Guru Pradosh 2021: ಈ ಬಾರಿ ಗುರು ಪ್ರದೋಷ, ಡಿಸೆಂಬರ್ 2ರಂದು ವ್ರತಾಚರಣೆ, ಏನಿದರ ಮಹತ್ವ?

| Updated By: ಸಾಧು ಶ್ರೀನಾಥ್​

Updated on: Nov 27, 2021 | 6:36 AM

ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಪ್ರದೋಷ ವ್ರತಕ್ಕೆ ಭಾರೀ ಮಹತ್ವವಿದೆ. ಇದು ಶ್ರೇಷ್ಠ ವ್ರತ ಎಂಬ ಮಾತೂ ಇದೆ. ಮಹಾದೇವನಿಗೆ ಅರ್ಪಿತವಾಗಿರುವ ಪ್ರದೋಷ ವ್ರತವು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಎರಡೂ ಸಂದರ್ಭಗಳಲ್ಲಿ ತ್ರಯೋದಶಿ ದಿನದಂದು ಆಚರಿಸುತ್ತಾರೆ. ಮಾರ್ಗಶಿರ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುವ ಪ್ರದೋಷ ವ್ರತವು ಈ ಬಾರಿ ಡಿಸೆಂಬರ್ 2ರಂದು ಗುರುವಾರದ ದಿನ ಬಂದಿದೆ.

Guru Pradosh 2021: ಈ ಬಾರಿ ಗುರು ಪ್ರದೋಷ, ಡಿಸೆಂಬರ್ 2ರಂದು ವ್ರತಾಚರಣೆ, ಏನಿದರ ಮಹತ್ವ?
ಈ ಬಾರಿ ಗುರು ಪ್ರದೋಷ, ಡಿಸೆಂಬರ್ 2ರಂದು ವ್ರತಾಚರಣೆ, ಏನಿದರ ಮಹತ್ವ ಏನು?
Follow us on

ಪ್ರದೋಷ ವ್ರತವು ಭಗವಂತ ಈಶ್ವರನಿಗೆ ಸಮರ್ಪಿತ. ಈ ವ್ರತ ಶಿವನಿಗೆ ಅತ್ಯಂತ ಪ್ರಿಯವಾದುದು. ಇನ್ನು ವ್ರತಾಚರಣೆಯಿಂದ ಶಿವನ ಭಕ್ತರಿಗೆ ಎಲ್ಲ ಕೋರಿಕೆಗಳೂ ನೆರವೇರುವುವು. ಹಾಗಾದರೆ ಈ ವ್ರತಾಚರಣೆ ಮಾಡುವುದು ಹೇಗೆ? ಮುಹೂರ್ತ ಯಾವಾಗ? ಪೂಜಾ ವಿಧಾನ ಹೇಗೆ? ವ್ರತರ ಇನ್ನಿತರೆ ಮಹತ್ವಗಳನ್ನು ತಿಳಿದುಕೊಳ್ಳೋಣ.

ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಪ್ರದೋಷ ವ್ರತಕ್ಕೆ ಭಾರೀ ಮಹತ್ವವಿದೆ. ಇದು ಶ್ರೇಷ್ಠ ವ್ರತ ಎಂಬ ಮಾತೂ ಇದೆ. ಮಹಾದೇವನಿಗೆ ಅರ್ಪಿತವಾಗಿರುವ ಪ್ರದೋಷ ವ್ರತವು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಎರಡೂ ಸಂದರ್ಭಗಳಲ್ಲಿ ತ್ರಯೋದಶಿ ದಿನದಂದು ಆಚರಿಸುತ್ತಾರೆ. ಮಾರ್ಗಶಿರ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುವ ಪ್ರದೋಷ ವ್ರತವು ಈ ಬಾರಿ ಡಿಸೆಂಬರ್ 2ರಂದು ಗುರುವಾರದ ದಿನ ಬಂದಿದೆ.

ಈ ಬಾರಿ ಗುರುವಾರದಂದು ಪ್ರದೋಷ ವ್ರತ ಬಂದಿರುವುದರಿಂದ ಅದನ್ನು ಗುರು ಪ್ರದೋಷ ಎಂದು ಕರೆಯಲಾಗುತ್ತದೆ. ಅಂದು ಈ ವ್ರತವನ್ನು ಆಚರಿಸುವುದರಿಂದ ಮರಮಾತ್ಮ ಶಿವನಿಗೆ ತುಂಬಾ ಸಂತೋಷವಾಗುತ್ತದೆ. ಮತ್ತು ಇದರಿಂದ ಭಕ್ತರ ಕಷ್ಟಗಳೆಲ್ಲಾ ನಿವಾರಣೆಯಾಗಲಿವೆ. ಶಾಸ್ತ್ರಗಳ ಪ್ರಕಾರ ಪ್ರದೋಷ ವ್ರತ ಆಚರಣೆಯಿಂದ 2 ಗೋವುಗಳನ್ನು ದಾನ ಮಾಡಿದಷ್ಟು ಫಲ ಸಿಗುತ್ತದೆ.

ಗುರುವಾರದ ಪ್ರದೋಷ ವ್ರತದ ಮಹತ್ವ ಏನು?:
ಗುರುವಾರದ ಪ್ರದೋಷ ವ್ರತಾಚರಣೆಯಿಂದ ಭಕ್ತರಿಗೆ ಎಲ್ಲ ಪಾಪಗಳು ನಾಶವಾಗಲಿವೆ. ಭಕ್ತರಿಗೆ ಮೃತ್ಯುವಿನ ಬಳಿಕ ಮೋಕ್ಷ ಪ್ರಾಪ್ತಿಯಾಗಲಿದೆ. ವ್ರತದಿಂದ ಭಕತರ ಭಾಗ್ಯದ ಬಾಗಿಲು ತೆರೆಯುತ್ತದೆ. ಈ ವ್ರತಾಚರಣೆಯಿಂದ ಭಕ್ತರ ಜಾತಕದಲ್ಲಿ ಚಂದ್ರನ ಸ್ಥಿತಿ ಮಹಬೂತಾಗುತ್ತದೆ. ಇದರಿಂದ ವ್ಯಕ್ತಯ ಮಾನಸಿಕ ಸ್ಥಿಮಿತ ಸುಧಾರಿಸುತ್ತದೆ.

ಗುರು ಪ್ರದೋಷ ವ್ರತಾಚರಣೆ ಪೂಜಾ ವಿಧಿವಿಧಾನ ಹೀಗಿದೆ:
ಎಲ್ಲಕ್ಕಿಂತ ಮೊದಲು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಸಂಧ್ಯಾವಂದನೆ ಮಾಡಬೇಕು. ಅದಾದ ಮೇಲೆ ವ್ತರ ಸಂಕಲ್ಪ ಮಾಡಬೇಕು. ಸಾಧ್ಯವಾದರೆ ಗುರು ಪ್ರದೋಷದ ದಿನದಂದು ಉಪವಾಸ ಮಾಡಿ. ಉಪವಾಸ ಸಾಧ್ಯವಾಗದಿದ್ದಲ್ಲಿ ಫಲಾಹಾರ ತೆಗೆದುಕೊಳ್ಳಿ. ಸಾಯಂಕಾಲ ಪ್ರದೋಷ ಕಾಲ ಅಂದರೆ ಸೂರ್ಯಾಸ್ತದ ಬಳಿಕ ಮತ್ತು ರಾತ್ರಿಗೂ ಮುನ್ನ ಪರಮಾತ್ಮ ಶಿವನ ಪೂಜೆ ನೆರವೇರಿಸಿ. ಪೂಜಾ ಸ್ಥಳವನ್ನು ಗಂಗಾಜಲ ಅಥವಾ ಮನೆಯ ಸ್ವಚ್ಛ ನೀರಿನಿಂದ ಶುಚಿ ಮಾಡಿ. ಅದಾದ ಮೇಲೆ ಹಸುವಿನ ಸಗಣಿಯಿಂದ ಆ ಜಾಗವನ್ನು ಸಾರಿಸಿ. 5 ಬಣ್ಣಗಳಲ್ಲಿ ಒಂದು ಚೌಕ ರಚಿಸಿ.

ಈಶಾನ್ಯ ದಿಕ್ಕಿನಲ್ಲಿ ಅಂದರೆ ಉತ್ತರ-ಪೂರ್ವ ಭಾಗದಲ್ಲಿ ಪೂಜಾ ಸ್ಥಳವನ್ನು ಸಜ್ಜುಗೊಳಿಸಿ. ಈಶಾನ್ಯ ಅಭಿಮುಖವಾಗಿ ಕುಳಿತುಕೊಳ್ಳಿ. ಅಲ್ಲಿಂದ ಮಹಾದೇವ ಶಂಕರನನ್ನು ಆರಾಧಿಸಿ. ಬಿಳಿ ಶುಭ್ರ ಬಟ್ಟೆ ಧರಿಸಿ. ಆಕೆಂದರೆ ಅದು ಅತ್ಯಂತ ಶುಭದಾಯಕ. ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ. ಹಾಗೆ ಶಿವ ಮಂತ್ರ ಪಠಣ ಮಾಡುತ್ತಾ ಜಲ, ಗಂಧ, ಹೂವು, ಪ್ರಸಾದ, ಧೂಪವನ್ನು ಅರ್ಪಿಸಿ. ಅದಾದ ಮೇಲೆ ಪ್ರದೋಷ ವ್ರತದ ಕಥೆಯನ್ನು ವಾಚಿಸಿ. ಎಲ್ಲಾ ಮುಗಿಯುತ್ತಿದ್ದಂತೆ ಶಿವನಿಗೆ ಆರತಿ ಎತ್ತಿ. ಶಿವನಲ್ಲಿ ನಿಮ್ಮ ಕೋರಿಕೆಯನ್ನು ಅರ್ಪಿಸಿ. ಎಲ್ಲರಿಗೂ ಪ್ರಸಾದ ಹಂಚಿ.

ಯಾವ ವಾರದಂದು ಪ್ರದೋಷ ವ್ರತ ಆಚರಿಸಿದರೆ ಏನು ಪ್ರಯೋಜನವಾಗಲಿದೆ, ತಿಳಿಯಿರಿ.

1. ಸೋಮವಾರದ ಪ್ರದೋಷ ವ್ರತಾಚರಣೆಯಿಂದ ಎಲ್ಲ ಕಾಮನೆಗಳು, ಇಷ್ಟಾರ್ಥಗಳು ನೆರವೇರುವವು.
2. ಮಂಗಳವಾರದ ಪ್ರದೋಷ ವ್ರತಾಚರಣೆಯಿಂದ ರೋಗ ರುಜಿನಗಳಿಂದ ಮುಕ್ತಿ ಸಿಗುತ್ತದೆ.
3. ಬುಧವಾರದ ಪ್ರದೋಷ ವ್ರತಾಚರಣೆಯಿಂದ ಎಲ್ಲ ಕೋರಿಕೆಗಳೂ ನೆರವೇರುತ್ತವೆ.
4. ಗುರುವಾರದ ಪ್ರದೋಷ ವ್ರತಾಚರಣೆಯಿಂದ ಶತ್ರು ನಾಶ ಆಗಲಿದೆ.
5. ಶುಕ್ರವಾರದ ಪ್ರದೋಷ ವ್ರತಾಚರಣೆಯಿಂದ ವಿವಾಹಜೀವನ ಸುಖಮಯವಾಗಲಿದೆ. ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ.
6. ಶನಿವಾರದ ಪ್ರದೋಷ ವ್ರತಾಚರಣೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ.
7. ಭಾನುವಾರದ ಪ್ರದೋಷ ವ್ರತಾಚರಣೆಯಿಂದ ಉತ್ತಮ ಆರೋಗ್ಯ ದಕ್ಕುತ್ತದೆ ಮತ್ತು ಆಯಸ್ಸು ವೃದ್ಧಿಯೂ ಆಗುತ್ತದೆ.