Guru Astama 2026: ಜು.14 ರಿಂದ ಗುರು ಅಸ್ತಮ; ಈ 3 ರಾಶಿಯವರು ಆ. 12 ರವರೆಗೆ ತುಂಬಾ ಜಾಗರೂಕರಾಗಿರಿ

ಜ್ಯೋತಿಷ್ಯದಲ್ಲಿ ದೇವಗುರು ಬೃಹಸ್ಪತಿಯ ಅಸ್ತಮವು ಜುಲೈ 14 ರಿಂದ ಆಗಸ್ಟ್ 12 ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ನಿಷೇಧಿಸಲಾಗುತ್ತದೆ. ಗುರುಬಲ ಕಡಿಮೆ ಇರುವ ಕಾರಣ ಮೇಷ, ವೃಷಭ ಮತ್ತು ಮಿಥುನ ರಾಶಿಗಳ ಜನರು ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಜಾಗರೂಕರಾಗಿರಬೇಕು. ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.

Guru Astama 2026: ಜು.14 ರಿಂದ ಗುರು ಅಸ್ತಮ; ಈ 3 ರಾಶಿಯವರು ಆ. 12 ರವರೆಗೆ ತುಂಬಾ ಜಾಗರೂಕರಾಗಿರಿ
ಜು.14 ರಿಂದ ಗುರು ಅಸ್ತಮ
Image Credit source: Getty Images

Updated on: Jul 01, 2026 | 11:04 AM

ಮುಖ್ಯಾಂಶಗಳು

  • ದೇವಗುರು ಬೃಹಸ್ಪತಿಯ ಅಸ್ತಮವು ಜುಲೈ 14 ರಿಂದ ಆಗಸ್ಟ್ 12 ರವರೆಗೆ ಇರುತ್ತದೆ.
  • ಮೇಷ, ವೃಷಭ ಮತ್ತು ಮಿಥುನ ರಾಶಿಯವರು ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಜಾಗರೂಕರಾಗಿರಿ
  • ಯಾವುದೇ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂಬತ್ತು ಗ್ರಹಗಳ ಪೈಕಿ ದೇವಗುರು ಬೃಹಸ್ಪತಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಗುರುವನ್ನು ಜ್ಞಾನ, ಶಿಕ್ಷಣ, ಬುದ್ಧಿವಂತಿಕೆ, ಸಂಪತ್ತು, ಅದೃಷ್ಟ, ಧರ್ಮ ಮತ್ತು ಸಂತಾನ ಭಾಗ್ಯದ ಕಾರಕ ಎಂದು ಪರಿಗಣಿಸಲಾಗುತ್ತದೆ. ಗುರುವಿನ ನಡಿಗೆಯಲ್ಲಿ ಆಗುವ ಸಣ್ಣ ಬದಲಾವಣೆಯೂ ಇಡೀ ದೇಶ ಮತ್ತು ಪ್ರಪಂಚದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ಗುರುಗ್ರಹವು ಚಂದ್ರನ ಒಡೆತನದ, ತನ್ನ ಉಚ್ಚ ರಾಶಿಯಾದ ಕರ್ಕಾಟಕ (Cancer) ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆದರೆ, ಜುಲೈ 14 ರಂದು ಗುರುವು ಇದೇ ರಾಶಿಯಲ್ಲಿ ಅಸ್ತಮಿಸಲಿದ್ದು, ಆಗಸ್ಟ್ 12 ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ.

ಶುಭ ಕಾರ್ಯಗಳಿಗೆ ತಾತ್ಕಾಲಿಕ ಬ್ರೇಕ್:

ಗುರುಗ್ರಹವು ಅಸ್ತಮಿಸಿದ ತಕ್ಷಣವೇ ಮದುವೆ, ಮುಂಜಿ, ಗೃಹಪ್ರವೇಶ, ಚೌಲ (ಕ್ಷೌರ ಸಮಾರಂಭ) ಮುಂತಾದ ಯಾವುದೇ ರೀತಿಯ ಶುಭ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನಿಷೇಧಿಸಲಾಗುತ್ತದೆ. ಈ ಅವಧಿಯಲ್ಲಿ ಗುರು ಬಲ ಕಡಿಮೆ ಇರುವುದರಿಂದ ಹೊಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಈ ಗುರು ಅಸ್ತಮದ ಅವಧಿಯಲ್ಲಿ ಮುಖ್ಯವಾಗಿ 3 ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು ಮತ್ತು ಅವರ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ (Aries):

ಮೇಷ ರಾಶಿಯ ಅಧಿಪತಿ ಮಂಗಳ. ಪ್ರಸ್ತುತ ಗುರುವು ಮೇಷ ರಾಶಿಯ 4ನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇಷ್ಟು ದಿನ ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಕಂಡಿದ್ದ ನಿಮಗೆ, ಗುರು ಅಸ್ತಮವಾದ ನಂತರ ಸವಾಲುಗಳು ಎದುರಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಋತುಮಾನದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆಹಾರ ಪದ್ಧತಿಯಲ್ಲಿ ಶಿಸ್ತು ಕಾಪಾಡಿಕೊಳ್ಳಿ, ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವರ್ತಿಸಿ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ವೃಷಭ ರಾಶಿ (Taurus):

ವೃಷಭ ರಾಶಿಯ ಅಧಿಪತಿ ಶುಕ್ರ. ಪ್ರಸ್ತುತ ಗುರುವು ನಿಮ್ಮ ರಾಶಿಯ 3ನೇ ಮನೆಯಲ್ಲಿದ್ದು, ಆತನ ದೃಷ್ಟಿ 8ನೇ ಮನೆಯ ಮೇಲಿದೆ. ಎಂಟನೇ ಮನೆ ಸವಾಲುಗಳು ಮತ್ತು ಹಠಾತ್ ಬದಲಾವಣೆಗಳನ್ನು ಸೂಚಿಸುತ್ತದೆ. ಗುರು ಅಸ್ತಮದ ಅವಧಿಯಲ್ಲಿ ಯಾವುದೇ ಹೊಸ ಉದ್ಯೋಗ ಅಥವಾ ವ್ಯವಹಾರದಲ್ಲಿ ಹಣ ಹೂಡುವ ಮುನ್ನ ಎಚ್ಚರವಿರಲಿ. ಯಾವುದೇ ರೀತಿಯ ರಿಸ್ಕ್ (ಅಪಾಯ) ತೆಗೆದುಕೊಳ್ಳಲು ಹೋಗಬೇಡಿ. ಆರೋಗ್ಯದ ಏರುಪೇರಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಅಥವಾ ಮನೆಯಲ್ಲಿ ನಿಮ್ಮ ಹಿರಿಯರೊಂದಿಗೆ ಅನಗತ್ಯ ವಾದಗಳನ್ನು ಮಾಡಬೇಡಿ ಮತ್ತು ಅವರೊಂದಿಗೆ ಉತ್ತಮ ಸಮನ್ವಯ ಕಾಯ್ದುಕೊಳ್ಳಿ.

ಮಿಥುನ ರಾಶಿ (Gemini):

ಮಿಥುನ ರಾಶಿಯ ಅಧಿಪತಿ ಬುಧ. ಪ್ರಸ್ತುತ ಗುರುವು ನಿಮ್ಮ ರಾಶಿಯ 2ನೇ ಮನೆಯಲ್ಲಿ ಅಂದರೆ ಧನ ಮತ್ತು ಕುಟುಂಬದ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಗುರು ಅಸ್ತಮದ ಪ್ರಭಾವದಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ತಪ್ಪು ತಿಳುವಳಿಕೆಗಳು ಮತ್ತು ಭಿನ್ನಾಭಿಪ್ರಾಯಗಳು ಮೂಡಬಹುದು. ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಮೇಲೆ ಸಂಪೂರ್ಣ ನಿಯಂತ್ರಣವಿರಲಿ. ಕಠಿಣ ಪದಗಳ ಬಳಕೆಯನ್ನು ತಪ್ಪಿಸಿ. ಮುಖ್ಯವಾಗಿ, ಯಾವುದೇ ದೊಡ್ಡ ಹೂಡಿಕೆ ಮಾಡುವ ಮುನ್ನ ತಜ್ಞರ ಅಥವಾ ಹಿರಿಯರ ಸಲಹೆಯನ್ನು ಪಡೆಯಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us