ಹುಬ್ಬಳ್ಳಿ, ಆಗಸ್ಟ್ 20: ಜಾತಿ, ಧರ್ಮ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಆದರೆ, ಮಾನವೀಯ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಹಾವೇರಿ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಹುಬ್ಬಳ್ಳಿಯಲ್ಲಿ (Hubballi) ಗಣೇಶನ ವಿಗ್ರಹಗಳನ್ನು (Ganesha Idol) ತಯಾರಿಸುವ ಮೂಲಕ ವೃತ್ತಿಯಲ್ಲಿ ಯಾವುದೇ ಜಾತಿ, ಧರ್ಮವಿಲ್ಲ, ಎಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿ ನಿರುಪಮಾ ಯಾದವ ಎಂಬುವರು ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಯನ್ನು ತಯಾರಿಸುತ್ತಿದ್ದಾರೆ. ಇವರ ಬಳಿ ಸುಮನ್ ಎಂಬ ಹಾವೇರಿಯ ಮುಸ್ಲಿಂ ಮಹಿಳೆ ಗಣೇಶ ವಿಗ್ರಹಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಗ್ರಾಹಕರಿಂದ ಪ್ರತಿಭಟನೆ
ಸುಮನ್ ಮನೆಯಲ್ಲಿ ಕಡು ಬಡತನ ಇರುವುದರಿಂದ ಉದ್ಯೋಗ ಕೇಳಿಕೊಂಡು ಬಂದಿದ್ದರಂತೆ. ಆಗ ಗಣೇಶ ಮೂರ್ತಿ ತಯಾರಿಕೆ ಕೆಲಸ ಮಾಡುತ್ತಿದ್ದ ಅರುಣ್ ಯಾದವ್ ಜಾತಿ ಭೇದಭಾವ ಮಾಡದೆ ಸುಮನ್ ಅವರಿಗೆ ಕೆಲಸವನ್ನು ನೀಡಿದ್ದಾರೆ. ಅದರಂತೆ ಕಳೆದ ನಾಲ್ಕು ವರ್ಷಗಳಿಂದ ಸುಮನ್ ಅವರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲಸಕ್ಕೆ ಜಾತಿ ಇಲ್ಲ ಅಂದುಕೊಂಡ ಸುಮನ್ ಮೂರ್ತಿ ತಯಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಸರ್ಕಾರ ಪಿಒಪಿ ಗಣೇಶ ಮೂರ್ತಿಗಳನ್ನು ಬ್ಯಾನ್ ಮಾಡಿದೆ. ಹೀಗಾಗಿ ಪೋರಬಂದರ್ನಿಂದ ಮಣ್ಣು ಹಾಗೂ ಕಾಗದದಿಂದ ಗಣೇಶ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಮಹಿಳೆಯು ಕೂಡ ಅರುಣ ಯಾದವ್ ಅವರಿಂದ ಮೂರ್ತಿ ತಯಾರಿಕೆಯಲ್ಲಿ ಪಳಗಿದ್ದು, ವಿಘ್ನೇಶ್ವರನ ಮೂರ್ತಿ ತಯಾರಿಸುತ್ತಾ ತಮ್ಮ ಮನೆಯ ಆರ್ಥಿಕ ವಿಘ್ನವನ್ನು ದೂರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಒಟ್ಟಿನಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಗಲಭೆ, ಗಲಾಟೆ ಮಾಡುವವರ ಮಧ್ಯೆ ಕಾಯಕಕ್ಕೆ ಯಾವುದೇ ಧರ್ಮಜಾತಿ ಕಟ್ಟುಪಾಡುಗಳಿಲ್ಲ ಎಂದು ತೋರಿಸಿಕೊಟ್ಟ ಸುಮನ್ ಅವರು ಸಮಾಜಕ್ಕೆ ಉತ್ತಮ ಮಾದರಿಯಾಗಿ ನಿಂತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Sun, 20 August 23