AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neelam Stone: ನೀಲಿ ನೀಲಮಣಿಯನ್ನು ಧರಿಸುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ

ನೀಲಿ ನೀಲಮಣಿ (Blue Sapphire/Neelam ವೈದಿಕ ಜ್ಯೋತಿಷ್ಯದಲ್ಲಿ ಶನಿಯ ಅತ್ಯಂತ ಶಕ್ತಿಶಾಲಿ ರತ್ನ. ಇದು ಶಿಸ್ತು, ಕರ್ಮ ಮತ್ತು ನ್ಯಾಯವನ್ನು ಪ್ರತಿನಿಧಿಸುತ್ತದೆ. ನೀಲಮಣಿ ವೇಗವಾಗಿ ಫಲಿತಾಂಶ ನೀಡುತ್ತದೆ, ಆದರೆ ಜಾತಕ ಪರಿಶೀಲನೆ ಇಲ್ಲದೆ ಧರಿಸುವುದು ಅಪಾಯಕಾರಿ. ಸರಿಯಾಗಿ ಧರಿಸಿದರೆ, ಇದು ವೃತ್ತಿ ಪ್ರಗತಿ, ಸ್ಥಿರತೆ ಮತ್ತು ದೀರ್ಘಕಾಲೀನ ಯಶಸ್ಸನ್ನು ತರುತ್ತದೆ, ವಿಶೇಷವಾಗಿ ಶನಿ ಮಹಾದಶೆಯಲ್ಲಿ ಧರಿಸುವುದು ಶುಭ.

Neelam Stone: ನೀಲಿ ನೀಲಮಣಿಯನ್ನು ಧರಿಸುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ನೀಲಿ ನೀಲಮಣಿ
ಅಕ್ಷತಾ ವರ್ಕಾಡಿ
|

Updated on: Jan 28, 2026 | 2:51 PM

Share

ನೀಲಿ ನೀಲಮಣಿಯನ್ನು ವೈದಿಕ ಜ್ಯೋತಿಷ್ಯದಲ್ಲಿ ಶನಿ ಗ್ರಹದ ಅತ್ಯಂತ ಶಕ್ತಿಶಾಲಿ ರತ್ನವೆಂದು ಪರಿಗಣಿಸಲಾಗುತ್ತದೆ. ಶನಿಯು ಕರ್ಮ, ಶಿಸ್ತು, ತಾಳ್ಮೆ ಮತ್ತು ನ್ಯಾಯದ ಪ್ರತೀಕವಾಗಿದೆ. ನೀಲಿ ಮಣಿಯು ಇತರ ರತ್ನಗಳಿಗಿಂತ ವೇಗವಾಗಿ ಫಲಿತಾಂಶ ನೀಡುತ್ತದೆ. ಇದರ ಉದ್ದೇಶ ಸೌಕರ್ಯ ನೀಡುವುದಲ್ಲ, ಬದಲಾಗಿ ವ್ಯಕ್ತಿಯನ್ನು ಶಿಸ್ತು, ಜವಾಬ್ದಾರಿ ಮತ್ತು ಕಠಿಣ ಪರಿಶ್ರಮದ ಮಾರ್ಗದಲ್ಲಿ ನಡೆಸುವುದಾಗಿದೆ. ಶನಿಯ ಮಹಾದಶೆ, ಸಾಡೇ ಸಾತಿ ಅಥವಾ ವಿಳಂಬಗಳು ಹೆಚ್ಚಾಗುವ ಸಮಯದಲ್ಲಿ, ಶನಿ ಶುಭವಾಗಿದ್ದರೆ ನೀಲಮಣಿಯನ್ನು ಧರಿಸಲು ಶಿಫಾರಸು ಮಾಡಲಾಗುತ್ತದೆ.

ನೀಲಮಣಿಯನ್ನು ಧರಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಇದು ನೈಸರ್ಗಿಕವಾಗಿರಬೇಕು ಮತ್ತು ಯಾವುದೇ ಬಿರುಕುಗಳಿಲ್ಲದಿರಬೇಕು. ಸಾಮಾನ್ಯವಾಗಿ 3 ರಿಂದ 5 ರಟ್ಟಿ ತೂಕವನ್ನು ಶಿಫಾರಸು ಮಾಡಲಾಗುತ್ತದೆ, ಆದರೆ ಜಾತಕ ಪರಿಶೀಲನೆ ಇಲ್ಲದೆ ಧರಿಸುವುದು ಅಪಾಯಕಾರಿ. ತಪ್ಪಾದ ವ್ಯಕ್ತಿಗೆ ನೀಲಮಣಿ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಸರಿಯಾದ ವ್ಯಕ್ತಿಗೆ, ಸರಿಯಾದ ಸಮಯದಲ್ಲಿ ಧರಿಸಿದರೆ, ನೀಲಿಮಣಿಯು ವೃತ್ತಿಜೀವನದಲ್ಲಿ ವೇಗದ ಪ್ರಗತಿ, ಶಿಸ್ತು, ಸ್ಥಿರತೆ ಮತ್ತು ದೀರ್ಘಕಾಲೀನ ಯಶಸ್ಸನ್ನು ನೀಡುತ್ತದೆ. ಆಡಳಿತ, ಕಾನೂನು, ಎಂಜಿನಿಯರಿಂಗ್, ರಾಜಕೀಯ ಮತ್ತು ನಾಯಕತ್ವ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಇದನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ನೀಲಮಣಿ ಧರಿಸುವ ವಿಧಾನ:

  • ಲೋಹ: ಬೆಳ್ಳಿ ಅಥವಾ ಪಂಚಧಾತು
  • ಬೆರಳು: ಮಧ್ಯದ ಬೆರಳು
  • ಕೈ: ಬಲ
  • ದಿನ: ಶನಿವಾರ ಸಂಜೆ (ಸೂರ್ಯಾಸ್ತದ ನಂತರ)
  • ಸಮಯ: ಶುಕ್ಲ ಪಕ್ಷ
  • ಮಂತ್ರ: ಓಂ ಪ್ರಾಂ ಪ್ರೀಂ ಪ್ರಾಂ ಸಾಃ ಶನೈಶ್ಚರಾಯ ನಮಃ (108 ಬಾರಿ)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ