ಸನಾತನ ಧರ್ಮದಲ್ಲಿ, ಆಹಾರವನ್ನು ದೇವರಂತೆ ಪೂಜಿಸಲಾಗುತ್ತದೆ. ಆಹಾರವನ್ನು ತಿನ್ನುವಾಗ ಮಾತ್ರವಲ್ಲದೆ ಅದನ್ನು ತಯಾರಿಸುವಾಗಲೂ ಕೆಲವು ಪ್ರಮುಖ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಯಾರು ಆಹಾರವನ್ನು ಗೌರವಿಸುತ್ತಾರೋ, ಕೆಲವು ನಿಮಯಗಳನ್ನು ಅನುಸರಿಸುವ ಮೂಲಕ ಆಹಾರ ಸೇವನೆ ಮಾಡುತ್ತಾರೋ ಅವರು ಅನ್ನಪೂರ್ಣಾ ದೇವಿಯಿಂದ ದುಪ್ಪಟ್ಟು ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಜೊತೆಗೆ ಮನೆಯಲ್ಲಿ ಧಾನ್ಯಗಳ ಕೊರತೆ ಬರುವುದಿಲ್ಲ ಎಂಬ ನಂಬಿಕೆಯಿದೆ.
ಹಿಂದೂ ನಂಬಿಕೆಯ ಪ್ರಕಾರ, ಆಹಾರವನ್ನು ಬೇಯಿಸುವಾಗ ಅಗತ್ಯ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಆಹಾರವನ್ನು ತಯಾರಿಸುವಾಗ ದೇಹ ಮತ್ತು ಮನಸ್ಸು ಶುದ್ಧವಾಗಿರಬೇಕು. ಸಂತೋಷದಿಂದ ಅಡುಗೆ ಮಾಡಬೇಕು. ಆಹಾರ ತಯಾರಾದ ನಂತರ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು. ಇದರಿಂದ ತಾಯಿ ಅನ್ನಪೂರ್ಣೆಯ ಆಶೀರ್ವಾದ ಸಿಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಹಿಂದೂ ಧರ್ಮದಲ್ಲಿ, ಆಹಾರವನ್ನು ತಿನ್ನುವ ಮೊದಲು ಭೋಜನ ಮಂತ್ರವನ್ನು ಪಠಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಓಂ ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿಃ ಶಾಂತಿಃ ಶಾಂತಿಃ||
ತಿನ್ನುವಾಗ ಆಹಾರವನ್ನು ಎಂದಿಗೂ ಅವಮಾನಿಸಬೇಡಿ. ಯಾವಾಗಲೂ ಬಲಗೈಯಿಂದ ಆಹಾರವನ್ನು ತಿನ್ನಬೇಕು. ಎಡಗೈಯಿಂದ ತಿನ್ನುವುದು ಅಶುಭವೆಂದು ಪರಿಗಣಿಸಲಾಗಿದೆ. ಅಲ್ಲದೆ ಜೀವನದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗಬಹುದು.
ಹಿಂದೂ ಸಂಪ್ರದಾಯದಲ್ಲಿ, ಯಾವುದೇ ಕೆಲಸವನ್ನು ಮಾಡಲು ಶುಭ ಸಮಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಸರಿಯಾದ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ಆಹಾರವನ್ನು ಯಾವಾಗಲೂ ಸೇವಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಪೂರ್ವ ದಿಕ್ಕನ್ನು ದೇವತೆಗಳ ದಿಕ್ಕು ಎಂದು ಹೇಳಲಾಗುತ್ತದೆ, ಆದ್ದರಿಂದ ಈ ದಿಕ್ಕಿಗೆ ಮುಖ ಮಾಡಿ ಆಹಾರವನ್ನು ಸೇವಿಸುವುದು ಮಂಗಳಕರವಾಗಿದೆ.
ನಿಮ್ಮ ಮನೆಯಲ್ಲಿ ಆಹಾರ ಮತ್ತು ಹಣಕ್ಕೆ ಕೊರತೆ ಬಾರದಂತೆ ನೋಡಿಕೊಳ್ಳಬೇಕಾದರೆ, ಯಾವಾಗಲೂ ದಾನ ಮಾಡಬೇಕು. ಆಹಾರ ದಾನ ಮಾಡುವುದು ಮಹಾದಾನಕ್ಕೆ ಸಮಾನವೆಂದು ಹೇಳಲಾಗುತ್ತದೆ. ಸಾಮಾನ್ಯ ಜನರಿಗೆ, ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಪ್ರತಿದಿನ ಆಹಾರ ನೀಡಿ.
ಇದನ್ನೂ ಓದಿ: ಈ ದೇವಾಲಯದಲ್ಲಿರುವ ದೇವಿ ಬಂಜೆತನ ದೂರ ಮಾಡುತ್ತಾಳೆ! ಎಲ್ಲಿದೆ ಗೊತ್ತಾ?
ಹಿಂದೂ ನಂಬಿಕೆಯ ಪ್ರಕಾರ, ಆಹಾರವನ್ನು ಯಾವಾಗಲೂ ನೆಲದ ಮೇಲೆ ಕುಳಿತು ತಿನ್ನಬೇಕು. ನೀವು ತಿನ್ನಲು ಸಾಧ್ಯವಾದಷ್ಟು ಮಾತ್ರ ಆಹಾರವನ್ನು ತೆಗೆದುಕೊಳ್ಳಬೇಕು. ತಟ್ಟೆಯಲ್ಲಿ ಎಂದಿಗೂ ಬಿಡಬಾರದು. ಹಾಸಿಗೆಯ ಮೇಲೆ ಕುಳಿತು ಆಹಾರವನ್ನು ಎಂದಿಗೂ ತಿನ್ನಬಾರದು. ಊಟ ಮಾಡಿದ ಕೈಗಳನ್ನು ತಟ್ಟೆಯಲ್ಲಿ ತೊಳೆಯಬಾರದು. ಶಾಂತಿಯಿಂದ ಊಟ ಮಾಬೇಕು. ಜಗಳವಾದರೆ ತಾಯಿ ಅನ್ನಪೂರ್ಣೆಗೆ ಅವಮಾನ ಮಾಡಿದಂತಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ