AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rose Plant: ಮನೆಯ ಅಂಗಳದಲ್ಲಿ ಗುಲಾಬಿ ಗಿಡ ನೆಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಮನೆಯಲ್ಲಿ ಗುಲಾಬಿ ಗಿಡ ನೆಡುವುದು ಅಂದ ಹೆಚ್ಚಿಸುತ್ತದೆ, ಆದರೆ ವಾಸ್ತು ಮತ್ತು ಫೆಂಗ್ ಶೂಯಿ ಇದರ ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿವೆ. ವಾಸ್ತು ಪ್ರಕಾರ ಮುಳ್ಳಿನ ಸಸ್ಯಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಡುವುದು ಅಶುಭ. ಆದರೆ ಫೆಂಗ್ ಶೂಯಿ ಕೆಂಪು ಗುಲಾಬಿಗಳನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸುತ್ತದೆ. ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ನೆಟ್ಟರೆ, ಗುಲಾಬಿಯ ಸೌಂದರ್ಯದ ಜೊತೆಗೆ ಸಕಾರಾತ್ಮಕ ಪರಿಣಾಮಗಳೂ ಸಿಗುತ್ತವೆ.

Rose Plant: ಮನೆಯ ಅಂಗಳದಲ್ಲಿ ಗುಲಾಬಿ ಗಿಡ ನೆಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ
ಗುಲಾಬಿ ಗಿಡ
ಅಕ್ಷತಾ ವರ್ಕಾಡಿ
|

Updated on: Jan 29, 2026 | 11:18 AM

Share

ಮನೆಯ ಅಂಗಳದಲ್ಲಿ ಬಣ್ಣ ಬಣ್ಣದ ಗುಲಾಬಿ ಗಿಡಗಳನ್ನು ನೆಡುವುದು ಮನೆಯ ಅಂದವವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತುಶಾಸ್ತ್ರ ಮತ್ತು ಫೆಂಗ್ ಶೂಯಿ ದೃಷ್ಟಿಕೋನದಿಂದ ನೋಡಿದರೆ, ಮನೆಯ ಅಂಗಳದಲ್ಲಿ ಗುಲಾಬಿ ಗಿಡ ನೆಡುವ ವಿಷಯಕ್ಕೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವು ನಂಬಿಕೆಗಳು ಇದನ್ನು ಶುಭವೆಂದು ಹೇಳಿದರೆ, ಕೆಲವು ಅಶುಭ ಎಂದು ಸೂಚಿಸುತ್ತವೆ. ಒಟ್ಟಾರೆಯಾಗಿ ಗುಲಾಬಿ ಗಿಡ ನೆಡುವುದು ತಪ್ಪಲ್ಲ, ಆದರೆ ಸ್ಥಳ ಮತ್ತು ದಿಕ್ಕು ಅತ್ಯಂತ ಮುಖ್ಯ ಎಂದು ತಜ್ಞರು ಎಚ್ಚರಿಸುತ್ತಾರೆ.

ವಾಸ್ತು ಪ್ರಕಾರ, ಮನೆಯ ಮುಖ್ಯ ಪ್ರವೇಶದ ಬಳಿ ಮುಳ್ಳಿನ ಸಸ್ಯಗಳನ್ನು ನೆಡುವುದು ಒಳ್ಳೆಯದಲ್ಲ. ಗುಲಾಬಿ ಗಿಡಕ್ಕೆ ಮುಳ್ಳುಗಳು ಇರುವುದರಿಂದ, ಮನೆಯ ಮುಂದೆ ಇದನ್ನು ನೆಡುವುದರಿಂದ ಮನೆಯಲ್ಲಿ ಅಶಾಂತಿ, ಕಲಹಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ನಂಬಲಾಗುತ್ತದೆ. ಇದರಿಂದ ಜೀವನದಲ್ಲಿ ಅನಾವಶ್ಯಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ, ವಾಸ್ತು ದೃಷ್ಟಿಯಿಂದ ಮನೆಯ ಮುಂದೆ ಗುಲಾಬಿ ಗಿಡ ನೆಡುವುದು ಅಶುಭ ಎಂದು ಹೇಳಲಾಗುತ್ತದೆ.

ಫೆಂಗ್ ಶೂಯಿ ಪ್ರಕಾರ:

ಇನ್ನೊಂದೆಡೆ, ಫೆಂಗ್ ಶೂಯಿ ಪ್ರಕಾರ ಗುಲಾಬಿ ಗಿಡವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿಯುಳ್ಳ ಸಸ್ಯವಾಗಿದೆ. ವಿಶೇಷವಾಗಿ ಕೆಂಪು ಗುಲಾಬಿಗಳು ಶಕ್ತಿ, ಪ್ರೀತಿ ಮತ್ತು ಉತ್ಸಾಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಿಳಿ ಗುಲಾಬಿಗಳು ಶಾಂತಿ ಮತ್ತು ಸೌಹಾರ್ದತೆಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ, ಸರಿಯಾದ ಸ್ಥಳದಲ್ಲಿ ಗುಲಾಬಿ ಗಿಡವನ್ನು ನೆಟ್ಟರೆ ಮನೆಯ ವಾತಾವರಣ ಹರ್ಷಭರಿತವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಗುಲಾಬಿ ಮರವನ್ನು ನೆಡಲು ಸೂಕ್ತ ಸ್ಥಳ:

ಗುಲಾಬಿ ಗಿಡಗಳನ್ನು ಮನೆಯ ಮುಂದೆ ಬದಲು, ಬಾಲ್ಕನಿಯಲ್ಲಿ ಮನೆಯ ನೈಋತ್ಯ ದಿಕ್ಕಿನಲ್ಲಿ ನೆಡುವುದು ಉತ್ತಮ ಎಂದು ಹೇಳಲಾಗುತ್ತದೆ. ಇದಲ್ಲದೆ, ಕೆಂಪು ಹೂವುಗಳನ್ನು ಹೊಂದಿರುವ ಸಸ್ಯಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ನಂಬಲಾಗಿದೆ. ಇದರಿಂದ ಮನೆಯವರ ಸಾಮಾಜಿಕ ಸ್ಥಾನಮಾನ ಹೆಚ್ಚುತ್ತದೆ ಹಾಗೂ ಕುಟುಂಬ ಸಂಬಂಧಗಳು ಬಲವಾಗುತ್ತವೆ ಎನ್ನಲಾಗುತ್ತದೆ.

ಒಟ್ಟಾರೆಯಾಗಿ ಗುಲಾಬಿ ಗಿಡವನ್ನು ನೆಡುವುದು ತಪ್ಪಲ್ಲ, ಆದರೆ ಸ್ಥಳ ಮತ್ತು ದಿಕ್ಕು ಅತ್ಯಂತ ಮುಖ್ಯ. ಮನೆಯ ಮುಖ್ಯ ದ್ವಾರದ ಮುಂದೆ ನೆಡುವುದನ್ನು ತಪ್ಪಿಸಿ, ಸೂಕ್ತ ದಿಕ್ಕಿನಲ್ಲಿ ನೆಟ್ಟರೆ ಗುಲಾಬಿಯ ಸೌಂದರ್ಯವೂ, ಅದರ ಸಕಾರಾತ್ಮಕ ಪರಿಣಾಮವೂ ನಿಮ್ಮ ಮನೆಗೆ ಲಭಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ