Kannada News Spiritual February Festival Calendar 2026: Important Festival List Of February month
February Festival List 2026: ಫೆಬ್ರವರಿ ತಿಂಗಳಲ್ಲಿ ಆಚರಿಸುವ ಹಬ್ಬಗಳಾವುವು? ಇಲ್ಲಿದೆ ಮಾಹಿತಿ
ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳು ಕೂಡಾ ಒಂದಲ್ಲಾ ಒಂದು ವ್ರತಾಚರಣೆ, ಹಬ್ಬಗಳು ಇದ್ದೇ ಇರುತ್ತವೆ. ಹೀಗಾಗಿ ವರ್ಷಪೂರ್ತಿ ಹಲವಾರು ಹಬ್ಬ ಹರಿದಿನಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೀಗ ನೀವು ಈ ವರ್ಷದ ಎರಡನೇ ತಿಂಗಳಾದ ಫೆಬ್ರವರಿಯಲ್ಲಿ ಆಚರಿಸಲಾಗುವ ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ. ಈ ಕುರಿತಾದ ಮಾಹಿತಿ ಇಲ್ಲಿದೆ.
ಜನವರಿ ಮಾಸ ಕಳೆದು, ಇನ್ನೇನು ಕೆಲವೇ ದಿನಗಳಲ್ಲಿಈ ವರ್ಷದ ಎರಡನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. 2026ರ ಮೊದಲ ತಿಂಗಳಾದ ಜನವರಿ ಹೇಗೆ ಕಳೆಯಿತ್ತೆಂದು ತಿಳಿಯುತ್ತಿಲ್ಲ. ಹಿಂದೂ ಪಂಚಾಂಗದ (Hindu Calendar) ಪ್ರಕಾರ ಫೆಬ್ರವರಿ ತಿಂಗಳು ಮಾಘ ಮಾಸವೆಂದು ಜನಪ್ರಿಯವಾಗಿದ್ದು, ಈ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು ಹಾಗೂ ವ್ರತಾಚರಣೆಗಳಿವೆ. ಈ ಪವಿತ್ರ ಮಾಸದಲ್ಲಿ ವೇದವ್ಯಾಸ ಪೂಜೆಯಿಂದ ಹಿಡಿದು ಶ್ರೀರಾಘವೇಂದ್ರ ಜಯಂತಿಯವರೆಗೆ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ
ಫೆಬ್ರವರಿ 01- ವೇದವ್ಯಾಸ ಪೂಜೆ
ಫೆಬ್ರವರಿ 02- ಮಾಘ ಕೃಷ್ಣ ಪಕ್ಷ
ಫೆಬ್ರವರಿ 04- ಶಬೀ ಬರಾತ್
ಫೆಬ್ರವರಿ 05- ಸಂಕಷ್ಟಹರ ಚತುರ್ಥಿ
ಫೆಬ್ರವರಿ 06- ಮಹಾನಕ್ಷತ್ರ ಧನಿಷ್ಠಾ
ಫೆಬ್ರವರಿ 09- ಸೀತಾ ಜಯಂತಿ
ಫೆಬ್ರವರಿ 12-ಕುಂಭ ಸಂಕ್ರಮಣ
ಫೆಬ್ರವರಿ 13- ಸರ್ವೈಕಾದಶಿ ವಿಜಯಾ
ಫೆಬ್ರವರಿ 14- ಪ್ರದೋಷ
ಫೆಬ್ರವರಿ 15- ಮಹಾಶಿವರಾತ್ರಿ
ಫೆಬ್ರವರಿ 17 – ಅಮಾವಾಸ್ಯಾ
ಫೆಬ್ರವರಿ 18- ಫಾಲ್ಗುನ ಶುಕ್ಲ ಪಕ್ಷ
ಫೆಬ್ರವರಿ 19- ರಾಮಕೃಷ್ಣ ಪರಮ ಹಂಸ ಜನ್ಮದಿನ
ಫೆಬ್ರವರಿ 19- ರಂಜಾನ್ ಪ್ರಾರಂಭ
ಫೆಬ್ರವರಿ 24- ಶ್ರೀ ರಾಘವೇಂದ್ರ ಜಯಂತಿ
ಫೆಬ್ರವರಿ 27- ಸರ್ವೈಕಾದಶಿ ಆಮಲಕಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ