುಳಿವುಗಳನ್ನು ನೀಡುತ್ತವೆ, ವಿಶೇಷವಾಗಿ ಮೆಟ್ಟಿಲುಗಳ ಕನಸುಗಳು ನಮ್ಮ ಜೀವನದ ಪ್ರಗತಿ ಅಥವಾ ಸವಾಲುಗಳನ್ನು ಸೂಚಿಸುತ್ತವೆ. ಮೆಟ್ಟಿಲು ಹತ್ತುವುದು ಯಶಸ್ಸಿನ ಸಂಕೇತವಾದರೆ, ಇಳಿಯುವುದು ಮರುಪರಿಶೀಲನೆಯ ಅಗತ್ಯವನ್ನು ಹೇಳುತ್ತದೆ. ಬೀಳುವುದು ಅಥವಾ ಸಿಲುಕಿಕೊಳ್ಳುವುದು ತಾತ್ಕಾಲಿಕ ಹಿನ್ನಡೆಯ ಸಂಕೇತ. ಆತಂಕಪಡದೆ, ನಿಮ್ಮ ಕನಸುಗಳ ನೈಜ ಅರ್ಥ ಅರಿತು ಧೈರ್ಯದಿಂದ ಮುನ್ನಡೆಯಿರಿ.

ಕನಸಿನಲ್ಲಿ ಮೆಟ್ಟಿಲು ಹತ್ತುವುದು ಅಥವಾ ಇಳಿಯುವುದು ಕಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?
ಕನಸಿನಲ್ಲಿ ಮೆಟ್ಟಿಲುಗಳನ್ನು ಹತ್ತುವುದು Image Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 30, 2026 | 11:10 AM

Share

ಕನಸುಗಳು ಎಷ್ಟೋ ಬಾರಿ ನಮಗೆ ಭವಿಷ್ಯದ ಸುಳಿವುಗಳನ್ನು ನೀಡುತ್ತವೆ. ಪ್ರತಿಯೊಂದು ಕನಸಿಗೂ ತನ್ನದೇ ಆದ ಅರ್ಥವಿದ್ದು, ಅದು ನಮ್ಮ ಜೀವನದಲ್ಲಿ ನಡೆಯಬಹುದಾದ ಪ್ರಮುಖ ಘಟನೆಗಳ ಸಂಕೇತವಾಗಿರಬಹುದು ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ನಿಮ್ಮಲ್ಲಿ ಅನೇಕರಿಗೆ ಕನಸಿನಲ್ಲಿ ಮೆಟ್ಟಿಲುಗಳನ್ನು ಹತ್ತುವ ಅಥವಾ ಇಳಿಯುವ ದೃಶ್ಯಗಳು ಬಂದು ಹಠಾತ್ ಎಚ್ಚರವಾಗಿರಬಹುದು. ಕನಸಿನಲ್ಲಿ ಬರುವ ಮೆಟ್ಟಿಲುಗಳ ದಿಕ್ಕು ಮತ್ತು ಅವುಗಳ ಸ್ಥಿತಿ ಅತ್ಯಂತ ಮಹತ್ವದ್ದಾಗಿರುತ್ತವೆ. ಈ ಕನಸುಗಳ ನೈಜ ಅರ್ಥ ಮತ್ತು ಭವಿಷ್ಯದ ಮೇಲಾಗುವ ಪರಿಣಾಮಗಳ ವಿವರ ಇಲ್ಲಿದೆ.

ಕನಸಿನಲ್ಲಿ ಮೆಟ್ಟಿಲುಗಳನ್ನು ಹತ್ತುವುದು:

ಕನಸಿನಲ್ಲಿ ಮೆಟ್ಟಿಲುಗಳನ್ನು ಮೇಲಕ್ಕೆ ಹತ್ತುತ್ತಿರುವಂತೆ ಕಂಡರೆ ಅದು ಅತ್ಯಂತ ಶುಭ ಶಕುನ. ಈ ಕನಸು ನಿಮ್ಮ ಜೀವನದ ಪ್ರಗತಿಯನ್ನು ಸೂಚಿಸುತ್ತದೆ. ನೀವು ವೈಯಕ್ತಿಕವಾಗಿ ಬೆಳೆಯುತ್ತಿರುವುದು, ವೃತ್ತಿರಂಗದಲ್ಲಿ ಬಡ್ತಿ ಪಡೆಯುವುದು ಅಥವಾ ನಿಮ್ಮ ಗುರಿಯತ್ತ ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದರ ಸಂಕೇತವಿದು. ಕನಸಿನಲ್ಲಿ ಕಷ್ಟಪಟ್ಟು ಮೆಟ್ಟಿಲು ಹತ್ತಿ ಒಂದು ಎತ್ತರದ ಸ್ಥಾನ ತಲುಪಿದರೆ, ನಿಜ ಜೀವನದಲ್ಲೂ ನಿಮ್ಮ ಕಠಿಣ ಪರಿಶ್ರಮದಿಂದ ಶೀಘ್ರದಲ್ಲೇ ದೊಡ್ಡ ಸಾಧನೆ ಮಾಡಲಿದ್ದೀರಿ ಎಂದರ್ಥ.

ಕನಸಿನಲ್ಲಿ ಮೆಟ್ಟಿಲುಗಳನ್ನು ಇಳಿಯುವುದು:

ಮೆಟ್ಟಿಲುಗಳನ್ನು ಕೆಳಗೆ ಇಳಿಯುವ ಕನಸು ಬಂದರೆ, ನಿಮ್ಮ ಪ್ರಗತಿಯಲ್ಲಿ ಯಾವುದೋ ಕಾರಣಕ್ಕೆ ಸ್ಥಗಿತ ಉಂಟಾಗಿದೆ ಎಂದರ್ಥ. ಆದರೆ ಇದು ಭವಿಷ್ಯದ ಕೆಟ್ಟ ಸೂಚನೆಯಲ್ಲ; ಬದಲಿಗೆ ನೀವು ಇನ್ನಷ್ಟು ಶ್ರಮ ವಹಿಸಬೇಕು ಎಂದು ಜಾಗೃತಗೊಳಿಸುವ ಸಂಕೇತ. ನೀವು ನಿಜ ಜೀವನದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡು, ನಿಮ್ಮ ಯೋಜನೆಗಳನ್ನು ಮರುಪರಿಶೀಲಿಸಬೇಕು ಮತ್ತು ಪ್ರಾಯೋಗಿಕವಾಗಿ ಯೋಚಿಸಬೇಕು ಎಂಬುದನ್ನು ಈ ಕನಸು ನೆನಪಿಸುತ್ತದೆ.

ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?

ಮೆಟ್ಟಿಲುಗಳಿಂದ ಜಾರಿಬೀಳುವುದು:

  • ಬೀಳುವಾಗ ಯಾರಾದರೂ ಹಿಡಿದುಕೊಂಡರೆ: ನಿಮ್ಮ ಗುರಿ ಸಾಧನೆಯಲ್ಲಿ ತಾತ್ಕಾಲಿಕ ಹಿನ್ನಡೆಯಾಗಬಹುದು, ಆದರೆ ಒಬ್ಬ ಹಿತೈಷಿ ಅಥವಾ ಆಪ್ತರು ನಿಮಗೆ ಸಹಾಯ ಮಾಡಿ ಮತ್ತೆ ಮುನ್ನಡೆಯಲು ದಾರಿ ತೋರಿಸುತ್ತಾರೆ.
  • ಮೆಟ್ಟಿಲಿನಿಂದ ಜಾರಿಬಿದ್ದರೆ: ಜೀವನದಲ್ಲಿ ಎದುರಾಗುವ ಹಠಾತ್ ಆಘಾತ, ವಿಷಯಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಭಯ ಅಥವಾ ದೊಡ್ಡ ಯಶಸ್ಸಿನ ನಂತರ ಎಲ್ಲಿ ಸೋತುಬಿಡುತ್ತೇವೆಯೋ ಎನ್ನುವ ಭೀತಿಯನ್ನು ಈ ಕನಸು ಪ್ರತಿಬಿಂಬಿಸುತ್ತದೆ.

ಮೆಟ್ಟಿಲುಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳುವುದು:

ನೀವು ಮೆಟ್ಟಿಲುಗಳ ಗೊಂದಲಮಯ ಮಾರ್ಗದಲ್ಲಿ ಸಿಲುಕಿಕೊಂಡು ಹೊರಬರಲು ದಾರಿ ಹುಡುಕುತ್ತಿರುವಂತೆ ಕನಸು ಕಂಡರೆ, ನಿಜ ಜೀವನದಲ್ಲಿ ಜಟಿಲವಾದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಮಾರ್ಗವು ಗೊಂದಲಮಯವಾಗಿದ್ದರೂ, ನಿಮ್ಮ ನಿರಂತರ ಶ್ರಮದಿಂದ ಶೀಘ್ರದಲ್ಲೇ ಆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಿದ್ದೀರಿ ಎಂದು ಇದು ಸೂಚಿಸುತ್ತದೆ.

ಕನಸಿನಲ್ಲಿ ಮೆಟ್ಟಿಲುಗಳು ಕಂಡಾಗ ಆತಂಕಪಡುವ ಅಗತ್ಯವಿಲ್ಲ. ಇದು ಭವಿಷ್ಯದ ಸುಳಿವುಗಳು ಮತ್ತು ಜಾಗೃತಿಯ ಮಿಶ್ರ ಸಂಕೇತವಾಗಿದೆ. ಕನಸಿನಿಂದ ಭಯಗೊಳ್ಳುವ ಬದಲು, ನಿಮ್ಮ ಪ್ರಯತ್ನ ಹಾಗೂ ಕಾಯಕವನ್ನು ನಂಬಿ ಧೈರ್ಯವಾಗಿ ಮುನ್ನಡೆಯುವುದು ಸೂಕ್ತ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು:

ಪ್ರಶ್ನೆ 1: ಕನಸಿನಲ್ಲಿ ಮೆಟ್ಟಿಲುಗಳನ್ನು ಹತ್ತುವುದು ಯಾವುದರ ಸಂಕೇತ?

ಉತ್ತರ: ಕನಸಿನಲ್ಲಿ ಮೆಟ್ಟಿಲುಗಳನ್ನು ಹತ್ತುವುದು ನಿಮ್ಮ ಜೀವನದ ಪ್ರಗತಿ, ಯಶಸ್ಸು ಮತ್ತು ಕಠಿಣ ಪರಿಶ್ರಮಕ್ಕೆ ಸಿಗುವ ಫಲದ ಶುಭ ಸಂಕೇತ.

ಪ್ರಶ್ನೆ 2: ಮೆಟ್ಟಿಲುಗಳನ್ನು ಕೆಳಗೆ ಇಳಿಯುವ ಕನಸು ಕಂಡರೆ ಏನರ್ಥ?

ಉತ್ತರ: ಪ್ರಗತಿಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದೆ ಎಂದರ್ಥ. ಇದು ಕೆಲಸದಲ್ಲಿ ಮತ್ತಷ್ಟು ಶ್ರಮ ವಹಿಸಲು ಮತ್ತು ಮರುಚಿಂತನೆ ಮಾಡಲು ನೀಡುವ ಜಾಗೃತಿಯ ಸಂಕೇತ.

ಪ್ರಶ್ನೆ 3: ಮೆಟ್ಟಿಲುಗಳಿಂದ ಜಾರಿಬೀಳುವ ಕನಸು ಏನನ್ನು ಸೂಚಿಸುತ್ತದೆ?

ಉತ್ತರ: ಜೀವನದಲ್ಲಿ ಎದುರಾಗುವ ಹಠಾತ್ ಹಿನ್ನಡೆ ಅಥವಾ ನಿಯಂತ್ರಣ ಕಳೆದುಕೊಳ್ಳುವ ಭಯವನ್ನು ಇದು ಸೂಚಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More