Phalguna Amavasya 2025
ಪೂರ್ವಜರ ಶ್ರಾದ್ಧ ಕಾರ್ಯಗಳನ್ನು ನಿರ್ವಹಿಸಲು ಅಮಾವಾಸ್ಯೆ ಅತ್ಯುತ್ತಮ ತಿಥಿ ಎಂದು ಪರಿಗಣಿಸಲಾಗಿದೆ. ಈ ವರ್ಷ ಫಾಲ್ಗುಣ ಅಮವಾಸ್ಯೆ ಗುರುವಾರ, ಫೆಬ್ರವರಿ 27 ರಂದು ಬಂದಿದೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡಿ ದಾನ ಮಾಡುವವರಿಗೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರುತ್ತದೆ ಎಂದು ನಂಬಲಾಗಿದೆ.
ಫಾಲ್ಗುಣ ಅಮವಾಸ್ಯೆಯ ಸಮಯ:
ಫಾಲ್ಗುಣ ಅಮಾವಾಸ್ಯೆ ಫೆಬ್ರವರಿ 27 ರಂದು ಬೆಳಿಗ್ಗೆ 8.54 ಕ್ಕೆ ಪ್ರಾರಂಭವಾಗಿ ಫೆಬ್ರವರಿ 28 ರಂದು ಬೆಳಿಗ್ಗೆ 6.14 ಕ್ಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಫಾಲ್ಗುಣ ಮಾಸದಲ್ಲಿ ಪ್ರದೋಷ ವ್ರತ ಯಾವಾಗ? ದಿನಾಂಕ ಮತ್ತು ಶುಭ ಸಮಯ ತಿಳಿಯಿರಿ
ಫಾಲ್ಗುಣ ಅಮವಾಸ್ಯೆಯಂದು ಈ ಪರಿಹಾರಗಳನ್ನು ಮಾಡಿ:
- ಫಾಲ್ಗುಣ ಅಮವಾಸ್ಯೆಯಂದು, ನೀರಿನಲ್ಲಿ ಕಪ್ಪು ಎಳ್ಳನ್ನು ಸೇರಿಸಿ ಸ್ನಾನ ಮಾಡಿ. ತರ್ಪಣದಲ್ಲಿ ಎಳ್ಳು ಮತ್ತು ಕುಶವನ್ನು ಸಹ ಬಳಸಿ. ಇದು ಪೂರ್ವಜರನ್ನು ಮೆಚ್ಚಿಸುತ್ತದೆ. ಇದರಿಂದ ಕುಟುಂಬ ಸದಸ್ಯರು ಸಂತೋಷ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ ಎಂದು ನಂಬಲಾಗಿದೆ.
- ಫಾಲ್ಗುಣ ಅಮವಾಸ್ಯೆಯಂದು ಬೆಳಿಗ್ಗೆ ಅರಳಿ ಮರಕ್ಕೆ ನೀರು ಅರ್ಪಿಸಿ ಮತ್ತು ಸಂಜೆ ಶುದ್ಧ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ. ಪಿತೃ ಸೂಕ್ತಂ ಪಠಿಸಿ. ಇದು ಪೂರ್ವಜರ ಆತ್ಮಗಳನ್ನು ತೃಪ್ತಿಪಡಿಸುತ್ತದೆ.
- ಫಾಲ್ಗುಣ ಅಮವಾಸ್ಯೆಯಂದು, ಹಸುವಿನ ಸೆಗಣಿಯಿಂದ ಮಾಡಿದ ಬೆರಣಿ ಸುಟ್ಟು ಅದರ ಮೇಲೆ ತುಪ್ಪ-ಬೆಲ್ಲದ ಧೂಪವನ್ನು ಅರ್ಪಿಸಿ ‘ಪಿತೃ ದೇವತಾಭ್ಯೋ ಅರ್ಪಣಮಸ್ತು’ ಎಂದು ಹೇಳಿ. ಅಲ್ಲದೆ, ಪೂರ್ವಜರನ್ನು ಸ್ಮರಿಸಿ, ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. ಹೀಗೆ ಮಾಡುವುದರಿಂದ, ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಕುಟುಂಬದದಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ