ಹಿಂದೂಳಿಗೆ ಕಾಗೆ ವಿಶೇಷ ಪ್ರಾಣಿ! ಅದು ಶನೀಶ್ವರನಿಗೆ ವಾಹನವಾಗಿ ಯಾಕೆ ಮತ್ತು ಹೇಗೆ ಬದಲಾಯಿತು ಗೊತ್ತಾ?
ಒಂದು ದಿನ ಕಾಗೆಯು ಶನಿದೇವನನ್ನು ತನ್ನ ಜೊತೆಗೆ ಕರೆದುಕೊಂಡು ಕಾಗೆಲೋಕವನ್ನು ತಲುಪಿತು. ಕಾಗೆಯ ತಾಯಿ ಶನೀಶ್ವರನನ್ನು ತನ್ನ ಮಗನೆಂದು ಸಂಬೋಧಿಸಿ ಪ್ರೀತಿ ವಾತ್ಸಲ್ಯವನ್ನು ತೋರಿದಳು. ಆಗ ಕಾಗೆಯು ಶನೀಶ್ವರನನ್ನು ಸಹ ತಮ್ಮ ಜೊತೆಯಲ್ಲೇ ಉಳಿಸಿಕೊಳ್ಳುವಂತೆ ತಾಯಿಯನ್ನು ಕೇಳುತ್ತಾನೆ.
ಹಿಂದೂ ಧರ್ಮದಲ್ಲಿ ಗ್ರಹಗಳಿಗೆ ವಿಶೇಷ ಸ್ಥಾನವಿದೆ. ಒಂಬತ್ತು ಗ್ರಹಗಳಲ್ಲಿ, ಸೂರ್ಯನ ಮಗ ಶನೀಶ್ವರನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನೀಶ್ವರನು ಮಹಾ ಶಿವಭಕ್ತ. ಕರ್ಮವನ್ನು ಕೊಡುವವನಾದ ಶನಿದೇವನು ಒಬ್ಬ ವ್ಯಕ್ತಿಯು ಮಾಡುವ ಕೆಲಸಕ್ಕೆ ಸೂಕ್ತ ಫಲಿತಾಂಶವನ್ನು ನೀಡುತ್ತಾನೆ. ಒಳ್ಳೆಯ ಕೆಲಸವನ್ನು ಮಾಡುವ ವ್ಯಕ್ತಿಗೆ ಅವನು ತನ್ನ ಅನುಗ್ರಹವನ್ನು ನೀಡುತ್ತಾನೆ. ಕೆಟ್ಟ ಕೆಲಸಗಳನ್ನು ಮಾಡಿದರೆ, ಅವನು ನಿಮಗೆ ತಕ್ಕ ಶಿಕ್ಷೆಯನ್ನು ನೀಡುತ್ತಾನೆ. ಶನೀಶ್ವರ ಸಾಮಾನ್ಯವಾಗಿ ಕೈಯಲ್ಲಿ ಖಡ್ಗ ಮತ್ತು ಬಿಲ್ಲನ್ನು ಧರಿಸಿರುವುದನ್ನು ಕಾಣಬಹುದು. ಶಿಕ್ಷೆ ಮತ್ತು ನ್ಯಾಯಗಳನ್ನು ನೀಡುವ ಸಾಮರ್ಥ್ಯವನ್ನು ಸೂಚಿಸಲು ಇವುಗಳನ್ನು ಪರಿಗಣಿಸಲಾಗುತ್ತದೆ (Crow).
ಆದರೆ ಶನೀಶ್ವರ ಕಾಗೆಯ ಮೇಲೆ ಸವಾರಿ ಮಾಡುವುದನ್ನು ಕಾಣಬಹುದು. ಆದರೆ ಶನಿದೇವನಿಗೆ ಒಂದಲ್ಲ 9 ವಾಹನಗಳಿವೆ. ಪ್ರತಿಯೊಂದು ವಾಹನಕ್ಕೂ ಒಂದೊಂದು ವಿಶೇಷತೆ ಇರುತ್ತದೆ.
ಪುರಾಣಗಳ ಪ್ರಕಾರ, ಶನಿಯು ಶಿವನ ವಾಹನವಾಗಿರುವ ಆಧ್ಯಾತ್ಮಿಕ ಜೀವಿಗಳಲ್ಲಿ ಒಂದು. ಅದು ಅಪಾಯವನ್ನು ಸುಲಭವಾಗಿ ಗುರುತಿಸುವ ಸಾಮರ್ಥ್ಯ ಹೊಂದಿದೆ. ತಾನು ಎಲ್ಲಿಯೇ ವಾಸಿಸುತ್ತಿದ್ದರೂ ತನ್ನ ಸುತ್ತಮುತ್ತಲಿನ ಪ್ರದೇಶ ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ ಕಾಗೆ. ಅದು ಸಂತೋಷವನ್ನು ಹರಡುತ್ತದೆ. ಶನಿದೇವನ ಕೃಪೆಯಿಂದಾಗಿ ಕಾಗೆಗಳು ಎಂದಿಗೂ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂಬ ನಂಬಿಕೆಯೂ ಇದೆ.
ಕಾಗೆ ಏಕೆ-ಹೇಗೆ ಶನಿ ವಾಹನವಾಯಿತು? ಹಿಂದೂ ಪುರಾಣಗಳ ಪ್ರಕಾರ ಸೂರ್ಯನ ಹೆಂಡತಿ ಸಂಧ್ಯಾ. ಸೂರ್ಯನ ಬಿಸಿಲಿನ ತಾಪವನ್ನು ಸಹಿಸಿಕೊಳ್ಳಲು ಆಗದೆ, ನೆರಳನ್ನು ಸೃಷ್ಟಿಸಿ ಅದಕ್ಕೆ ಛಾಯಾ ಎಂಬ ಹೆಸರಿನಲ್ಲಿ ಸೂರ್ಯನ ಸೇವೆಗೆ ಬಿಟ್ಟು ತಪಸ್ಸು ಮಾಡಲು ಹೊರಟಳು. ಸಂಧ್ಯಾ ತನ್ನ ಇಬ್ಬರು ಮಕ್ಕಳಾದ ಯಮ ಮತ್ತು ಯಮುನಾ ದೇವಿಯನ್ನು ಛಾಯಾಗೆ ಒಪ್ಪಿಸುತ್ತಾಳೆ. ಸಂಧ್ಯಾ ತನ್ನ ತಪಸ್ಸು ಮುಗಿಸುವ ಸಾಯಂಕಾಲಕ್ಕೆ (ಸಂಧ್ಯಾ ಕಾಲ) ಛಾಯಾ ಮತ್ತು ಸೂರ್ಯನಿಗೆ ಶನೀಶ್ವರ ಎಂಬ ಮಗು ಜನಿಸುತ್ತದೆ. ಈ ವಿಷಯ ತಿಳಿದ ಸಂಧ್ಯಾಗೆ ತುಂಬಾ ಕೋಪ ಬರುತ್ತದೆ. ಸೂರ್ಯದೇವನಿಗೆ ಅಸಲಿ ವಿಷಯ ತಿಳಿದಾಗ ಆತ ಛಾಯಾ ಮತ್ತು ಶನೀಶ್ವರ ಇಬ್ಬರನ್ನೂ ತೊರೆದುಬಿಡುತ್ತಾನೆ.
ಇತ್ತ ಸಂಧ್ಯಾ, ಸೂರ್ಯನ ವರ್ತನೆಯ ಬಗ್ಗೆ ಯೋಚಿಸುತ್ತಾ, ಛಾಯಾ ತನ್ನ ಪುತ್ರ ಶನಿಯೊಂದಿಗೆ ಕಾಡಿಗೆ ಹೋದಳು. ಛಾಯಾ ಮತ್ತು ಶನೀಶ್ವರ ಕಾಡಿನಲ್ಲಿ ನೆಲೆಸಿರುವ ವಿಷಯ ತಿಳಿದ ಸೂರ್ಯ ದೇವ ಅವರಿಬ್ಬರನ್ನೂ ಕೊಲ್ಲಲು ಇಡೀ ಕಾಡಿಗೆ ಬೆಂಕಿ ಹಾಕಿದನು. ಆ ನಂತರ ಛಾಯಾ, ನೆರಳಾಗಿ ಪರಿವರ್ತನೆಗೊಂಡು ಬೆಂಕಿಯಿಂದ ಪಾರಾದಳು. ಆದರೆ ಶನೀಶ್ವರನು ಬೆಂಕಿಯಲ್ಲಿ ಸಿಲುಕಿದ್ದನು. ಈ ವೇಳೆ ಕಾಗೆಯೊಂದು ಆ ಜ್ವಾಲೆಯಿಂದ ಶನೀಶ್ವರನನ್ನು ಹೊರತೆಗೆದಿತ್ತು. ಅಂದಿನಿಂದ ಕಾಗೆಯು ಶನೀಶ್ವರನಿಗೆ ಪ್ರಿಯವಾಯಿತು. ಆ ಬಳಿಕ ಕಾಗೆಯನ್ನು ವಾಹನವನ್ನಾಗಿ ಮಾಡಿಕೊಂಡರು ಅದಾದ ಮೇಲೆ ಶನೀಶ್ವರನ ಜೊತೆಗೂಡಿ ಛಾಯಾ ಅರಣ್ಯದಲ್ಲಿಯೇ ವಾಸ ಮಾಡುತ್ತಾ, ಅಲ್ಲಿಯೇ ಸಾವನ್ನಪ್ಪಿದರು.
ಒಂದು ದಿನ ಕಾಗೆಯು ಶನಿದೇವನನ್ನು ತನ್ನ ಜೊತೆಗೆ ಕರೆದುಕೊಂಡು ಕಾಗೆಲೋಕವನ್ನು ತಲುಪಿತು. ಕಾಗೆಯ ತಾಯಿ ಶನೀಶ್ವರನನ್ನು ತನ್ನ ಮಗನೆಂದು ಸಂಬೋಧಿಸಿ ಪ್ರೀತಿ ವಾತ್ಸಲ್ಯವನ್ನು ತೋರಿದಳು. ಆಗ ಕಾಗೆಯು ಶನೀಶ್ವರನನ್ನು ಸಹ ತಮ್ಮ ಜೊತೆಯಲ್ಲೇ ಉಳಿಸಿಕೊಳ್ಳುವಂತೆ ತಾಯಿಯನ್ನು ಕೇಳುತ್ತಾನೆ. ಇದರಿಂದಾಗಿ ಕಾಗೆಯ ತಾಯಿಯು ಶನೀಶ್ವರನನ್ನು ತನ್ನ ಜೊತೆಯೇ ವಾಸಿಸುವಂತೆ ಹೇಳಿ, ಮಗನ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ನಂತರ ಶನಿದೇವನು ಕಾಗೆಯನ್ನೇ ತನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತಾನೆ.
ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..
ಗಮನಿಸಿ: ಜನರ ಸಾಮಾನ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಮೇಲೆ ತಿಳಿಸಿದ ಅಂಶಗಳನ್ನು ನೀಡಲಾಗಿದೆ.