Holi 2024: ಹೋಳಿ ಹಬ್ಬದಂದು ಈ 5 ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವೇ ಬದಲಾಗುತ್ತೆ!

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2024 | 5:27 PM

ಹಿಂದೂ ಧರ್ಮದಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳ ಪ್ರಕಾರ, ಹೋಳಿ ದಿನದಂದು ಕೆಲವು ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಇದನ್ನು ಮಾಡುವುದರಿಂದ, ಲಕ್ಷ್ಮೀ ದೇವಿಯು ಯಾವಾಗಲೂ ಮನೆಯಲ್ಲಿ ನೆಲೆಸಿರುತ್ತಾಳೆ ಮತ್ತು ಆರ್ಥಿಕ ಸಂಕಷ್ಟ ಎಂದಿಗೂ ಬರುವುದಿಲ್ಲ ಎನ್ನಲಾಗುತ್ತದೆ ಹಾಗಾದರೆ ಹೋಳಿ ಹಬ್ಬದಂದು ಯಾವ ವಸ್ತುಗಳನ್ನು ಮನೆಗೆ ತರಬೇಕು? ಏನಿದೆ ಪ್ರಯೋಜನ? ಇಲ್ಲಿದೆ ಸಂಪೂರ್ಣ ಮಾಹಿತಿ.

Holi 2024: ಹೋಳಿ ಹಬ್ಬದಂದು ಈ 5 ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವೇ ಬದಲಾಗುತ್ತೆ!
Follow us on

ಹಿಂದೂ ಧರ್ಮದ ಬಣ್ಣಗಳ ಹಬ್ಬವಾದ ಹೋಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಬಣ್ಣದ ಹಬ್ಬವು ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಅಚ್ಚುಮೆಚ್ಚು ಹಾಗಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ವರ್ಷ, ಹೋಳಿ ಹಬ್ಬವನ್ನು ಮಾರ್ಚ್ 25 ರಂದು ಆಚರಿಸಲಾಗುವುದು. ಹುಣ್ಣಿಮೆ ತಿಥಿಯು ಮಾ. 24 ರಂದು ಬೆಳಿಗ್ಗೆ 09:54ಕ್ಕೆ ಆರಂಭವಾಗಿ, ಮಾ. 25 ರಂದು ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. ಇನ್ನು ಹಲವು ಕಡೆಗಳಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿರುವ ಆಚರಣೆಗಳ ಪ್ರಕಾರ ಹೋಳಿ ಹಬ್ಬದಂದು ಕೆಲವು ವಸ್ತುಗಳನ್ನು ಮನೆಗೆ ಖರೀದಿಸಿ ತರಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಕೆಲವು ನಂಬಿಕೆಗಳ ಪ್ರಕಾರ ಈ ರೀತಿ ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತದೆ ಜೊತೆಗೆ ನಿಮ್ಮ ಜೀವನದ ಅದೃಷ್ಟವೇ ಬದಲಾಗುತ್ತೆ ಎನ್ನಲಾಗುತ್ತದೆ. ಹಾಗಾದರೆ ನೀವು ಹೋಳಿ ಹಬ್ಬದಂದು ಮನೆಗೆ ಶಾಪಿಂಗ್ ಮಾಡಲು ಯೋಚಿಸುತ್ತಿದ್ದರೆ, ಈ ವಸ್ತುಗಳನ್ನು ನಿಮ್ಮ ಮನೆಗೆ ತನ್ನಿ.

ಹಿಂದೂ ಧರ್ಮದಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳ ಪ್ರಕಾರ, ಹೋಳಿ ದಿನದಂದು ಕೆಲವು ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಇದನ್ನು ಮಾಡುವುದರಿಂದ, ಲಕ್ಷ್ಮೀ ದೇವಿಯು ಯಾವಾಗಲೂ ಮನೆಯಲ್ಲಿ ನೆಲೆಸಿರುತ್ತಾಳೆ ಮತ್ತು ಆರ್ಥಿಕ ಸಂಕಷ್ಟ ಎಂದಿಗೂ ಬರುವುದಿಲ್ಲ ಎನ್ನಲಾಗುತ್ತದೆ ಹಾಗಾದರೆ ಹೋಳಿ ಹಬ್ಬದಂದು ಯಾವ ವಸ್ತುಗಳನ್ನು ಮನೆಗೆ ತರಬೇಕು? ಏನಿದೆ ಪ್ರಯೋಜನ? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೋಳಿ ಹಬ್ಬದಂದು ಈ 5 ವಸ್ತುಗಳನ್ನು ಮನೆಗೆ ತನ್ನಿ!

  1. ಜೀವನದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸು ಸಿಗದವರು ಅಥವಾ ಮನೆಯಲ್ಲಿ ಸುಖ, ಸಂತೋಷ ಇಲ್ಲದವರು ಕೆಲವು ವಾಸ್ತು ದೋಷಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಸುಂದರವಾದ ತೋರಣಗಳನ್ನು ನಿಮ್ಮ ಮನೆಗೆ ತಂದು ಮನೆಯ ಮುಖ್ಯ ಬಾಗಿಲಿಗೆ ನೇತುಹಾಕಿ. ಇದು ಮನೆಯ ವಾಸ್ತು ದೋಷಗಳನ್ನು ನಿವಾರಿಸುವುದಲ್ಲದೆ ತುಂಬಾ ಸುಂದರವಾಗಿ ಕಾಣುತ್ತದೆ.
  2. ಅಕ್ವೇರಿಯಂ ಅನ್ನು ಕುಬೇರನ ಸ್ಥಳವೆಂದು ಪರಿಗಣಿಸಲಾಗಿರುವುದರಿಂದ ಇದನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿ. ಇದು ಮನೆಯಲ್ಲಿ ಇದ್ದಲ್ಲಿ ಸಂತೋಷ, ಸಮೃದ್ಧಿಯನ್ನು ಕಾಪಾಡುತ್ತದೆ. ಮನೆಯಲ್ಲಿ ಆರ್ಥಿಕ ಸ್ಥಿತಿ ಹದಗೆಡುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಮನೆಯಲ್ಲಿ ಅಕ್ವೇರಿಯಂ ತಂದು ಇಡಬಹುದು.
  3. ಹೋಳಿ ಹಬ್ಬದಂದು ನಿಮ್ಮ ಮನೆಗೆ ಬಿದಿರಿನ ಸಸ್ಯವನ್ನು ತನ್ನಿ. ಇದು ನಿಮ್ಮ ಮನೆಗೆ ಅದೃಷ್ಟ ತರುತ್ತದೆ. ಇದು ಕುಟುಂಬ ಸದಸ್ಯರ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ.
  4. ಜನರಿಗೆ ಆಗಾಗ ಹಣದ ಕೊರತೆ ಕಾಡಬಹುದು. ಆದ್ದರಿಂದ ಹೋಳಿ ಹಬ್ಬದ ದಿನ ಬೆಳ್ಳಿಯ ನಾಣ್ಯವನ್ನು ಖರೀದಿಸಿ ಮನೆಗೆ ತನ್ನಿ. ಈ ರೀತಿ ಮಾಡುವುದರಿಂದ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ಬೆಳ್ಳಿಯ ನಾಣ್ಯವನ್ನು ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿ, ಅದರ ಮೇಲೆ ಅರಿಶಿನವನ್ನು ಹಚ್ಚಿ ಒಳ್ಳೆಯ ಜಗದಲ್ಲಿ ಇರಿಸಿ.
  5. ಹಿಂದೂ ಧರ್ಮದಲ್ಲಿ ಆಮೆಯನ್ನು ಬಹಳ ಪವಿತ್ರ ಜೀವಿ ಎಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹೋಳಿ ಹಬ್ಬದ ದಿನ ಲೋಹದ ಆಮೆಯನ್ನು ಖರೀದಿಸಿ ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಪೂಜಾ ಸ್ಥಳದಲ್ಲಿ ಇದನ್ನು ಇಡುವುದು ಒಳ್ಳೆಯದು. ಈ ಪರಿಹಾರದಿಂದ, ಲಕ್ಷ್ಮೀ ದೇವಿಯು ಸಂತೋಷಪಡುತ್ತಾಳೆ ಮತ್ತು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಯಾಗುತ್ತಾಳೆ.
  6. ಮನೆಯಲ್ಲಿ ಡ್ರ್ಯಾಗನ್ ಪ್ರತಿಮೆ ಅಥವಾ ಚಿತ್ರವನ್ನು ಇಡುವುದು ಸಹ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಮನೆಯ ಸದಸ್ಯರಿಗೆ ದುಷ್ಟ ಶಕ್ತಿಗಳಿಂದ ತೊಂದರೆಯಾಗದಂತೆ ಮತ್ತು ದೃಷ್ಟಿ ದೋಷದಿಂದ ಬಳಲುವುದನ್ನು ತಪ್ಪಿಸುತ್ತದೆ. ಜೊತೆಗೆ ಲಕ್ಷ್ಮೀ ದೇವಿ ಮನೆಯಲ್ಲಿ ವಾಸಿಸುತ್ತಾಳೆ ಎನ್ನುವ ನಂಬಿಕೆ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ