Holi 2024: ಹೋಳಿ ದಿನ ಬಿಳಿ ಬಟ್ಟೆಗಳನ್ನು ಏಕೆ ಧರಿಸಬೇಕು? ಇಲ್ಲಿದೆ ಸೂಕ್ತ ಕಾರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2024 | 10:14 AM

 ಇನ್ನೇನು ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಬಣ್ಣಗಳ ಈ ಹಬ್ಬವನ್ನು ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಹೋಳಿಯಲ್ಲಿ ಬಣ್ಣಗಳೊಂದಿಗೆ ಆಡಲು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ, ಹಾಗಾದರೆ ಓಕುಳಿ ಆಡುವಾಗ ಏಕೆ ಬಿಳಿ ಬಣ್ಣದ ಬಟ್ಟೆಗಳನ್ನೇ ತೊಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Holi 2024: ಹೋಳಿ ದಿನ ಬಿಳಿ ಬಟ್ಟೆಗಳನ್ನು ಏಕೆ ಧರಿಸಬೇಕು? ಇಲ್ಲಿದೆ ಸೂಕ್ತ ಕಾರಣ
ಸಾಂದರ್ಭಿಕ ಚಿತ್ರ
Follow us on

ಭಾರತದ ದೊಡ್ಡ ಹಬ್ಬಗಳಲ್ಲಿ ಹೋಳಿಯೂ ಒಂದಾಗಿದೆ. ಇನ್ನೇನು ಹೋಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿವೆ. ಬಣ್ಣಗಳ ಈ ಹಬ್ಬವನ್ನು ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಈ ಓಕುಳಿ ಹಬ್ಬವು ಬಣ್ಣ, ಸಂತೋಷ, ಉತ್ಸಾಹಗಳಿಂದ ಕೂಡಿರುತ್ತದೆ. ಅಲ್ಲದೆ ಹೋಳಿ ಹಬ್ಬವನ್ನು ಪರಸ್ಪರ ಪ್ರೀತಿ ಹಂಚುವ ಹಬ್ಬವೆಂದು ಪರಿಗಣಿಸಲಾಗುತ್ತದೆ. ಹೋಳಿ ವಿವಿಧ ಬಣ್ಣಗಳ ಹಬ್ಬವಾಗಿದ್ದರೂ ಕೂಡ ಓಕುಳಿ ಆಡುವಾಗ ಬಿಳಿ ಬಟ್ಟೆಗಳನ್ನು ಧರಿಸುವ ಸಂಪ್ರದಾಯವಿದೆ. ಆದರೆ ಈ ದಿನ ಇದೇ ಬಣ್ಣದ ಬಟ್ಟೆ ಧರಿಸಬೇಕು ಎಂಬುದರ ಹಿಂದೆ ಕೆಲವು ಕಾರಣಗಳಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೋಳಿ ಹಬ್ಬದಂದು ನಾವು ಬಿಳಿ ಬಟ್ಟೆಗಳನ್ನು ಏಕೆ ಧರಿಸಬೇಕು?

ಹೋಳಿ ಅಥವಾ ಓಕುಳಿ ಆಡುವಾಗ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಮುಖ್ಯ ಕಾರಣವೆಂದರೆ ಬಿಳಿ ಬಟ್ಟೆಗಳ ಮೇಲೆ ಯಾವುದೇ ಬಣ್ಣ ಬಿದ್ದರು ಕೂಡ ತುಂಬಾ ಸುಂದರವಾಗಿ ಕಾಣುತ್ತದೆ. ಅದು ಬಿಳಿಯ ಬಣ್ಣದ ಜೊತೆಗೆ ಬಹುಬೇಗ ಹೊಂದಿಕೊಳ್ಳುತ್ತದೆ. ಇದು ಎಲ್ಲಾ ಬಣ್ಣಗಳಲ್ಲಿಯೂ ಆಗುವುದಿಲ್ಲ. ಇದರಿಂದಾಗಿ ನಿಮ್ಮ ಬಟ್ಟೆಯ ಜೊತೆಗೆ ನೀವು ಕೂಡ ಸುಂದರವಾಗಿ ಕಾಣುತ್ತೀರಿ. ಅದೂ ಅಲ್ಲದೆ ನೀವು ಎಷ್ಟು ಹೋಳಿ ಆಡಿದ್ದೀರಾ ಎಂದು ಕೂಡ ಈ ಬಣ್ಣ ಹೇಳುತ್ತವೆ. ಏಕೆಂದರೆ ಜಾಸ್ತಿ ಓಕುಳಿ ಆಡಿದ್ದರೆ ಬಿಳಿ ಬಟ್ಟೆಗಳು ಸಂಪೂರ್ಣವಾಗಿ ವಿಭಿನ್ನ ಬಣ್ಣಗಳಿಂದ ಕೂಡಿರುತ್ತವೆ.

ತಂಪಿನ ಭಾವನೆಯನ್ನು ನೀಡುತ್ತದೆ

ಹೋಳಿ ಹಬ್ಬವು ಬೇಸಿಗೆ ಕಾಲದಲ್ಲಿ ಬರುವುದರಿಂದ ಬಿಳಿ ಬಣ್ಣದ ಬಟ್ಟೆಗಳು ಪರಿಸರದಿಂದ ಕಡಿಮೆ ಶಾಖವನ್ನು ಹೀರಿಕೊಳ್ಳುತ್ತದೆ, ಹಾಗಾಗಿ ಹೆಚ್ಚು ಬಿಸಿಯ ಅನುಭವ ಆಗುವುದಿಲ್ಲ. ಈ ಹಬ್ಬದಂದು ದಿನ ಪೂರ್ತಿ ಬಿಸಿಲಿನಲ್ಲಿ ಬಣ್ಣಗಳೊಂದಿಗೆ ಆಟವಾಡಿದರೂ ಕೂಡ ನಿಮಗೆ ಶಾಖದ ಅನುಭವ ಆಗುವುದಿಲ್ಲ. ಹಾಗಾಗಿ ಹಿಂದಿನಿಂದಲೂ ಬಿಳಿ ಬಣ್ಣದ ಬಟ್ಟೆಯನ್ನು ಹೋಳಿ ಹಬ್ಬದ ದಿನ ತಪ್ಪದೆ ಧರಿಸುವುದು ಸೂಕ್ತ ಎನ್ನಲಾಗುತ್ತದೆ.

ಇದನ್ನೂ ಓದಿ: ಈ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬೇಡಿ!

ಶಾಂತಿಯ ಸಂಕೇತ

ಹೋಳಿ ಪ್ರೀತಿ ಹಂಚುವ ಹಬ್ಬವಾಗಿದೆ. ಹೋಳಿಯ ದಿನ ಜನರು ಪರಸ್ಪರ ದ್ವೇಷವನ್ನು ಮರೆತು ಪ್ರೀತಿಯಿಂದ, ಸಂತೋಷ ಹಂಚುತ್ತಾ ಈ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಾರೆ. ಅಲ್ಲದೆ ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಜನರು ಹೋಳಿ ಆಡುವಾಗ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.

ಹೋಳಿ ಹಬ್ಬದಂದು ಬಿಳಿ ಬಟ್ಟೆಗಳನ್ನು ಧರಿಸುವುದರ ಹಿಂದೆ ಮತ್ತೊಂದು ಕಾರಣವಿದೆ. ಬಿಳಿ ಬಣ್ಣವನ್ನು ಸಕಾರಾತ್ಮಕ ಶಕ್ತಿಯನ್ನು ಬೇಗ ಸೆಳೆಯುವ ಮತ್ತು ಶಾಂತಿಯ ಸಂದೇಶವನ್ನು ನೀಡುವ ಬಣ್ಣವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಹೋಳಿ ಹಬ್ಬವು ಕೂಡ ಶಾಂತಿಯ ಸಂದೇಶವನ್ನು ನೀಡುವುದರಿಂದ ಈ ಹಬ್ಬದಲ್ಲಿ ತಪ್ಪದೆ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವ ಪ್ರವೃತ್ತಿ ಇದೆ. ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು, ಸಂಪ್ರದಾಯದ ಹೊರತಾಗಿ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯ ಆಯ್ಕೆಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 9:52 am, Wed, 20 March 24