Hindu Wedding Rituals: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?

ಹಿಂದೂ ಧರ್ಮದ ಮದುವೆಗಳಲ್ಲಿ ನವದಂಪತಿಗಳ ಕೈಯಲ್ಲಿ ತೆಂಗಿನಕಾಯಿ ಇಡುವುದು ಪುರಾತನ ಸಂಪ್ರದಾಯ. ಸಾಮಾನ್ಯವಾಗಿ ತೆಂಗಿನಕಾಯಿಯ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿ ಸಣ್ಣ ಹೂವಿನ ಹಾರದಿಂದ ಅಲಂಕರಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್​​​ ಹೆಸರಿನಲ್ಲಿ ಸಂಪ್ರದಾಯ ಬದಲಾಗುತ್ತಿದೆ. ಆದರೆ ಅತಿಯಾದ ಅಲಂಕಾರ ಸರಿಯೇ? ಈ ರೀತಿಯ ಅಲಂಕಾರದಲ್ಲಿ ಹೆಚ್ಚು ಒತ್ತು ನೀಡಬೇಕೇ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

Hindu Wedding Rituals: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?
Hindu Wedding Coconut

Updated on: Jul 09, 2025 | 11:25 AM

ಹಿಂದೂ ಧರ್ಮದ ಮದುವೆಗಳಲ್ಲಿ, ನವಜೋಡಿಯ ಕೈಯಲ್ಲಿ ತೆಂಗಿನಕಾಯಿ ಇರುವುದನ್ನು ನೀವು ಗಮನಿಸಿರುತ್ತೀರಿ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸಂಪ್ರದಾಯಕ್ಕಿಂತ ಫ್ಯಾಶನ್​ ಆಗಿ ಬದಲಾಗುತ್ತಿದೆ. ತೆಂಗಿನ ಕಾಯಿಯನ್ನು ಬಳಸುವ ಬದಲಾಗಿ ತೆಂಗಿನ ಕಾಯಿಯನ್ನೇ ಹೋಲುವ ರೀತಿಯಲ್ಲಿ ಅಲಂಕೃತಗೊಳಿಸಿದ ವಸ್ತುಗಳನ್ನು ಬಳಸಲಾಗುತ್ತದೆ.ಇನ್ನೂ ಕೆಲವರು ತೆಂಗಿನಕಾಯಿಯನ್ನೇ ಬಗೆಬಗೆಯಾಗಿ ಮಣಿ, ಹೂವುಗಳಿಂದ ಅಲಂಕರಿಸುತ್ತಾರೆ. ಆದರೆ ಈ ರೀತಿ ಬಳಸುವುದು ಎಷ್ಟು ಸರಿ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ತೆಂಗಿನಕಾಯಿಯನ್ನು ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ) ಸಂಕೇತವೆಂದು ಪರಿಗಣಿಸುವ ಸಂಪ್ರದಾಯ ಇದೆ. ತೆಂಗಿನಕಾಯಿಯ ಮೇಲಿನ ಮೂರು ಕಣ್ಣುಗಳನ್ನು ಈ ತ್ರಿಮೂರ್ತಿಗಳ ರೂಪವೆಂದು ಪರಿಗಣಿಸಲಾಗುತ್ತದೆ. ಇದು ಮದುವೆಗೆ ದೇವರು ಸಾಕ್ಷಿಯಾಗಿದ್ದಾನೆ ಮತ್ತು ದೇವರುಗಳ ಆಶೀರ್ವಾದವು ಹೊಸ ದಂಪತಿಗಳ ಮೇಲೆ ಇರುತ್ತದೆ ಎಂದು ಸೂಚಿಸುತ್ತದೆ. ಇದಲ್ಲದೇ ತೆಂಗಿನಕಾಯಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಧು-ವರರ ಕೈಯಲ್ಲಿ ತೆಂಗಿನಕಾಯಿ ಇಡುವುದು ಅವರ ಜೀವನದಲ್ಲಿ ಸಮೃದ್ಧಿ ಮತ್ತು ಸಂಪತ್ತು ಯಾವಾಗಲೂ ಇರಲಿ ಎಂಬ ಹಾರೈಕೆಯಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಮನಿ ಪ್ಲಾಂಟ್ ಈ ದಿಕ್ಕಿನಲ್ಲಿಡಿ; ಕೆಲವೇ ದಿನಗಳಲ್ಲಿ ಬದಲಾವಣೆ ಕಾಣುವಿರಿ

ಇದನ್ನೂ ಓದಿ
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಅತಿಯಾದ ಅಲಂಕಾರ ಒಳ್ಳೆಯದೇ?

ಸಾಮಾನ್ಯ ಪದ್ಧತಿಯೆಂದರೆ ತಾಜಾ ತೆಂಗಿನಕಾಯಿಯ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿ ಸಣ್ಣ ಹೂವಿನ ಹಾರದಿಂದ ಸುತ್ತುವುದು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಎಲ್ಲವೂ ಸುಂದರವಾಗಿ ಕಾಣಬೇಕೆಂದು ಬಯಸುವವರು ತೆಂಗಿನಕಾಯಿಯನ್ನು ಹೂವುಗಳು, ರಿಬ್ಬನ್‌ಗಳು, ಸಣ್ಣ ಕನ್ನಡಿಗಳು ಅಥವಾ ಮಿನುಗುಗಳಿಂದ ಅಲಂಕರಿಸುತ್ತಾರೆ. ಆದಾಗ್ಯೂ, ಕೆಲವು ನಂಬಿಕೆಗಳ ಪ್ರಕಾರ ತೆಂಗಿನಕಾಯಿಯ ನೈಸರ್ಗಿಕ ಸ್ವರೂಪವನ್ನು ಬದಲಾಯಿಸಬಾರದು ಮತ್ತು ಯಾವುದೇ ಅಲಂಕಾರವಿಲ್ಲದೆ ಅದು ಶುಭಕರ ಎಂದು ಹೇಳಲಾಗುತ್ತದೆ. ತೆಂಗಿನಕಾಯಿ ದೈವತ್ವದ ಸಂಕೇತವಾಗಿರುವುದರಿಂದ, ಅದನ್ನು ಕೃತಕ ಅಲಂಕಾರಗಳಿಂದ ಮುಚ್ಚುವುದು ಸೂಕ್ತವಲ್ಲ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 am, Wed, 9 July 25