Ram Navami 2024: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ

ಮಂದಿರ ನಿರ್ಮಾಣವಾದ ನಂತರ ಇದೆ ಮೊದಲ ಬಾರಿ ಅಯೋಧ್ಯೆಯಲ್ಲಿ ರಾಮನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ. ಈ ಹಿಂದೆ ವಿಜ್ಞಾನಿಗಳು ಅಯೋಧ್ಯೆಯಲ್ಲಿ ಸೂರ್ಯರಶ್ಮಿಯ ಪ್ರಯೋಗವನ್ನು ಮಾಡಿದ್ದಾರೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI), ರೂರ್ಕಿಯ ಹಿರಿಯ ವಿಜ್ಞಾನಿಗಳ ಪ್ರಕಾರ, ಯೋಜಿತ ಈ ಸೂರ್ಯರಶ್ಮಿಯು 58 ಮಿ.ಮೀ. ಗಾತ್ರವನ್ನು ಹೊಂದಿದ್ದು, ರಾಮ ಲಲ್ಲಾನ ಹಣೆಯ ಮೇಲೆ ತಿಲಕದಂತೆ ಪ್ರಜ್ವಲಿಸಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಸೂರ್ಯರಶ್ಮಿಯನ್ನು ಎಲ್ಲೆಲ್ಲಿ ಪ್ರಯೋಗ ಮಾಡಲಾಗಿದೆ ಇಲ್ಲಿದೆ ಮಾಹಿತಿ.

Ram Navami 2024: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಹಣೆಯ ಸ್ಪರ್ಶಿಸಿದ ಸೂರ್ಯರಶ್ಮಿ
Follow us
|

Updated on:Apr 17, 2024 | 1:47 PM

ಅಯೋಧ್ಯೆ, ಏ.17: ಅಯೋಧ್ಯೆ ರಾಮಮಂದಿರದಲ್ಲಿ(Ayodhya Ram Mandir) ರಾಮಲಲ್ಲಾನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ. ಕೋಟ್ಯಾಂತರ ಭಕ್ತ ಆಸೆಯಂತೆ, 500 ವರ್ಷಗಳ ಹೋರಾಟದ ಫಲವಾಗಿ ಜನವರಿ 22ರಂದು ಮಂದಿರ ನಿರ್ಮಾಣವಾಗಿ ಬಾಲ ರಾಮನ ಪ್ರತಿಷ್ಠೆ ಕೂಡ ನಡೆದಿತ್ತು. ಇದೀಗ ರಾಮ ಮಂದಿರ ನಿರ್ಮಾಣವಾದ ನಂತರ ಮೊದಲ ರಾಮ ನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಮಯದಲ್ಲಿ ಬಾಲ ರಾಮನ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಕನ್ನಡಿಗಳು ಮತ್ತು ಮಸೂರಗಳನ್ನು ಒಳಗೊಂಡಿರುವ ಒಂದು ದೀರ್ಘವಧಿಯ ಕಾರ್ಯವಿಧಾನವಾಗಿದೆ. ಸೂರ್ಯರಶ್ಮಿ ನೇರವಾಗಿ ರಾಮ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗವನ್ನು ಕೂಡ ನಡೆಸಿದರು. ಇದೀಗ ಈ ವಿಧಾನ ಯಶಸ್ವಿಯಾಗಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹವನ್ನು ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI), ರೂರ್ಕಿಯ ಹಿರಿಯ ವಿಜ್ಞಾನಿಗಳ ಪ್ರಕಾರ, ಯೋಜಿತ ಈ ಸೂರ್ಯರಶ್ಮಿಯು 58 ಮಿ.ಮೀ. ಗಾತ್ರವನ್ನು ಹೊಂದಿದ್ದು, ರಾಮ ಲಲ್ಲಾನ ಹಣೆಯ ಮೇಲೆ ತಿಲಕದಂತೆ ಪ್ರಜ್ವಲಿಸಲಿದೆ. ಇದು ಸುಮಾರು ಮೂರರಿಂದ ಮೂರೂವರೆ ನಿಮಿಷಗಳು ಮೂಡಲಿದೆ. ಎರಡು ನಿಮಿಷಗಳ ಪೂರ್ಣ ಪ್ರಕಾಶ ರಾಮನ ಮೇಲೆ ಬೀಳಲಿದೆ ಎಂದು ಹೇಳಿದರು.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಈ ಹಿಂದೆ ಹೇಳಿರುವಂತೆ ಸೂರ್ಯರಶ್ಮಿ ರಾಮನನ್ನು ಸ್ಪರ್ಶ ಮಾಡುವ ಸಮಯದಲ್ಲಿ ರಾಮ ಭಕ್ತರಿಗೆ ಮಂದಿರದೊಳಗೆ ಅವಕಾಶ ನೀಡಲಾಗುವುದು. ದೇವಾಲಯದ ಟ್ರಸ್ಟ್‌ನಿಂದ ಸುಮಾರು 100 ಎಲ್‌ಇಡಿ ಸ್ಕ್ರೀನ್‌ಗಳನ್ನು ಹಾಕಲಾಗುತ್ತಿದೆ ಮತ್ತು ಸರ್ಕಾರದಿಂದ 50 ರಾಮನವಮಿ ಆಚರಣೆ ಲೈವ್​​​​ ಸ್ಕ್ರೀನ್​​ ನೋಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ, ಎಲ್ಲೆಲ್ಲಿ ನಡೆದಿದೆ ಈ ಪ್ರಯೋಗ?

ಸೂರ್ಯರಶ್ಮಿ ಎಂದರೇನು?

ವಾಸ್ತುಶಿಲ್ಪದ ಕೆಲವು ತಂತ್ರಗಳು ನಮ್ಮನ್ನು ಮೂಕನಾಗಿಸುತ್ತದೆ. ಅದರಲ್ಲಿ ಇದು ಒಂದು. ನಿಮಗೆ ತಿಳಿದಿರಬಹುದು ಸೂರ್ಯನು ಸ್ಥಿರವಾಗಿರುವುದಿಲ್ಲ. ಅವನು ಚಲಿಸುತ್ತಾನೆ ಎಂದು ವಿಜ್ಞಾನ ಹೇಳುತ್ತದೆ. ಇನ್ನು ಸೂರ್ಯ ದೇವರು ರಥದ ಮೇಲೆ ಸವಾರಿ ಮಾಡುತ್ತಾನೆ ಎಂದು ವೇದಗಳು ಹೇಳುತ್ತವೆ. ಜೊತೆಗೆ ಬಣ್ಣವು ಸೂರ್ಯನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎನ್ನಲಾಗುತ್ತದೆ. ಇವುಗಳ ಆಧಾರದ ಮೇಲೆ ಪ್ರಾಚೀನ ವಾಸ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ದೇವರ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ಮಾಡುತ್ತಾರೆ. ಸೂರ್ಯನ ಚಲನೆಯ ಆಧಾರದ ಮೇಲೆ ಈ ಪ್ರಯೋಗವನ್ನು ಮಾಡಲಾಗುತ್ತದೆ.

ಎಲ್ಲೆಲ್ಲಿ ನಡೆದಿದೆ ಸೂರ್ಯರಶ್ಮಿ ಪ್ರಯೋಗ?

ಅಯೋದ್ಯೆಯಲ್ಲಿ ಮಾಡಿರುವ ಸೂರ್ಯರಶ್ಮಿ ಪ್ರಯೋಗವನ್ನು ಈಗಾಗಲೇ ಕೆಲವು ಜೈನ ದೇವಾಲಯಗಳಲ್ಲಿ ಮತ್ತು ಒರಿಸ್ಸಾ ರಾಜ್ಯದಲ್ಲಿರುವ ಕೊನಾರ್ಕ್‌ ಸೂರ್ಯ ದೇವಾಲಯದಲ್ಲಿಯೂ ಈ ಪ್ರಯೋಗ ನಡೆದಿದೆ ಆದರೆ ಅವುಗಳನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:28 pm, Wed, 17 April 24

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು