
ದೇಶಾದ್ಯಂತ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಪೂಜಿಸಿ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಇದರೊಂದಿಗೆ ಗಣೇಶನಿಗೆ 21 ಬಗೆಯ ಎಲೆಗಳು, 21 ಬಗೆಯ ಹೂವುಗಳು ಮತ್ತು 21 ಬಗೆಯ ಮೋದಕಗಳನ್ನು ಅರ್ಪಿಸಲಾಗುತ್ತದೆ. ಇದನ್ನು ಪತ್ರ ಪೂಜೆ, ಏಕವಿಂಶತಿ ಪತ್ರ ಪೂಜೆ ಎಂದೂ ಕರೆಯುತ್ತಾರೆ. ಆದರೆ ಇದು ಏಕೆ ವಿಶೇಷ ಎಂದು ತಿಳಿದಿದೆಯೇ? ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.
ಶಾಸ್ತ್ರಗಳ ಪ್ರಕಾರ, ಈ ಎಲೆಗಳು ವಿಭಿನ್ನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. 21 ಎಲೆಗಳನ್ನು ಅರ್ಪಿಸುವುದರಿಂದ ವಿಘ್ನಹರ್ತ ಗಣಪತಿಯು ಬೇಗನೆ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಜೀವನದಿಂದ ತೊಂದರೆಗಳನ್ನು ನಿವಾರಿಸುತ್ತಾನೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾನೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಸೆ. 07 ಎರಡನೇ ಚಂದ್ರಗ್ರಹಣ; ಈ ಎರಡು ರಾಶಿಯವರು ಅತ್ಯಂತ ಜಾಗರೂಕರಾಗಿರಿ
21 ಎಲೆಗಳನ್ನು ಅರ್ಪಿಸುವ ಸಂಪ್ರದಾಯವು ಕೇವಲ ಧಾರ್ಮಿಕವಲ್ಲ, ಅದರಲ್ಲಿ ಆಳವಾದ ಆಧ್ಯಾತ್ಮಿಕ ರಹಸ್ಯವೂ ಅಡಗಿದೆ. ಪ್ರತಿಯೊಂದು ಎಲೆಯೂ ವಿಶೇಷ ಶಕ್ತಿ, ಗುಣ ಮತ್ತು ಆಶೀರ್ವಾದದ ಸಂಕೇತವಾಗಿದೆ. ಅದರಂತೆ ಗರಿಕೆ ಸಮೃದ್ಧಿಯ ಸಂಕೇತದಂತೆ, ಬನ್ನಿ ಎಲೆ ವಿಜಯದ ಸಂಕೇತ, ಬಿಲ್ವಾಪತ್ರೆ ಶುದ್ಧತೆಯ ಸಂಕೇತ ಮತ್ತು ಧಾತುರಾ ಉಗ್ರ ಶಕ್ತಿಗಳನ್ನು ಶಾಂತಗೊಳಿಸುವ ಸಂಕೇತವಾಗಿದೆ. ವಿಶೇಷವೆಂದರೆ ತುಳಸಿ ಎಲೆಗಳನ್ನು ಸಾಮಾನ್ಯ ದಿನಗಳಲ್ಲಿ ಗಣಪತಿಗೆ ಅರ್ಪಿಸುವುದಿಲ್ಲ, ಆದರೆ ಗಣೇಶ ಚತುರ್ಥಿಯಂದು ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಎಲೆಗಳಿಂದ ಪೂಜಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ