Sita Navami 2024: ಸೀತಾ ನವಮಿ ಯಾವಾಗ? ಸಮಯ, ಪೂಜಾ ಆಚರಣೆಗಳ ಮಾಹಿತಿ ಇಲ್ಲಿದೆ!

ಜಾನಕಿ ನವಮಿ ಎಂದೂ ಕರೆಯಲ್ಪಡುವ ಸೀತಾ ನವಮಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. 2024ರಲ್ಲಿ ಈ ದಿನವನ್ನು ಮೇ. 16 ರಂದು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ಸೀತಾ ನವಮಿ ದಿನದಂದು ಉಪವಾಸ ಮಾಡುವ ಮೂಲಕ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

Sita Navami 2024: ಸೀತಾ ನವಮಿ ಯಾವಾಗ? ಸಮಯ, ಪೂಜಾ ಆಚರಣೆಗಳ ಮಾಹಿತಿ ಇಲ್ಲಿದೆ!
ರಾಮ ಮತ್ತು ಸೀತಾ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 17, 2024 | 1:52 PM

ಸೀತಾ ನವಮಿಗೆ ಹಿಂದೂಗಳಲ್ಲಿ ಹೆಚ್ಚಿನ ಮಹತ್ವವಿದೆ. ಹಿಂದೂ ಪಂಚಾಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನ ಅಂದರೆ ನವಮಿ ತಿಥಿಯಂದು ಸೀತಾ ದೇವಿ ಜನಿಸಿದಳು ಎನ್ನಲಾಗುತ್ತದೆ. ಜೊತೆಗೆ ಈ ದಿನವನ್ನು ಜಾನಕಿ ನವಮಿ ಎಂದೂ ಕರೆಯುತ್ತಾರೆ. 2024ರಲ್ಲಿ ಈ ದಿನವನ್ನು ಮೇ. 16 ರಂದು ಆಚರಿಸಲಾಗುತ್ತದೆ. ವಿವಾಹಿತ ಮಹಿಳೆಯರು ಸೀತಾ ನವಮಿ ದಿನದಂದು ಉಪವಾಸ ಮಾಡುವ ಮೂಲಕ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ಸೀತಾ ದೇವಿಯು ಮಂಗಳವಾರ ಪುಷ್ಯ ನಕ್ಷತ್ರದಲ್ಲಿ ಜನಿಸಿದಳು ಎಂದು ನಂಬಲಾಗಿದೆ. ಬಳಿಕ ಆಕೆ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ ಭಗವಾನ್ ರಾಮನನ್ನು ವಿವಾಹವಾದಳು. ಹಿಂದೂ ಕ್ಯಾಲೆಂಡರ್ ನಲ್ಲಿ ಸೀತಾ ಜಯಂತಿಯು ಸರಿಯಾಗಿ ರಾಮನವಮಿಯ ಒಂದು ತಿಂಗಳಿನ ನಂತರ ಬರುತ್ತದೆ.

ನವಮಿ ತಿಥಿ ಪ್ರಾರಂಭ – ಮೇ 16, 2024 ರಂದು ಬೆಳಿಗ್ಗೆ 01:52 ಕ್ಕೆ

ನವಮಿ ತಿಥಿ ಕೊನೆಗೊಳ್ಳುವುದು – ಮೇ 17, 2024 ಬೆಳಿಗ್ಗೆ 04:18 ಕ್ಕೆ ಹಾಗಾಗಿ ಸೀತಾ ನವಮಿಯನ್ನು ಮೇ 16ರಂದು ಆಚರಣೆ ಮಾಡಲಾಗುತ್ತದೆ.

ಸೀತಾ ನವಮಿಯ ಮಹತ್ವ:

ಈ ದಿನವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ರಾಮನವಮಿಯ ಒಂದು ತಿಂಗಳ ನಂತರ ಸೀತಾ ನವಮಿಯನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಸೀತಾ ಮಾತೆ ಲಕ್ಷ್ಮೀ ದೇವಿಯ ಅವತಾರವಾಗಿದ್ದು, ವಿಷ್ಣುವಿನ ಅವತಾರವಾದ ಅಯೋಧ್ಯೆಯ ರಾಜಕುಮಾರನಾದ ಶ್ರೀ ರಾಮನನ್ನು ಮದುವೆಯಾದಳು. ಸೀತಾ ದೇವಿ ಮತ್ತು ಅವಳ ಜೀವನದ ಬಗ್ಗೆ ರಾಮಚರಿತಮಾನಸದಲ್ಲಿ ಉಲ್ಲೇಖವಿದೆ. ಆಕೆಯ ಜೀವನ ಕಥೆ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದೆ. ಇಂದಿನ ಮಹಿಳೆಯರು ಸೀತಾ ದೇವಿಯಿಂದ ಬಹಳಷ್ಟು ವಿಷಯಗಳನ್ನು ಕಲಿಯಬೇಕಿದೆ. ಎಂದಿಗೂ ಅವಳು ಶಕ್ತಿ ಮತ್ತು ಧೈರ್ಯದ ಸಂಕೇತವಾಗಿರುತ್ತಾಳೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ

ಇತಿಹಾಸವೇನು?

ಪುರಾಣ ಕಥೆಗಳ ಪ್ರಕಾರ, ಮಿಥಿಲೆಯ ರಾಜ ಜನಕನು, ತನ್ನ ಹೊಲವನ್ನು ಉಳುಮೆ ಮಾಡುತ್ತಿರುವಾಗ ಒಂದು ಪಾತ್ರೆಯಲ್ಲಿ ಹೆಣ್ಣು ಮಗುವನ್ನು ಕಂಡನು. ಆ ಶಿಶುವನ್ನು ತನ್ನ ರಾಜ್ಯಕ್ಕೆ ಕರೆದುಕೊಂಡು ಬಂದು ಅವಳಿಗೆ ಜಾನಕಿ ಎಂದು ಹೆಸರಿಟ್ಟು ತನ್ನ ಮಗಳಾಗಿ ಸ್ವೀಕರಿಸಿದನು. ಆ ಸಂಭ್ರಮಕ್ಕಾಗಿ ನಾವು ಇಂದಿಗೂ ಆಕೆಯ ಜನ್ಮ ದಿನವನ್ನು ಆಚರಣೆ ಮಾಡುತ್ತೇವೆ.

ಸೀತಾ ನವಮಿಯ ಪೂಜಾ ಆಚರಣೆಗಳು;

ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಸೀತಾ ದೇವಿಯ ವಿಗ್ರಹ ಅಥವಾ ಫೋಟೋ ಇಟ್ಟು ಅಲಂಕಾರ ಮಾಡಿ, ದೀಪವನ್ನು ಬೆಳಗಿಸಿ, ಆಕೆಗೆ ವಿಧ ವಿಧವಾದ ಸಿಹಿ ತಿಂಡಿಗಳನ್ನು ಅರ್ಪಿಸಿ. ಈ ದಿನ ಕೆಲವರು ರಾಮಾಯಣವನ್ನು ಓದುತ್ತಾರೆ. ಇನ್ನು ಕೆಲವರು ಭಕ್ತಿಯಿಂದ ಭಜನೆ, ಕೀರ್ತನೆಗಳನ್ನು ಆಯೋಜಿಸುತ್ತಾರೆ. ಈ ದಿನ ರಾಮ ಭಕ್ತರು ಭಗವಾನ್ ರಾಮ ಮತ್ತು ಜಾನಕಿ ದೇವಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸೀತಾ ನವಮಿಯನ್ನು ಜಾನಕಿ ಜನಿಸಿದ ಮಿಥಿಲೆಯ ಜನರು ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಬಹಳ ಉತ್ಸಾಹದಿಂದ ಆಚರಿಸುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ