AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eclipse 2025: ಸೆಪ್ಟೆಂಬರ್​ನಲ್ಲಿ ಎರಡು ಗ್ರಹಣಗಳು; ಗರ್ಭಿಣಿಯರು ಏನು ಮಾಡಬೇಕು ಮತ್ತು ಏನು ಮಾಡಬಾರದು?

ಸೆಪ್ಟೆಂಬರ್ ತಿಂಗಳಲ್ಲಿ ಎರಡು ಗ್ರಹಣಗಳು ಸಂಭವಿಸಲಿವೆ. ಗರ್ಭಿಣಿಯರಿಗೆ ಈ ಸಮಯ ಬಹಳ ಮುಖ್ಯ. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಧಾರ್ಮಿಕ ಪಠಣ ಮಾಡುವುದು, ತುಳಸಿ ಎಲೆಗಳನ್ನು ಇಟ್ಟುಕೊಳ್ಳುವುದು ಮತ್ತು ವಿಶ್ರಾಂತಿ ಪಡೆಯುವುದು ಒಳ್ಳೆಯದು. ಮನೆಯಿಂದ ಹೊರಗೆ ಹೋಗದಿರುವುದು, ಚಾಕು-ಕತ್ತರಿ ಬಳಸದಿರುವುದು ಮತ್ತು ಒತ್ತಡ ತಪ್ಪಿಸುವುದು ಮುಖ್ಯ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ದೃಷ್ಟಿಕೋನಗಳನ್ನು ಕೂಡ ಇಲ್ಲಿ ಚರ್ಚಿಸಲಾಗಿದೆ.

Eclipse 2025: ಸೆಪ್ಟೆಂಬರ್​ನಲ್ಲಿ ಎರಡು ಗ್ರಹಣಗಳು; ಗರ್ಭಿಣಿಯರು ಏನು ಮಾಡಬೇಕು ಮತ್ತು ಏನು ಮಾಡಬಾರದು?
ಗ್ರಹಣ
ಅಕ್ಷತಾ ವರ್ಕಾಡಿ
|

Updated on: Aug 24, 2025 | 7:39 AM

Share

ಸೆಪ್ಟೆಂಬರ್ ತಿಂಗಳು ಖಗೋಳ ದೃಷ್ಟಿಕೋನದಿಂದ ಬಹಳ ವಿಶೇಷವಾಗಿರಲಿದೆ. ಏಕೆಂದರೆ ಈ ಬಾರಿ ಎರಡು ದೊಡ್ಡ ಗ್ರಹಣಗಳು ಒಂದೇ ತಿಂಗಳಿನಲ್ಲಿ ಸಂಭವಿಸಲಿದೆ. ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ಮತ್ತು ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು. ಮತ್ತೊಂದು ವಿಶೇಷವೆನೆಂದರೆ ಎರಡೂ ಗ್ರಹಣಗಳೂ ಕೂಎ ಭಾರತದಲ್ಲಿ ಗೋಚರಿಸುತ್ತವೆ, ಆದ್ದರಿಂದ ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ ಅವುಗಳ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗಲಿದೆ.

ಗ್ರಹಣವು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಆದರೆ ಈ ಸಮಯವನ್ನು ಗರ್ಭಿಣಿಯರಿಗೆ ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ನಕಾರಾತ್ಮಕ ಶಕ್ತಿಯು ಹುಟ್ಟಲಿರುವ ಮಗುವಿನ ಮೇಲೆ ಬೇಗನೆ ಪರಿಣಾಮ ಬೀರುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಕೆಲವು ವಿಶೇಷ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿರುತ್ತದೆ.

ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಏನು ಮಾಡಬೇಕು?

  • ಗರ್ಭಿಣಿಯರು ಗ್ರಹಣದ ಸಮಯದಲ್ಲಿ ತಮ್ಮ ಹೊಟ್ಟೆಗೆ ಕಾವಿಮಣ್ಣನ್ನು ಹಚ್ಚಿಕೊಳ್ಳುವುದು ಸಂಪ್ರದಾಯ. ಇದು ಹುಟ್ಟಲಿರುವ ಮಗುವನ್ನು ನಕಾರಾತ್ಮಕ ಪರಿಣಾಮಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.
  • ಗ್ರಹಣದ ಸಮಯದಲ್ಲಿ ಧಾರ್ಮಿಕ ಗ್ರಂಥಗಳು ಮತ್ತು ಸ್ತೋತ್ರಗಳನ್ನು ಪಠಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಗರ್ಭಿಣಿಯರು ರಾಮ ರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ, ವಿಷ್ಣು ಸಹಸ್ರನಾಮ, ಭಗವತ್ ಗೀತೆಯ ಪದ್ಯಗಳನ್ನು ಓದಬೇಕು ಅಥವಾ ಓಂ ನಮಃ ಶಿವಾಯ, ಓಂ ನಮೋ ಭಗವತೇ ವಾಸುದೇವಾಯ ಪಠಿಸಬೇಕು.
  • ಗರ್ಭಿಣಿಯರು ತುಳಸಿ ಎಲೆಗಳು ಅಥವಾ ಗಂಗಾ ಜಲವನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಇದನ್ನು ಶುದ್ಧತೆ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
  • ಧನಾತ್ಮಕ ಶಕ್ತಿಯನ್ನು ಪಡೆಯಲು ಧ್ಯಾನ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಗ್ರಹಣ ಸಮಯವು ಅತ್ಯುತ್ತಮ ಸಮಯ.
  • ಗ್ರಹಣ ಮುಗಿದ ನಂತರ ಸ್ನಾನ ಮಾಡಿ. ಗ್ರಹಣ ಮುಗಿದ ತಕ್ಷಣ ಗರ್ಭಿಣಿಯರು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು. ಇದರ ನಂತರವೇ ಆಹಾರವನ್ನು ಸೇವಿಸಬೇಕು.

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬಾರದು?

  • ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು.
  • ಈ ಅವಧಿಯಲ್ಲಿ ಚಾಕು, ಕತ್ತರಿ ಅಥವಾ ಸೂಜಿಯನ್ನು ಬಳಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
  • ಒತ್ತಡ ಮತ್ತು ಭಾರವಾದ ಕೆಲಸವನ್ನು ತಪ್ಪಿಸಿ. ಗ್ರಹಣದ ಸಮಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ.

ಆಯುರ್ವೇದ ಮತ್ತು ವಿಜ್ಞಾನದ ದೃಷ್ಟಿಕೋನ:

ಗ್ರಹಣದ ಸಮಯದಲ್ಲಿ, ಕಾಸ್ಮಿಕ್ ಕಿರಣಗಳು ಗರ್ಭಿಣಿಯರು ಮತ್ತು ಅವರ ಹುಟ್ಟಲಿರುವ ಮಗುವಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಗ್ರಹಣದಿಂದ ದೈಹಿಕ ಹಾನಿ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆಧುನಿಕ ವಿಜ್ಞಾನ ನಂಬುತ್ತದೆ, ಆದರೆ ಸಾಂಪ್ರದಾಯಿಕ ನಿಯಮಗಳನ್ನು ಅನುಸರಿಸುವುದರಿಂದ ಗರ್ಭಿಣಿ ಮಹಿಳೆಗೆ ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ