February Festival List 2026: ಫೆಬ್ರವರಿ ತಿಂಗಳಲ್ಲಿ ಆಚರಿಸುವ ಹಬ್ಬಗಳಾವುವು? ಇಲ್ಲಿದೆ ಮಾಹಿತಿ
ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳು ಕೂಡಾ ಒಂದಲ್ಲಾ ಒಂದು ವ್ರತಾಚರಣೆ, ಹಬ್ಬಗಳು ಇದ್ದೇ ಇರುತ್ತವೆ. ಹೀಗಾಗಿ ವರ್ಷಪೂರ್ತಿ ಹಲವಾರು ಹಬ್ಬ ಹರಿದಿನಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೀಗ ನೀವು ಈ ವರ್ಷದ ಎರಡನೇ ತಿಂಗಳಾದ ಫೆಬ್ರವರಿಯಲ್ಲಿ ಆಚರಿಸಲಾಗುವ ಹಬ್ಬಗಳ ಬಗ್ಗೆ ತಿಳಿದುಕೊಳ್ಳಿ. ಈ ಕುರಿತಾದ ಮಾಹಿತಿ ಇಲ್ಲಿದೆ.

ಫೆಬ್ರವರಿ ತಿಂಗಳ ಹಬ್ಬಗಳ ಪಟ್ಟಿ 2026
ಜನವರಿ ಮಾಸ ಕಳೆದು, ಇನ್ನೇನು ಕೆಲವೇ ದಿನಗಳಲ್ಲಿಈ ವರ್ಷದ ಎರಡನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. 2026ರ ಮೊದಲ ತಿಂಗಳಾದ ಜನವರಿ ಹೇಗೆ ಕಳೆಯಿತ್ತೆಂದು ತಿಳಿಯುತ್ತಿಲ್ಲ. ಹಿಂದೂ ಪಂಚಾಂಗದ (Hindu Calendar) ಪ್ರಕಾರ ಫೆಬ್ರವರಿ ತಿಂಗಳು ಮಾಘ ಮಾಸವೆಂದು ಜನಪ್ರಿಯವಾಗಿದ್ದು, ಈ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು ಹಾಗೂ ವ್ರತಾಚರಣೆಗಳಿವೆ. ಈ ಪವಿತ್ರ ಮಾಸದಲ್ಲಿ ವೇದವ್ಯಾಸ ಪೂಜೆಯಿಂದ ಹಿಡಿದು ಶ್ರೀರಾಘವೇಂದ್ರ ಜಯಂತಿಯವರೆಗೆ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ
- ಫೆಬ್ರವರಿ 01- ವೇದವ್ಯಾಸ ಪೂಜೆ
- ಫೆಬ್ರವರಿ 02- ಮಾಘ ಕೃಷ್ಣ ಪಕ್ಷ
- ಫೆಬ್ರವರಿ 04- ಶಬೀ ಬರಾತ್
- ಫೆಬ್ರವರಿ 05- ಸಂಕಷ್ಟಹರ ಚತುರ್ಥಿ
- ಫೆಬ್ರವರಿ 06- ಮಹಾನಕ್ಷತ್ರ ಧನಿಷ್ಠಾ
- ಫೆಬ್ರವರಿ 09- ಸೀತಾ ಜಯಂತಿ
- ಫೆಬ್ರವರಿ 12-ಕುಂಭ ಸಂಕ್ರಮಣ
- ಫೆಬ್ರವರಿ 13- ಸರ್ವೈಕಾದಶಿ ವಿಜಯಾ
- ಫೆಬ್ರವರಿ 14- ಪ್ರದೋಷ
- ಫೆಬ್ರವರಿ 15- ಮಹಾಶಿವರಾತ್ರಿ
- ಫೆಬ್ರವರಿ 17 – ಅಮಾವಾಸ್ಯಾ
- ಫೆಬ್ರವರಿ 18- ಫಾಲ್ಗುನ ಶುಕ್ಲ ಪಕ್ಷ
- ಫೆಬ್ರವರಿ 19- ರಾಮಕೃಷ್ಣ ಪರಮ ಹಂಸ ಜನ್ಮದಿನ
- ಫೆಬ್ರವರಿ 19- ರಂಜಾನ್ ಪ್ರಾರಂಭ
- ಫೆಬ್ರವರಿ 24- ಶ್ರೀ ರಾಘವೇಂದ್ರ ಜಯಂತಿ
- ಫೆಬ್ರವರಿ 27- ಸರ್ವೈಕಾದಶಿ ಆಮಲಕಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
