Kamada Ekadashi 2024: ಕಷ್ಟಗಳಿಂದ ಮುಕ್ತಿ ಪಡೆಯಲು ಕಾಮದ ಏಕಾದಶಿಯಂದು ವಿಷ್ಣುವನ್ನು ಈ ರೀತಿ ಪೂಜಿಸಿ
ಈ ಬಾರಿ ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ ಎಂದು ಕರೆಯಲಾಗುತ್ತದೆ. ಇದನ್ನು ಎ.19 ರ ಶುಕ್ರವಾರ ಆಚರಿಸಲಾಗುತ್ತದೆ. ಕಾಮದ ಏಕಾದಶಿಯ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದಲ್ಲಿ ಜೀವನದಲ್ಲಿರುವ ಎಲ್ಲಾ ದುಃಖ ಮತ್ತು ತೊಂದರೆಗಳಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಸಂತೋಷ, ಶಾಂತಿ, ಸಮೃದ್ಧಿ ಎಲ್ಲವೂ ಪ್ರಾಪ್ತಿಯಾಗುತ್ತದೆ.
ಹಿಂದೂ ಧರ್ಮದಲ್ಲಿ, ಏಕಾದಶಿ (Ekadashi) ಪ್ರತಿ ತಿಂಗಳು 2 ಬಾರಿ ಮತ್ತು ವರ್ಷಕ್ಕೆ 24 ಬಾರಿ ಬರುತ್ತದೆ. ಇದರಲ್ಲಿ ಮೊದಲನೇಯದು ಕೃಷ್ಣ ಪಕ್ಷದ ಏಕಾದಶಿ ಎರಡನೇಯದು ಶುಕ್ಲ ಪಕ್ಷದ ಏಕಾದಶಿ. m ಈ ದಿನದಂದು ವಿಶ್ವದ ಸೃಷ್ಟಿಕರ್ತ ವಿಷ್ಣುವಿನ ಜೊತೆಗೆ ತಾಯಿ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಈ ಬಾರಿ ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಕಾಮದ ಏಕಾದಶಿ (Kamada Ekadashi) ಎಂದು ಕರೆಯಲಾಗುತ್ತದೆ. ಇದನ್ನು ಎ.19 ರ ಶುಕ್ರವಾರ ಆಚರಿಸಲಾಗುತ್ತದೆ. ಕಾಮದ ಏಕಾದಶಿಯ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದಲ್ಲಿ ಜೀವನದಲ್ಲಿರುವ ಎಲ್ಲಾ ದುಃಖ ಮತ್ತು ತೊಂದರೆಗಳಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಸಂತೋಷ, ಶಾಂತಿ, ಸಮೃದ್ಧಿ ಎಲ್ಲವೂ ಪ್ರಾಪ್ತಿಯಾಗುತ್ತದೆ.
ಕಾಮದ ಏಕಾದಶಿಯ ಶುಭ ಸಮಯ;
ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಏಕಾದಶಿಯು ಎ. 18 ರಂದು ಸಂಜೆ 05:31 ಕ್ಕೆ ಪ್ರಾರಂಭವಾಗುತ್ತದೆ. ಎ. 19 ರಂದು ರಾತ್ರಿ 08:04 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಉದಯ ತಿಥಿಯ ಪ್ರಕಾರ, ಈ ಏಕಾದಶಿ ಉಪವಾಸವನ್ನು ಎ.19 ರಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: ಹನುಮಂತನಿಲ್ಲದ ರಾಮ ದೇವಾಲಯ ಎಲ್ಲಿದೆ? ಏಕೆ ಗೊತ್ತಾ?
ಕಾಮದ ಏಕಾದಶಿ ಪೂಜಾ ವಿಧಾನ;
-ಈ ದಿನ, ಬ್ರಹ್ಮ ಮುಹೂರ್ತದಲ್ಲಿ ಬೆಳಿಗ್ಗೆ ಎದ್ದು ಸ್ನಾನ ಮಾಡಿ.
-ದೇವರ ಕೋಣೆಯಲ್ಲಿ ಶ್ರೀಹರಿ ಮತ್ತು ತಾಯಿ ಲಕ್ಷ್ಮೀಯ ವಿಗ್ರಹಗಳಿಗೆ ಅಲಂಕಾರ ಮಾಡಿ.
-ಇದಾದ ನಂತರ, ಅರಿಶಿನ, ಅಕ್ಷತೆ, ಹೂವು ಇತ್ಯಾದಿಗಳನ್ನು ದೇವರಿಗೆ ಅರ್ಪಿಸಿ ಬಳಿಕ ತುಪ್ಪದ ದೀಪ ಹಚ್ಚಿ, ಆರತಿ ಮಾಡಿ.
-ಏಕಾದಶಿ ದಿನ ವಿಷ್ಣು ಚಾಲೀಸಾ ಮತ್ತು ಮಂತ್ರಗಳನ್ನು ಪಠಿಸಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿಗಾಗಿ ವಿಷ್ಣುವನ್ನು ಪ್ರಾರ್ಥಿಸಿ.
-ಕೊನೆಯಲ್ಲಿ ದೇವರಿಗೆ ನೈವೇದ್ಯವನ್ನು ಅರ್ಪಿಸಿ, ಪ್ರಸಾದವನ್ನು ಜನರಿಗೆ ವಿತರಿಸಿ.
-ಏಕಾದಶಿಯ ಕಥೆಯನ್ನು ಓದಿದ ನಂತರ ಆರತಿ ಮಾಡಿ.
-ಸಂಜೆ ತುಳಸಿ ಮಾತೆಯ ಮುಂದೆ ತುಪ್ಪದ ದೀಪವನ್ನು ಹಚ್ಚಿಡುವುದನ್ನು ಮರೆಯಬೇಡಿ.
-ಈ ರೀತಿಯಾಗಿ ಕಾಮದ ಏಕಾದಶಿ ಉಪವಾಸವನ್ನು ಆಚರಣೆ ಮಾಡುವುದರಿಂದ ಜೀವನದಲ್ಲಿನ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ