ಮುಂದಿನ ಸೋಮವಾರವೇ ಗಣೇಶನ ಹಬ್ಬ: ವಿನಾಯಕ ಚೌತಿ ಏಕೆ ವಿಶೇಷ ಹಬ್ಬ.. ಮೊದಲು ಗಣೇಶನನ್ನು ಪೂಜಿಸುವುದು ಏಕೆ ಗೊತ್ತಾ?

ಗಣಪತಿಯನ್ನು ಭಕ್ತಿಯಿಂದ ಪೂಜಿಸುವ ಭಕ್ತರು ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಗಣೇಶ ಹಬ್ಬವನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಗಣೇಶ ಹಬ್ಬಕ್ಕಾಗಿ ಬೃಹತ್​​ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ. ಶಿವ ಪಾರ್ವತಿಯರ ಮೊದಲ ಪುತ್ರ ಗಣಪತಿಗೆ ಮೊದಲ ಪೂಜಿತ ದೇವನ ಸ್ಥಾನ ಏಕೆ ಬಂತು ಎಂದು ತಿಳಿದುಕೊಳ್ಳೋಣ..

ಮುಂದಿನ ಸೋಮವಾರವೇ ಗಣೇಶನ ಹಬ್ಬ: ವಿನಾಯಕ ಚೌತಿ ಏಕೆ ವಿಶೇಷ ಹಬ್ಬ.. ಮೊದಲು ಗಣೇಶನನ್ನು ಪೂಜಿಸುವುದು ಏಕೆ ಗೊತ್ತಾ?
ಮೊದಲು ಗಣೇಶನನ್ನು ಪೂಜಿಸುವುದು ಏಕೆ ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on: Sep 11, 2023 | 12:53 PM

ಹಿಂದೂ ಧರ್ಮದ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾದ ವಿನಾಯಕ ಚೌತಿ ಹಬ್ಬ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ, ಅಂದರೆ ಮುಂದಿನ ಸೋಮವಾರ (ಸೆಪ್ಟೆಂಬರ್​​ 18 – Ganesha Festival 2023). ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದು ಹಿಂದೂಗಳು ಗಣಪತಿಯ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ ಈ ತಿಥಿ ಸೆಪ್ಟೆಂಬರ್ 18 ರಂದು ಬರುತ್ತದೆ. ಆದರೆ ಕೆಲವರು 18 ರಂದು ಚೌತಿ ಆಚರಿಸಿದರೆ, ಇನ್ನು ಕೆಲವರು 19 ರಂದು ಆಚರಿಸಲಿದ್ದಾರೆ. ನವ ರಾತ್ರಿ ಉತ್ಸವವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಹಬ್ಬಗಳು ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತವೆ. ಗಣೇಶ ಉತ್ಸವದ ಸಮಯದಲ್ಲಿ.. ಗಣಪತಿ ಮೂರ್ತಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ 10 ದಿನಗಳ ಕಾಲ ಸಂಪೂರ್ಣ ನಿಯಮಗಳೊಂದಿಗೆ ಪೂಜಿಸಲಾಗುತ್ತದೆ. ಈ 10 ದಿನಗಳ ಕಾಲ ಗಣಪತಿಯು ಭೂಮಿಯ ಮೇಲೆ ಇದ್ದು ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ (Spiritual).

ಗಣಪತಿಯನ್ನು ಭಕ್ತಿಯಿಂದ ಪೂಜಿಸುವ ಭಕ್ತರು ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಗಣೇಶ ಹಬ್ಬವನ್ನು 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಗಣೇಶ ಹಬ್ಬಕ್ಕಾಗಿ ಬೃಹತ್​​ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ. ಈ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಗಳನ್ನು ಸುತ್ತಮುತ್ತಲ ಊರುಗಳಿಂದ ಭಕ್ತರು ಆಗಮಿಸುತ್ತಾರೆ.

ಆದಿ ಪೂಜಿತ ಗಣಪತಿ

ಹಿಂದೂ ಧರ್ಮದಲ್ಲಿ ಭಗವಾನ್ ಗಣೇಶನಿಗೆ ಮೊದಲ ಪೂಜೆ ಸ್ವೀಕರಿಸುವ ಸ್ಥಾನಮಾನ ನೀಡಲಾಗಿದೆ. ಗಣೇಶನ ಆಶೀರ್ವಾದವಿಲ್ಲದೆ ಯಾವುದೇ ಶುಭ ಕಾರ್ಯವನ್ನು ಪೂರ್ಣ ಗೊಳಿಸಲಾಗುವುದಿಲ್ಲ. ಗಣೇಶನನ್ನು ಬುದ್ಧಿವಂತಿಕೆ, ತಿಳಿವಳಿಕೆ, ಸಂತೋಷ ಮತ್ತು ಸಮೃದ್ಧಿಯ ಆರಾಧ ದೈವ ಎಂದು ಪರಿಗಣಿಸಲಾಗುತ್ತದೆ. ಗಣೇಶನ ಆಶೀರ್ವಾದದಿಂದ ಜೀವನದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದಕ್ಕೆ ಕಾರಣ ಏನೆಂದರೆ.. ಶಿವ ಪಾರ್ವತಿಯರ ಮೊದಲ ಪುತ್ರ ಗಣಪತಿಗೆ ಮೊದಲ ಪೂಜಿತ ದೇವನ ಸ್ಥಾನ ಏಕೆ ಬಂತು ಎಂದು ತಿಳಿದುಕೊಳ್ಳೋಣ..

ವಾಸ್ತವವಾಗಿ ಇದರ ಹಿಂದೆ ಒಂದು ದಂತಕಥೆ ಇದೆ. ಒಂದಾನೊಂದು ಕಾಲದಲ್ಲಿ ಎಲ್ಲ ದೇವರನ್ನು ಮೊದಲು ಪೂಜಿಸಬೇಕು ಎಂಬ ವಾದವಿತ್ತು. ಎಲ್ಲಾ ದೇವರುಗಳು ತಮ್ಮನ್ನು ತಾವು ಶ್ರೇಷ್ಠರೆಂದು ಘೋಷಿಸಲು ಪ್ರಾರಂಭಿಸಿದರು. ತಮ್ಮ ತಮ್ಮಲ್ಲೇ ಜಗಳವಾಡತೊಡಗಿದರು. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಿವನನ್ನು ಸಂಪರ್ಕಿಸಲು ನಾರದರು ಸಲಹೆ ನೀಡಿದರು. ದೇವತೆಗಳೆಲ್ಲ ಶಿವನ ಮೊರೆ ಹೋದಾಗ.. ಶಿವನು ಈ ವಿವಾದವನ್ನು ಬಗೆಹರಿಸುವ ಉಪಾಯವನ್ನು ಯೋಚಿಸಿದನು. ಯಾರು ಇಡೀ ಬ್ರಹ್ಮಾಂಡವನ್ನು ಸಂಚರಿಸಿ ತನ್ನನ್ನು ಮೊದಲು ತಲುಪುತ್ತಾರೋ ಅವರು ಇತರೆ ದೇವತೆಗಳಿಂದ ಜಗತ್ತಿನಲ್ಲಿ ಮೊದಲ ಪೂಜೆಯನ್ನು ಸ್ವೀಕರಿಸುತ್ತಾರೆ ಎಂದು ಎಲ್ಲಾ ದೇವರುಗಳಿಗೆ ಹೇಳಿದರು.

ಬುದ್ಧಿವಂತ ಗಣೇಶ ತನ್ನ ಹೆತ್ತವರನ್ನು ಪ್ರದಕ್ಷಿಣೆ ಹಾಕುತ್ತಾನೆ!

ಭಗವಾನ್ ಶಿವನ ಮಾತುಗಳನ್ನು ಕೇಳಿ ದೇವತೆಗಳೆಲ್ಲರೂ ತಮ್ಮ ತಮ್ಮ ವಾಹನಗಳ ಮೇಲೆ ಕುಳಿತು ವಿಶ್ವದಲ್ಲಿ ಸಂಚರಿಸಲು ಹೊರಟರು. ಪರಮಾಧಿಕಾರದ ಈ ಓಟದಲ್ಲಿ ಗಣೇಶನೂ ಭಾಗವಹಿಸಿದ್ದ. ಆದರೆ ಬ್ರಹ್ಮಾಂಡವನ್ನು ಸುತ್ತುವ ಬದಲು, ಗಣೇಶನು ತನ್ನ ಹೆತ್ತವರನ್ನು ಅಂದರೆ ಶಿವನನ್ನು 7 ಬಾರಿ ಸುತ್ತಿದನು. ಅದರ ನಂತರ, ಅವನು ತನ್ನ ಹೆತ್ತವರ ಮುಂದೆ ಕೈಗಳನ್ನು ಜೋಡಿಸಿ ನಿಂತನು. ಎಲ್ಲಾ ದೇವರುಗಳು ಬ್ರಹ್ಮಾಂಡದ ಸುತ್ತಲೂ ಪ್ರದಕ್ಷಿಣೆ ಹಾಕಿ ಶಿವನನ್ನು ತಲುಪಿದಾಗ, ಆಗಲೇ ಶಿವನ ಬಗ್ಗೆ ಯೋಚಿಸುತ್ತಿದ್ದ ಗಣೇಶನು ಕಾಣಿಸಿಕೊಂಡನು. ನಂತರ ಶಿವನು ಗಣಪತಿಯನ್ನು ವಿಜೇತ ಎಂದು ಘೋಷಿಸಿದನು.

ಇದನ್ನು ಕಂಡು ಎಲ್ಲಾ ದೇವತೆಗಳೂ ಆಶ್ಚರ್ಯಚಕಿತರಾದರು. ವಿಶ್ವವನ್ನು ಪ್ರದಕ್ಷಿಣೆ ಮಾಡದ ಗಣೇಶನನ್ನು ವಿಜಯಿ ಎಂದು ಏಕೆ ಘೋಷಿಸಿದರು ಎಂದು ಶಿವನನ್ನು ಕೇಳಿದರು. ಈ ವಿಚಾರವಾಗಿ ಶಿವ ಪಾರ್ವತಿಯರ ಸ್ಥಾನ ವಿಶ್ವದಲ್ಲಿಯೇ ಪರಮೋನ್ನತವಾಗಿದೆ ಎಂದು ಹೇಳಿದ ಪರಮಾತ್ಮ, ಗಣಪತಿಯು ತನ್ನ ತಂದೆ ತಾಯಿಯರು ಸಮಸ್ತ ಜಗತ್ತಿಗೆ ಪೋಷಕರಾಗಿರುವುದರಿಂದ 7 ಬಾರಿ ಪ್ರದಕ್ಷಿಣೆ ಹಾಕಿದ್ದಾನೆ ಎಂದು ವಿವರಿಸಿದರು. ನಂತರ ಗಣೇಶನನ್ನು ವಿಜೇತ ಎಂದು ಘೋಷಿಸಲಾಯಿತು. ಶಿವನ ನಿರ್ಧಾರವನ್ನು ದೇವತೆಗಳೆಲ್ಲರೂ ಒಪ್ಪಿದರು. ಹೀಗೆ ಮೊದಲ ಪೂಜೆಯನ್ನು ಸ್ವೀಕರಿಸುವ ಸ್ಥಾನವು ಗಣೇಶನಿಗೆ ದೊರೆಯಿತು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

(ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ಅವರವರ ನಂಬಿಕೆಯನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಜನರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಇಲ್ಲಿ ಮಾಹಿತಿ ಒದಗಿಸಿದ್ದೇವೆ)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ