AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಲಾದೇವಿ ದರ್ಶನಕ್ಕೆ ಬಂದವಳು ಮೊಬೈಲ್​ ಟವರ್ ಏರಿ ಕುಳಿತಿದ್ದೇಕೆ?

ದೇವಸ್ಥಾನಕ್ಕೆಂದು ಬಂದ ಯುವತಿಯೊಬ್ಬಳು ಪೋಷಕರಿಂದ ದೂರವಾಗಿ ಮೊಬೈಲ್​ ಟವರ್ ಹತ್ತಿ ಕುಳಿತ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಯುವತಿ ತನಗೆ ತನ್ನ ಪೋಷಕರೊಂದಿಗೆ ಇರಲು ಇಷ್ಟವಿಲ್ಲ ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾಳೆ. ಪೊಲೀಸರು ಜಿಲ್ಲಾಡಳಿತ ಎಲ್ಲವೂ ಆಕೆಯ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, 3 ಗಂಟೆಯ ಬಳಿಕ ಆಕೆ ಕೆಳಗಿಳಿದಿದ್ದಾಳೆ. ನನಗೆ ತನ್ನ ಕುಟುಂಬದೊಂದಿಗೆ ಇರಲು ಇಷ್ಟವಿಲ್ಲ ಎಂದು ಹೇಳಿದ್ದಾಳೆ.

ಕೈಲಾದೇವಿ ದರ್ಶನಕ್ಕೆ ಬಂದವಳು ಮೊಬೈಲ್​ ಟವರ್ ಏರಿ ಕುಳಿತಿದ್ದೇಕೆ?
ಮೊಬೈಲ್ ಟವರ್Image Credit source: ABP Live
ನಯನಾ ರಾಜೀವ್
|

Updated on: Apr 17, 2024 | 9:37 AM

Share

ಕೈಲಾದೇವಿ ದರ್ಶನಕ್ಕೆ ಬಂದ ಯುವತಿಯೊಬ್ಬಳು ಮೊಬೈಲ್​ ಟವರ್(Mobile Tower) ಕುಳಿತಿರುವ ಘಟನೆ ರಾಜಸ್ಥಾನ(Rajasthan) ದಲ್ಲಿ ನಡೆದಿದೆ. ಪೊಲೀಸರು ಹಾಗೂ ಜಿಲ್ಲಾಡಳಿತ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಮನವೊಲಿಸಿದರೂ 3 ಗಂಟೆಗಳ ಬಳಿಕ ಕೆಳಗಿಳಿದಿದ್ದಾಳೆ. ಏಪ್ರಿಲ್​ 7ರಂದು ಯುವತಿ ಮನೆಯ ಸದಸ್ಯರೊಂದಿಗೆ ಕೈಲಾದೇವಿ ಆಸ್ಥಾನಕ್ಕೆ ಬಂದಿದ್ದಳು, ಈ ಸಮಯದಲ್ಲಿ ಆಕೆ ಪೋಷಕರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದಳು.

ಧೋಲ್​ಪುರ ಜಿಲ್ಲೆಯ ನಿಹಾಲ್​ಗಂಜ್ ಪೊಲೀಸ್​ ಠಾಣೆ ವ್ಯಾಪ್ತಿಯ ರಿಕೊ ಪ್ರದೇಶದಲ್ಲಿ ಇರುವ ಮೊಬೈಲ್​ ಟವರ್​ ಅನ್ನು ಯುವತಿ ಹತ್ತಿದ್ದಳು. ಯುವತಿ ಮೊಬೈಲ್ ಟವರ್ ಹತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಆಡಳಿತಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಸುಮಾರು 3 ಗಂಟೆಗಳ ಕಾಲ ಸಮಾಲೋಚನೆ ನಡೆಸಿದ ಬಳಿಕ ಯುವತಿಯನ್ನು ಟವರ್ ನಿಂದ ಕೆಳಗಿಳಿಸಲಾಗಿದೆ.

ಇಂದು ಬೆಳಗ್ಗೆ ಯುವತಿಯೊಬ್ಬಳು ಅಬಕಾರಿ ಪೊಲೀಸ್ ಠಾಣೆ ಬಳಿಯ ಟವರ್‌ಗೆ ಹತ್ತಿದ ಬಗ್ಗೆ ಮಾಹಿತಿ ಲಭಿಸಿದೆ ಎಂದು ನಿಹಾಲ್‌ಗಂಜ್ ಪೊಲೀಸ್ ಠಾಣೆ ಪ್ರಭಾರಿ ಬಿಜೇಂದ್ರ ಸಿಂಗ್ ಹೇಳಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಉನ್ನತ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಮೆಟ್ಟಿಲು ಏರಿದ್ದ ಯುವತಿಯನ್ನು ಮಾತನಾಡಿಸಿದಾಗ ತನಗೆ ಕುಟುಂಬದೊಂದಿಗೆ ಇರಲು ಇಷ್ಟವಿಲ್ಲ ಎಂದು ತಿಳಿಸಿದ್ದಾಳೆ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ಭೀತಿಗೊಳಿಸುವ ವಿಡಿಯೋ ಇಲ್ಲಿದೆ

ಎಸ್‌ಡಿಎಂ ಸಾಧನಾ ಶರ್ಮಾ ಅವರು ಟವರ್ ಹತ್ತಲು ಕಾರಣವನ್ನು ಕೇಳಿದಾಗ, ಅವರು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಶಂಶಾಬಾದ್ ಪ್ರದೇಶದ ನಿವಾಸಿ ಎಂದು ಹೇಳಿದರು. ಏಪ್ರಿಲ್ 7 ರಂದು ಕೈಲಾದೇವಿ ದರ್ಶನಕ್ಕೆ ಕುಟುಂಬ ಸಮೇತ ಬಂದಿದ್ದರು. ಈ ವೇಳೆ ಆಕೆ ಒಬ್ಬ ಹುಡುಗನೊಂದಿಗೆ ಹೊರಟು ಹೋಗಿದ್ದಳು. ಕೊನೆಗೆ ಮೊಬೈಲ್ ಟವರ್ ಏರಿ ಕುಳಿತಿದ್ದಳು.

ಸಾಕಷ್ಟು ಮನವೊಲಿಕೆಯ ನಂತರ, ಎಸ್‌ಡಿಎಂ ಸಾಧನಾ ಶರ್ಮಾ ಮತ್ತು ಪೊಲೀಸರು ಬಾಲಕಿಯನ್ನು ಟವರ್‌ನಿಂದ ಕೆಳಗಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು